ಕನ್ನಡ ಬಿಗ್​ಬಾಸ್​ ದೊಡ್ಡ ಆಫರ್​ ಮಿಸ್​ ಮಾಡಿಕೊಂಡ ಸ್ಟಾರ್ ನಟಿ ಜ್ಯೋತಿ ರೈ; ಕಾರಣವೇನು?

author-image
Veena Gangani
Updated On
ಕನ್ನಡ ಬಿಗ್​ಬಾಸ್​ ದೊಡ್ಡ ಆಫರ್​ ಮಿಸ್​ ಮಾಡಿಕೊಂಡ ಸ್ಟಾರ್ ನಟಿ ಜ್ಯೋತಿ ರೈ; ಕಾರಣವೇನು?
Advertisment
  • ಕನ್ನಡದ ಬಿಗ್​ ರಿಯಾಲಿಟಿ ಶೋನ ಆಫರ್​ ಮಿಸ್​ ಮಾಡಿಕೊಂಡ ನಟಿ
  • ಕನ್ನಡದ ಹಲವು ಧಾರಾವಾಹಿಗಳಲ್ಲಿ ನಟಿಸಿ ಪ್ರಸಿದ್ಧಿ ಗಳಿಸಿದ ನಟಿ ಜ್ಯೋತಿ ರೈ
  • ತೆಲುಗು ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಸಖತ್ ಬ್ಯೂಸಿ ಆಗಿದ್ದಾರೆ ನಟಿ

ಕನ್ನಡದ ಅತಿ ದೊಡ್ಡ​ ರಿಯಾಲಿಟಿ ಶೋ ಬಿಗ್​ಬಾಸ್. ಸಾಕಷ್ಟು ಅಭಿಮಾನಿಗಳು ಬಿಗ್​ಬಾಸ್​ ಯಾವಾಗ ಬರುತ್ತೆ ಎಂದು ಕಾಯುತ್ತಿದ್ದಾರೆ. ಸೀಸನ್​​-11ಕ್ಕೆ ಯಾರೆಲ್ಲ ಎಂಟ್ರಿ ಕೊಡ್ತಾರೆ ಅನ್ನೋದ್ರ ಬಗ್ಗೆ ಚರ್ಚೆ ಶುರುವಾಗ್ತಿದೆ.

ಇದನ್ನೂ ಓದಿ: ಭೀಕರ ಅಪಘಾತಕ್ಕೆ ಬಿಗ್ ಟ್ವಿಸ್ಟ್‌.. 2 ಕಿ.ಮೀ ಡೆಡ್‌ಬಾಡಿ ಎಳೆದೊಯ್ದು ಕೊಲೆ? ಬೆಚ್ಚಿ ಬಿದ್ದ ಭೀಮಾತೀರ!

publive-image

ಬಿಗ್​ಬಾಸ್​​ ಮನೆಗೆ ಸುಖಾ ಸುಮ್ಮನೆ ಯಾರನ್ನೂ ಕರೆಸಲ್ಲ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನ, ಸಿನಿಮಾ ತಾರೆಯರನ್ನ, ಕ್ರೀಡಾಪಟುಗಳನ್ನು ಹಾಗೂ ​ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯತೆಗಳಿಸಿದವರನ್ನು ಕರೆಸಲಾಗುತ್ತದೆ. ಜನಪ್ರಿಯತೆ ಹೆಚ್ಚು ಸಿಗೋದ್ರಿಂದ ಇಂಥ ಆಫರ್ ಬಂದರೆ ಯಾರೂ ಮಿಸ್​ ಮಾಡಿಕೊಳ್ಳಲ್ಲ.

publive-image

ಸೋಷಿಯಲ್‌ ಮೀಡಿಯಾದಲ್ಲಿ ಸೆನ್ಸೆಷನ್ ಕ್ರಿಯೆಟ್‌ ಮಾಡಿದ್ದ ಜ್ಯೋತಿ ರೈ ತಮಗೆ ಬಂದಿದ್ದ ಬಿಗ್​ಬಾಸ್​ ಆಫರ್​ ತ್ಯಜಿಸಿದ್ದಾರೆ. ಕನ್ನಡದ ಕಿನ್ನರಿ ಸೀರಿಯಲ್​ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದ ಜ್ಯೋತಿ ರೈ ಅವರು ಬಿಗ್​ಬಾಸ್ ಆಫರ್​ ಅನ್ನು ನಿರಾಕರಿಸಿದ್ದಾರೆ.

publive-image

ಸೋಷಿಯಲ್‌ ಮೀಡಿಯಾದಲ್ಲಿ ಸಖತ್​ ಆಕ್ಟೀವ್​ ಆಗಿರೋ ನಟಿ ಜ್ಯೋತಿ ರೈ ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಬೋಲ್ಡ್ ಫೋಟೋ ಶೇರ್ ಮಾಡಿಕೊಳ್ಳುವ ನಟಿಗೆ ಬಿಗ್​ಬಾಸ್​ ಸೀಸನ್​ 11ರ ತಂಡದಿಂದ ಬಿಗ್​ಬಾಸ್​ ತಂಡದಿಂದ ಆಹ್ವಾನ ನೀಡಲಾಗಿದೆ. ಈ ಬಗ್ಗೆ ಸ್ವತಃ ನಟಿ ಜ್ಯೋತಿ ಅವರು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: BBK11: ಬರ್ತಿದೆ ಬಿಗ್​ ರಿಯಾಲಿಟಿ ಶೋ; ಈ ಬಾರಿಯ ಬಿಗ್​ಬಾಸ್​ನಲ್ಲಿ ಏನೆಲ್ಲಾ ವಿಶೇಷತೆ ಇರಲಿದೆ?

publive-image

ನಟಿ ಜ್ಯೋತಿ ರೈ ಹೇಳಿದ್ದೇನು?

ಬಿಗ್‌ ಬಾಸ್ ಸ್ಪರ್ಧಿಯಾಗಿ ಮನೆಗೆ ಬರುವಂತೆ ಆಹ್ವಾನ ನೀಡಲಾಗಿದೆ. ಇದಕ್ಕೆ ನಾವು ಕನ್ನಡ ಬಿಗ್‌ ಬಾಸ್ ತಂಡಕ್ಕೆ ಪ್ರಶಂಸಿಸುತ್ತೇನೆ. ಕನ್ನಡ ಬಿಗ್‌ ಬಾಸ್ ತಂಡವು ನನ್ನನ್ನು ಸಂಪರ್ಕ ಮಾಡಿದಾಗ ಅದನ್ನು ಪರಿಗಣಿಸಿದ್ದೇನೆ. ಈಗಾಗಲೇ ಹಲವು ಸಿನಿಮಾಗಳು ಮತ್ತು ಧಾರಾವಾಹಿಗಳಲ್ಲಿ ನಟಿಸಲು ದಿನಾಂಕ ನೀಡಿದ್ದು, ಅವುಗಳಲ್ಲಿ ನನ್ನ ಇರುವಿಕೆ ಅಗತ್ಯವಾಗಿದೆ. ಬಿಗ್‌ ಬಾಸ್ ಮನೆಗೆ ಹೋಗಲು ಸಮಯದ ಕಾರಣದಿಂದ ಬಿಗ್‌ ಬಾಸ್ ಸ್ಪರ್ಧೆಗೆ ಹೋಗುವುದನ್ನು ಗೌರವಯುತವಾಗಿ ನಿರಾಕರಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಕನ್ನಡ ಸೇರಿದಂತೆ ದಕ್ಷಿಣ ಭಾರತದಲ್ಲಿ ನನ್ನ ಅಭಿಮಾನಿಗಳು ಮತ್ತು ಅನುಯಾಯಿಗಳ ಬೆಂಬಲದಿಂದಾಗಿ ಬಿಗ್‌ ಬಾಸ್ ಮನೆಗೆ ಸ್ಪರ್ಧಿಯಾಗಿ ಬರುವಂತೆ ಅವಕಾಶ ನೀಡಿದ್ದಕ್ಕಾಗಿ ಕೃತಜ್ಞಳಾಗಿದ್ದೇನೆ ಎಂದು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment