/newsfirstlive-kannada/media/post_attachments/wp-content/uploads/2024/10/bigg-boss10-1.jpg)
ಕನ್ನಡದ ಸೀರಿಯಲ್ ನಟಿ ಗೌತಮಿ ಜಾಧವ್ ಬಿಗ್ ಬಾಸ್ ಮನೆಯಲ್ಲಿ ಒಂದು ರೇಂಜ್ಗೆ ಸೌಂಡ್ ಮಾಡುತ್ತಿದ್ದಾರೆ. ಇನ್ನೂ ಅವರ ಪರ್ಫಾಮನ್ಸ್ ಖಡಕ್ ಆಗಿ ಇರಬೇಕು ಅಂತ ವೀಕ್ಷಕರು ನಿರೀಕ್ಷಿಸುತ್ತಿರೋದು ಸತ್ಯ. ಈ ನಿರೀಕ್ಷೆ ಹಿಂದೆನೂ ಒಂದು ಕಾರಣ ಇದೆ. ಅದೇ ಅವರ ಸತ್ಯ ಸೀರಿಯಲ್.
ಇದನ್ನೂ ಓದಿ:ದೀಪಾವಳಿಗೆ ಸಿಹಿ ತಿಂಡಿ ಖರೀದಿಸುವ ಮುನ್ನ ಇರಲಿ ಎಚ್ಚರ! ಹಬ್ಬದ ಸಂಭ್ರಮವೇ ಕಿತ್ತುಕೊಂಡೀತು ಹುಷಾರ್..!
ವೀಕ್ಷಕರು ಸುಮಾರು 3 ವರ್ಷಗಳ ಕಾಲ ಗೌತಮಿ ಅವರನ್ನ ಸತ್ಯನ್ನೋ ಖಡಕ್ ಪಾತ್ರದಲ್ಲಿಯೇ ನೋಡಿದ್ದಾರೆ. ಯಾವುದೇ ಶೋಗೆ ಬಂದ್ರೂ ಅದೇ ಪಾತ್ರದಲ್ಲಿಯೇ ಎಂಟ್ರಿಯಾಗ್ತಿದ್ರು. ಅಲ್ಲೊಂದು ಇಲ್ಲೊಂದು ಸಂದರ್ಶನವೊಂದರಲ್ಲಿ ಬಿಟ್ಟರೇ ಗೌತಮಿ ನಿಜ ಜೀವನಲ್ಲಿ ಹೇಗಿರ್ತಾರೆ ಅನ್ನೋದು ವೀಕ್ಷಕರಿಗೆ ಗೊತ್ತೇ ಇರಲಿಲ್ಲ.
ಇದೇ ಕಾರಣಕ್ಕೆ ಅವರು ಬಿಗ್ ಬಾಸ್ನಿಂದ ಕರೆ ಬಂದಗಾ ಹೆಚ್ಚು ಯೋಚನೆ ಮಾಡದೇ ಒಪ್ಪಿಕೊಂಡಿದ್ದು. ಈ ಬಗ್ಗೆ ಅವರೇ ಶೋಗೆ ಬಂದಾಗ ಹೇಳಿಕೊಂಡಿದ್ದಾರೆ. ಇದೇಲ್ಲಾ ನಿಮಗೆ ಗೊತ್ತೇ ಇದೆ. ಆದ್ರೇ ಸತ್ಯ ಧಾರಾವಾಹಿ ಮಾಡೋವಾಗ ಬಿಗ್ಬಾಸ್ ಕಡೆಯಿಂದ ಕರೆ ಬಂದಿತ್ತಂತೆ. 2 ತಿಂಗಳಿಂದ ಯಾರಿಗೂ ಹೇಳದೇ ಏನ್ ಮೇಡಂ ನೆಕ್ಸ್ಟ್ ಪ್ಲ್ಯಾನ್ ಅಂತ ಕೇಳಿದವ್ರಿಗೆ ನಗುವಿನಿಂದ ಮಾತು ಮರಿಸ್ತಿದ್ರಂತೆ.
ಸತ್ಯ ತಂಡದೊಂದಿಗೂ ಗೌಪ್ಯತೆ ಕಾಪಾಡಿಕೊಂಡು ಬಂದಿದ್ರು. ಬಿಗ್ ಬಾಸ್ ಮನೆಗೆ ಎಂಟ್ರಿ ಆಗೋಕು ಹಿಂದಿನ ದಿನ ಜೂಮ್ ವಿಡಿಯೋ ಕಾಲ್ ಮೂಲಕ ಸತ್ಯದಲ್ಲಿದ್ದ ಕ್ಲೂಸ್ ಫ್ರೆಂಡ್ಸ್ಗೆ ವಿಷ್ಯ ತಿಳಿಸಿದ್ದರಂತೆ. ಒಟ್ಟಿನಲ್ಲಿ ಸತ್ಯ ಟೀಮ್ ತುಂಬಾ ಆತ್ಮೀಯವಾಗಿದೆ. ಸೀರಿಯಲ್ ಮುಗಿದ ಮೇಲೆ ಆದ್ರೂ ಅವರ ಬಾಂಡಿಂಗ್ ಹಾಗೇ ಇರೋದು ಅಭಿಮಾನಿಗಳಿಗೆ ಖುಷಿ ನೀಡಿದೆ. ಅಂದ್ಹಾಗೆ, ಈ ವಿಡಿಯೋನ್ನು ಗೌತಮಿ ಪತಿ ಅಭಿಷೇಕ್ ಅವರು ಗೌತಮಿ ಸೋಷಿಯಲ್ ಮೀಡಿಯಾ ಪೇಜ್ನಲ್ಲಿ ಶೇರ್ ಮಾಡಿದ್ದಾರೆ. ಸದ್ಯ ಒಂದೇ ಸೀರಿಯಲ್ ಮೂಲಕ ಸಖತ್ ಫೇಮಸ್ ಆಗಿದ್ದಾರೆ ನಟಿ ಗೌತಮಿ ಜಾಧವ್.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ