/newsfirstlive-kannada/media/post_attachments/wp-content/uploads/2024/11/deepika-das.jpg)
ಬಿಗ್ ಬಾಸ್ ಬೆಡಗಿ, ನಟಿ ದೀಪಿಕಾ ದಾಸ್ ಮದುವೆ ನಂತರ ಹೆಚ್ಚಾಗಿ ವಿದೇಶ ಪ್ರವಾಸದಲ್ಲಿದ್ದಾರೆ. ಟ್ರಿಪ್ ಜೊತೆ ಜೊತೆಗೆ ಸಿನಿಮಾ ಶೂಟಿಂಗ್ನಲ್ಲೂ ದೀಪ್ಸ್ ಸಕ್ರಿಯರಾಗಿದ್ದಾರೆ. ಇತ್ತಿಚೀಗೆ ಇಂಗ್ಲೆಂಡ್‌ನಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ದಂಪತಿ ಸಮೇತ ದೀಪಿಕಾ ದಾಸ್ ಭಾಗಿಯಾಗಿದ್ದರು.
ಇದನ್ನೂ ಓದಿ: ದೀಪಿಕಾ ದಾಸ್ ಹನಿಮೂನ್ ಟ್ರಿಪ್; ಈ ಬಾರಿ ಬಿಗ್ಬಾಸ್ ಬೆಡಗಿ ಹೋಗಿದ್ದು ಎಲ್ಲಿಗೆ ಗೊತ್ತಾ?
ದೀಪಿಕಾ ಅಂದ್ರೆನೆ ಟ್ರೆಂಡ್ ಸೆಟರ್. ಸದಾ ಹೊಸದಕ್ಕೆ ತುಡಿಯುವ ಚೆಲುವಿ. ಯಾವಾಗಲೂ ವಿಭಿನ್ನವಾಗಿ ಕಾಣಿಸಿಕೊಳ್ಳೋಕೆ ಇಷ್ಟ ಪಡ್ತಾರೆ. ಪ್ರತಿ ಕ್ಷಣವನ್ನು ಸೆಲೆಬ್ರೆಟ್ ಮಾಡೋಕೆ ಇಷ್ಟ ಪಡುವ ವ್ಯಕ್ತಿತ್ವದವರು.
ಹ್ಯಾಲೋವೀನ್ ಲುಕ್ನಲ್ಲಿರೋ ಒಂದಿಷ್ಟು ಫೋಟೋಗಳನ್ನ ದೀಪಿಕಾ ದಾಸ್ ಶೇರ್ ಮಾಡಿಕೊಂಡಿದ್ದಾರೆ. ಭೂತದ ವೇಶದಲ್ಲೂ ಬ್ಯೂಟಿಫುಲ್ ಆಗಿ ಕಾಣೋ ಏಕೈಕ ಬ್ಯೂಟಿ ನೀವೂ ಅಂತಿದ್ದಾರೆ ಫ್ಯಾನ್ಸ್.
ಏನಿದು ಹ್ಯಾಲೇವೀನ್?
ಹ್ಯಾಲೋವೀನ್ ಅಂದ್ರೆ ದುಷ್ಟಶಕ್ತಿಗಳನ್ನ ಆರಾಧಿಸೋ ಒಂದು ಪದ್ಧತಿ. ಭಾರತದಲ್ಲಿ ನಾವು ನರಕ ಚತುರ್ದಶಿ ಆಚರಿಸಿದಂತೆ, ವಿದೇಶದಲ್ಲಿ ಭೂತ ಚತುರ್ದಶಿ ಆಚರಿಸುತ್ತಾರೆ. ಭೂತಗಳ ರೀತಿ ರೆಡಿಯಾಗಿ ಪಾರ್ಟಿ ಮಾಡುತ್ತಾರೆ.
ಸೀರಿಯಲ್ನಿಂದ ದೂರ ಆಗಿದ್ರು ಸೋಷಿಯಲ್ ಮೀಡಿಯಾದದಲ್ಲಿ ಸದಾ ಆ್ಯಕ್ಟಿವ್ ಆಗಿದ್ದಾರೆ ದೀಪಿಕಾ. ಈ ಮೂಲಕ ಫ್ಯಾನ್ಸ್ ಜೊತೆ ಟಚ್ಲ್ಲಿ ಇದ್ದಾರೆ ನಟಿ. ಪ್ರತಿಯೊಂದು ವಿಷಯದ ಬಗ್ಗೆ ಅಪ್ಡೇಟ್ ನೀಡುತ್ತಾ ಇರ್ತಾರೆ. ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ದೀಪಿಕಾ ದಾಸ್ ಆದಷ್ಟು ಬೇಗ ತೆರೆಮೇಲೆ ಬನ್ನಿ ಅಂತಿದ್ದಾರೆ ವೀಕ್ಷಕರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ