newsfirstkannada.com

ನಾವು ಪಾಕಿಸ್ತಾನದಲ್ಲಿ ಇದ್ದೀವಾ? ನಟಿ ಹರ್ಷಿಕಾ ಪೂಣಚ್ಚ ಬೇಸರ; ಅಸಲಿಗೆ ಅಂದು ನಡೆದಿದ್ದೇನು?

Share :

Published April 19, 2024 at 12:36pm

    ಹಲ್ಲೆ ಮಾಡಿದವರು ಚೈನ್, ಫೋನ್ ಕಳ್ಳತನ ಮಾಡೋಕೆ ಬಂದಿದ್ರು; ಹರ್ಷಿಕಾ

    ಕನ್ನಡದಲ್ಲಿ ಹೇಳಿದಾಗ ಕನ್ನಡ ವಾಲಾ ಅಂತ ಹಿಂದಿಯಲ್ಲಿ ಮಾತಾಡಿಕೊಂಡರು

    ನಾವೆಲ್ಲಿ ಇದ್ದೀವಿ ಪಾಕಿಸ್ತಾನನಾ? ನಮಗೆ ಈ ಥರಾ ಆಗ್ತಿದೆ ಅಂದ್ರೆ ಹೇಗೆ?

ಬೆಂಗಳೂರು: ಸ್ಯಾಂಡಲ್​ವುಡ್​ ನಟಿ ಹರ್ಷಿಕಾ ಪೂಣಚ್ಚ ಅವರ ಪತಿ ಭುವನ್ ಪೊನ್ನಣ್ಣ ಅವರ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಫ್ರೇಜರ್ ಟೌನ್​ನ ರೆಸ್ಟೋರೆಂಟ್ ಬಳಿ ಗಲಾಟೆ ನಡೆದಿದ್ದು, ಹರ್ಷಿಕಾ ಪೂಣಚ್ಚ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಭುವನ್ ಮೇಲೆ ನಡೆದಿರೋ ಹಲ್ಲೆ ಬಗ್ಗೆ ಹರ್ಷಿಕಾ ಪೂಣಚ್ಚ ಅವರು ಮಾಹಿತಿ ನೀಡಿದ್ದಾರೆ. ನ್ಯೂಸ್ ಫಸ್ಟ್ ಚಾನೆಲ್‌ಗೆ ಪ್ರತಿಕ್ರಿಯಿಸಿರುವ ಹರ್ಷಿಕಾ, ಕಲೆದ ಏಪ್ರಿಲ್ 2ರ ಸಂಜೆ 7 ಗಂಟೆಗೆ ನಾವು ಊಟ ಮಾಡಲು ಫ್ರೇಜರ್ ಟೌನ್‌ನ ಪುಲಕೇಶಿನಗರದ ಕರಾಮಾ ರೆಸ್ಟೋರೆಂಟ್‌ಗೆ ಹೋಗಿದ್ದೆವು. ಊಟ ಮುಗಿಸಿ ಹೊರಗೆ ಬಂದಿದ್ದೇವು. ಆಗ ಪಾರ್ಕಿಂಗ್ ಬಳಿ ಯಾರೋ ಒಬ್ಬ ಬಂದು ನೋಡ್ಕೊಂಡು ಹೋಗಿ ಎಂದ. ಸರಿ ಆಯ್ತು ಹೋಗಿ ಅಂತ ಕನ್ನಡದಲ್ಲಿ ಹೇಳಿದಾಗ ಓಹ್ ಕನ್ನಡ ವಾಲಾ ಅಂತ ಹಿಂದಿಯಲ್ಲಿ ಮಾತಾಡಿಕೊಂಡರು.

ಇದನ್ನೂ ಓದಿ: ನಟಿ ಹರ್ಷಿಕಾ ಪೂಣಚ್ಚ ಪತಿ ಭುವನ್​ ಪೊನ್ನಣ್ಣ ಮೇಲೆ ಪುಂಡರಿಂದ ಹಲ್ಲೆ.. ವಿಡಿಯೋ ಇಲ್ಲಿದೆ

ಹಲ್ಲೆ ಮಾಡಿದವರು ಚೈನ್, ಫೋನ್ ಕಳ್ಳತನ ಮಾಡೋಕೆ ಬಂದಿದ್ರು. ಅವ್ರು ಪಕ್ಕಾ ಪ್ಲಾನ್ ಮಾಡ್ಕೊಂಡು ಬಂದಿದ್ದರು. ಒಳಗೆ ಕೈ ಹಾಕಿ ಚೈನ್ ಕಿತ್ಕೊಳ್ಳೋಕೆ ಬಂದಿದ್ದರು. ಭುವನ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಯಾರೂ ಸಪೋರ್ಟ್ ಮಾಡಿಲ್ಲ. ಘಟನೆ ಆದಾಗ ಹೋಟೆಲ್‌ ಅವರು ಬಂದಿಲ್ಲ. ಸಾರ್ವಜನಿಕರು ಯಾರೂ ಬಂದಿಲ್ಲ. ಕನ್ನಡದವರು, ಕನ್ನಡದಲ್ಲಿ ಮಾತಾಡಿದ್ದಕ್ಕೆ ಜೋರು ಮಾಡಿದ್ರು. ನಾವು ಕೂಡ ಫ್ಯಾಮಿಲಿ ಇದ್ವಿ. ಭುವನ್ ಪೊನ್ನಣ್ಣ ಕೂಡ ಆರಂಭದಲ್ಲಿ ಮಾತಾಡಲಿಲ್ಲ. ಅವರು ಕತ್ತಿಗೆ ಕೈಗೆ ಹಾಕಿದಾಗಲೇ ಮಾತಾಡಿದ್ದು, ಅವರು ಕಳ್ಳತನ ಮಾಡೋಕೆ ಅಂತಾನೇ ಬಂದಿದ್ದಾರೆ ಎಂದು ಹರ್ಷಿಕಾ ಪೂಣಚ್ಚ ಹೇಳಿದ್ದಾರೆ.

ನಾವೆಲ್ಲಿ ಇದ್ದೀವಿ. ಪಾಕಿಸ್ತಾನನಾ ಅಂತ ಅನಿಸ್ತಿದೆ? ನಮಗೆ ಈ ಥರಾ ಆಗ್ತಿದೆ ಅಂದಾಗ ಸಾರ್ವಜನಿಕರಿಗೆ ಹೇಗೆ? ಫ್ಯಾಮಿಲಿ ಅವರ ಸಲಹೆ ಮೇರೆಗೆ ಪೊಲೀಸರಿಗೆ ದೂರು ಕೊಡೋಕೆ ಮುಂದಾಗಿರಲಿಲ್ಲ. ಆದ್ರೆ, ಜನಸಾಮಾನ್ಯರಿಗೆ ಈ ರೀತಿ ತೊಂದರೆ ಆಗಬಾರದು ಅಂತ ಈಗ ಪೋಸ್ಟ್ ಮಾಡಿದ್ದೇವೆ. ಫ್ಯಾಮಿಲಿ ಜೊತೆ ಮಾತಾಡಿ ಕಂಪ್ಲೇಂಟ್ ಕೊಡೋದರ ಬಗ್ಗೆ ನಿರ್ಧಾರ ಮಾಡ್ತೇವೆ. ಬಹುಶಃ ಈ ಪೋಸ್ಟ್ ಹಾಕಿದ ಬಳಿಕ ಪೊಲೀಸರು ಸಂಪರ್ಕಿಸಬಹುದು ಎಂದು ಹರ್ಷಿಕಾ ಪೂಣಚ್ಚ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾವು ಪಾಕಿಸ್ತಾನದಲ್ಲಿ ಇದ್ದೀವಾ? ನಟಿ ಹರ್ಷಿಕಾ ಪೂಣಚ್ಚ ಬೇಸರ; ಅಸಲಿಗೆ ಅಂದು ನಡೆದಿದ್ದೇನು?

https://newsfirstlive.com/wp-content/uploads/2024/04/harshika-poonacha-4.jpg

Load More