Advertisment

ಕೊನೆಗೂ ಬಾಯ್‌ಫ್ರೆಂಡ್‌ ಫೋಟೋ ರಿವೀಲ್​ ಮಾಡಿದ ಇಲಿಯಾನಾ; ಆ ಮಗುವಿನ ತಂದೆ ಇವರೇನಾ?

author-image
Veena Gangani
Updated On
ಕೊನೆಗೂ ಬಾಯ್‌ಫ್ರೆಂಡ್‌ ಫೋಟೋ ರಿವೀಲ್​ ಮಾಡಿದ ಇಲಿಯಾನಾ; ಆ ಮಗುವಿನ ತಂದೆ ಇವರೇನಾ? 
Advertisment
  • ಮೊದಲ ಮಗುವಿನ ನಿರೀಕ್ಷೆಯಲ್ಲಿ ಬಹುಭಾಷಾ ನಟಿ ಇಲಿಯಾನಾ
  • ಕೊನೆಗೂ ತನ್ನ ಬಾಯ್‌ ಫ್ರೆಂಡ್‌ ಪರಿಚಯಿಸಿದ ಪೋಕಿರಿ ಸುಂದರಿ
  • ಸಡನ್‌ ಆಗಿ ಫೋಟೋ ಶೇರ್​ ಮಾಡಿ ಅಚ್ಚರಿ ಮೂಡಿಸಿದ ನಟಿ

ಬಹುಭಾಷಾ ನಟಿ ಇಲಿಯಾನಾ ಡಿಕ್ರೂಜ್ ಸದ್ಯ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮದುವೆಗೂ ಮುನ್ನವೇ ತಾಯಿಯಾಗುತ್ತಿದ್ದೇನೆ ಎಂದ ನಟಿ ಇಲಿಯಾನಾ ಅವರು ಮಗುವಿನ ತಂದೆ ಯಾರೆಂದು ಹೇಳದೆ ಫೋಟೋವನ್ನು ಶೇರ್​ ಮಾಡಿದ್ದರು. ಈ ಫೋಟೋವನ್ನು ನೋಡಿದ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಬಗೆ ಬಗೆಯಾಗಿ ಕಾಮೆಂಟ್​ ಮಾಡಿದ್ದರು. ಆದರೆ ಇದೀಗ ತಮ್ಮ ಮಗುವಿನ ತಂದೆ ಯಾರು ಎಂಬ ಗುಟ್ಟನ್ನು ರಿವೀಲ್​​ ಮಾಡಿದ್ದಾರೆ. ಈ ಕುರಿತು​ ಡೇಟ್ ನೈಟ್ ಎಂದು ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಶೇರ್​ ಮಾಡಿದ್ದಾರೆ.

Advertisment

publive-image

ತೆಲುಗು ಹಾಗೂ ಹಿಂದಿ ಸಿನಿಮಾಗಳ ಮೂಲಕ ಎಲ್ಲರ ಗಮನ ಸೆಳೆದಿರೋ ನಟಿ ಇಲಿಯಾನಾ ಡಿಕ್ರೂಜ್ ಏಪ್ರಿಲ್‌ನಲ್ಲಿ ತಾವು ಪ್ರೆಗ್ನೆಂಟ್ ಎನ್ನುವ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆದರೆ ಇಲಿಯಾನಾ ಅವರಿಗೆ ಮದುವೆ ಆಗಿಲ್ಲ. ಹೀಗಾಗಿ, ಈ ಮಗುವಿಗೆ ತಂದೆ ಯಾರು ಎನ್ನುವ ಪ್ರಶ್ನೆಗಳನ್ನು ಅಭಿಮಾನಿಗಳಿಗೆ ಕೇಳಿದ್ದರು. ಇದೀಗ ಬಾಯ್‌ಫ್ರೆಂಡ್ ಮುಖವನ್ನು ಇಲಿಯಾನಾ ರಿವೀಲ್ ಮಾಡಿದ್ದಾರೆ. ಇನ್ನು ಆ ವ್ಯಕ್ತಿಯ ಹೆಸರನ್ನು ಹೇಳಿದೆ ಕೇವಲ ಫೋಟೋ ಶೇರ್​ ಮಾಡಿಕೊಂಡಿದ್ದಾರೆ.

publive-image

Advertisment

ಇನ್ನು ಈ ಫೋಟೋ ನೋಡಿದ ನೆಟ್ಟಿಗರು ಇವರು ನಿಮ್ಮ ಪತಿನಾ ಅಥವಾ ಬಾಯ್‌ ಫ್ರೆಂಡಾ ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನೂ ಕೆಲವರು ಈತ ನೋಡಲು ವಿದೇಶಿಗನಂತೆ ಇದ್ದಾರೆ, ನೀವೂ ಕೂಡಾ ಫಾರಿನ್‌ ಹುಡುಗನ ಹಿಂದೆ ಬಿದ್ರಾ? ಎಂದು ಕೇಳುತ್ತಿದ್ದಾರೆ. ಒಟ್ಟಿನಲ್ಲಿ ಇಲಿಯಾನಾ ಪ್ರೆಗ್ನೆನ್ಸಿ ವಿಚಾರಕ್ಕೆ ಬಹಳ ಟ್ರೋಲ್‌ ಆಗುತ್ತಿದ್ದಾರೆ. ಜೊತೆಗೆ ಬಾಯ್‌ಫ್ರೆಂಡ್ ಮುಖ ತೋರಿಸುವುದು ಫ್ಯಾನ್ಸ್‌ಗೆ ಅಚ್ಚರಿ ಮೂಡಿಸಿದೆ.

publive-image

Advertisment

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ 'ಫಿಲ್ಮಿ ಫಸ್ಟ್' ವೀಕ್ಷಿಸಿ

Advertisment
Advertisment
Advertisment