ಗುಡ್​ನ್ಯೂಸ್​ ಕೊಡ್ತಾರಾ ಹರಿಪ್ರಿಯಾ ವಸಿಷ್ಠ ಜೋಡಿ; ಬಿಗ್​ಬಾಸ್​​ಗೆ ಹೋಗದೇ ಇರೋದಕ್ಕೆ ಇದೇ ಕಾರಣ!

author-image
Veena Gangani
Updated On
ಹರಿಪ್ರಿಯಾ ಜೊತೆಗೆ ಸ್ಪೆಷಲ್ ಬರ್ತ್ ಡೇ ಸೆಲೆಬ್ರೆಟ್ ಮಾಡಿಕೊಂಡ ವಸಿಷ್ಠ ಸಿಂಹ; ಬ್ಯೂಟಿಫುಲ್​ ಫೋಟೋಸ್ ಇಲ್ಲಿವೆ
Advertisment
  • ಸ್ಯಾಂಡಲ್​ವುಡ್​ ಚಿಟ್ಟೆ ಅಂತಲೇ ಪಡೆದಿರೋ ನಟ ವಸಿಷ್ಠ ಸಿಂಹ
  • ಬಣ್ಣ, ಬಣ್ಣದ ಲೋಕದಲ್ಲಿ ಪ್ರಯಾಣ ಮಾಡುತ್ತಿರೋ ಲವ್ ಬರ್ಡ್ಸ್‌
  • ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ ಈ ಸ್ಟಾರ್​ ಜೋಡಿ

ಸ್ಯಾಂಡಲ್​ವುಡ್​ ಚಿಟ್ಟೆ ವಸಿಷ್ಠ ಸಿಂಹ ಹಾಗೂ ಖ್ಯಾತ ನಟಿ ಹರಿಪ್ರಿಯಾ ಮನೆಗೆ ಹೊಸ ಅತಿಥಿಯ ಆಗಮನವಾಗಲಿದೆಯಾ ಎಂಬ ಅನುಮಾನ ಮೂಡಿದೆ. ಏಕೆಂದರೆ ನಟಿ ಹರಿಪ್ರಿಯಾ ಅವರು ಇತ್ತೀಚೆಗೆ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದರು. ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಅಭಿಮಾನಿಗಳು ಒಂದು ಸಂಗತಿಯನ್ನು ಗಮನಿಸಿದ್ದಾರೆ.

ಇದನ್ನೂ ಓದಿ:ಪತಿ ವಸಿಷ್ಠ ಸಿಂಹಗೆ ಮೇಕಪ್ ಮಾಡಿದ ಹರಿಪ್ರಿಯಾ; ಎಷ್ಟು ಮುದ್ದಾಗಿದೆ ಈ ವಿಡಿಯೋ

publive-image

ಹೌದು, ಒಂದಲ್ಲಾ ಒಂದು ವಿಚಾರಕ್ಕೆ ಈ ಲವ್​ ಬರ್ಡ್ಸ್ ಸುದ್ದಿಯಲ್ಲಿ ಇರುತ್ತಾರೆ. ಇದೀಗ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಪೋಷಕರಾಗುತ್ತಿದ್ದಾರಾ ಅಂತ ಅನುಮಾನ ವ್ಯಕ್ತವಾಗಿದೆ. ನಟಿ ಮೊನ್ನೆಯಷ್ಟೇ ವಿಡಿಯೋವೊಂದನ್ನು ತಮ್ಮ ಇನ್​ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಸ್ಟಾರ್​ ದಂಪತಿ ಮಡಿಕೇರಿಯಲ್ಲಿರೋ ವಿಷ್ಮಾ ರೆಸಾರ್ಟ್​ಗೆ ಹೋಗಿದ್ದಾರೆ. ಅದೇ ವಿಡಿಯೋದಲ್ಲಿ ನಟಿಯು ಗರ್ಭಿಣಿ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಪತಿ ವಸಿಷ್ಠ ಸಿಂಹ ಕೂಡ ಅವರನ್ನು ಅಷ್ಟೇ ಕೇರ್ ಮಾಡುತ್ತಿದ್ದಾರೆ.

publive-image

ಇದೇ ವಿಡಿಯೋ ನೋಡಿದ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆ ವಿಡಿಯೋ ಕಾಮೆಂಟ್ಸ್​ ಹಾಕಿದ್ದಾರೆ. ಮೇಡಂ ಏನಾದರೂ ಗುಡ್​ನ್ಯೂಸ್​ ಕೊಡ್ತಾ ಇದ್ದೀರಾ? ನೀವು ಗರ್ಭಿಣಿನಾ ಅಂತೇಲ್ಲಾ ಕಾಮೆಂಟ್​ ಹಾಕಿದ್ದಾರೆ. ಸದ್ಯ ಈ ಬಗ್ಗೆ ವಸಿಷ್ಠ ಸಿಂಹ ಹಾಗೂ ಖ್ಯಾತ ನಟಿ ಹರಿಪ್ರಿಯಾ ಯಾವುದೇ ಮಾಹಿತಿ ನೀಡಿಲ್ಲ.

ಇನ್ನೂ,  ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ 2023 ಜನವರಿ 26ರಂದು ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರ ಮದುವೆಗೆ ರಾಜಕೀಯ ಗಣ್ಯರು, ಹಾಗೂ ಸ್ಯಾಂಡಲ್​​ವುಡ್​ ಸಿನಿ ಅನೇಕ ತಾರೆಯರು ಸಾಕ್ಷಿಯಾಗಿದ್ದರು. ಸದ್ಯ ಈ ಇಬ್ಬರು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಌಕ್ಟೀವ್​ ಆಗಿದ್ದಾರೆ. ಆಗಾಗ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment