ದಿಢೀರ್​ ಪೊಲೀಸ್ ಠಾಣೆ ಮೆಟ್ಟಿಲೇರಿದ ಸ್ಟಾರ್​ ನಟಿ ಗೌತಮಿ; ಕಾರಣವೇನು?

author-image
Veena Gangani
Updated On
ದಿಢೀರ್​ ಪೊಲೀಸ್ ಠಾಣೆ ಮೆಟ್ಟಿಲೇರಿದ ಸ್ಟಾರ್​ ನಟಿ ಗೌತಮಿ; ಕಾರಣವೇನು?
Advertisment
  • ಅದ್ಭುತ ನಟನೆಯ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದ ನಟಿ
  • 80 ಮತ್ತು 90ರ ದಶಕಗಳಲ್ಲಿ ಸ್ಟಾರ್ ನಟಿಯಾಗಿದ್ದ ಗೌತಮಿ ತಡಿಮಲ್ಲ
  • ಹಿರಿಯ ನಟಿ ಗೌತಮಿ ತಡಿಮಲ್ಲ ಪೊಲೀಸ್ ಠಾಣೆ ಮೆಟ್ಟಿಲೇರಿದ್ದೇಕೆ?

ಬಹುಭಷಾ ಸ್ಟಾರ್ ನಟಿ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಅದ್ಭುತ ನಟನೆಯ ಮೂಲಕ ಜನಪ್ರಿಯತೆ ಪಡೆದಕೊಂಡಿರೋ ನಟಿ ಗೌತಮಿ ದಿಢೀರ್​ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಇದನ್ನೂ ಓದಿ: ಅಪ್ಪನಾಗೋ ಖುಷಿಯಲ್ಲಿರೋ ವಾಸುಕಿ ವೈಭವ್​ಗೆ ಕ್ಯೂಟ್ ಸರ್​ಪ್ರೈಸ್​ ಕೊಟ್ಟ ಅರುಣ್​ ಸಾಗರ್ ದಂಪತಿ

ಹೌದು, ಹಿರಿಯ ನಟಿ ಗೌತಮಿ ತಡಿಮಲ್ಲ ಅವರಿಗೆ ಜೀವ ಬೆದರಿಕೆ ಬಂದಿದ್ದರಿಂದ ಪೊಲೀಸರಿಗೆ ರಕ್ಷಣೆ ಕೋರಿ ದೂರು ದಾಖಲಿಸಿದ್ದಾರೆ. ಚೆನ್ನೈ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಖುದ್ದು ಭೇಟಿ ನೀಡಿ ದೂರು ಸಲ್ಲಿಸಿರುವ ಅವರು, ಉದ್ಯಮಿಯೊಬ್ಬರು ತಮ್ಮ ಆಸ್ತಿಯನ್ನು ಕಬಳಿಸಲು ಯತ್ನಿಸುತ್ತಿದ್ದು, ಅವರಿಂದ ತಮಗೆ ಮತ್ತು ತಮ್ಮ ಮಗಳಿಗೆ ಅಪಾಯವಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

publive-image

ನಟಿ ಗೌತಮಿ ಅವರು ಸಿ. ಅಳಗಪ್ಪನ್ ಎಂಬ ವ್ಯಕ್ತಿಯ ಹೆಸರನ್ನು ಉಲ್ಲೇಖಿಸಿದ್ದಾರೆ. ಅಳಗಪ್ಪನ್ ಮತ್ತು ಅವರ ಕುಟುಂಬದವರು ಕಳೆದ ಹಲವು ವರ್ಷಗಳಿಂದ ತಮಗೆ ಪರಿಚಿತರಾಗಿದ್ದು, ಅವರ ಮೂಲಕವೇ ನಾನುಕೆಲವು ಆಸ್ತಿಗಳನ್ನು ಖರೀದಿಸಿದ್ದರು ಎಂದು ದೂರಿನಲ್ಲಿ ಬರೆದುಕೊಂಡಿದ್ದಾರೆ. ಆದರೆ, ಇತ್ತೀಚೆಗೆ ಅಳಗಪ್ಪನ್ ಅವರು ತಮ್ಮನ್ನು ವಂಚಿಸಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಆಸ್ತಿಗಳನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಗೌತಮಿ ಆರೋಪಿಸಿದ್ದಾರೆ.

publive-image

ಇನ್ನೂ, ನಟಿ ಗೌತಮಿ ಅವರ ದೂರನ್ನು ದಾಖಲಿಸಿಕೊಂಡ ಚೆನ್ನೈ ಪೊಲೀಸರು ಸದ್ಯ ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಅಲ್ಲದೇ ನಟಿ ಆರೋಪ ಮಾಡಿರೋ ಅಳಗಪ್ಪನ್ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ನಟಿ ಗೌತಮಿ ಅವರು 80 ಮತ್ತು 90ರ ದಶಕಗಳಲ್ಲಿ ತಮಿಳು, ತೆಲುಗು, ಮಲಯಾಳಂ, ಹಿಂದಿ ಮತ್ತು ಕನ್ನಡ ಚಿತ್ರಗಳಲ್ಲಿ ಸಕ್ರಿಯರಾಗಿದ್ದರು. ಕನ್ನಡದಲ್ಲಿ ಚೆಲುವ ಮತ್ತು ನಿಗೂಢ ರಹಸ್ಯ ಸಿನಿಮಾಗಳಲ್ಲಿ ನಟಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment