Advertisment

VIDEO: ಏರ್‌ಪೋರ್ಟ್‌ನಲ್ಲಿ ಕಂಗನಾ ರನೌತ್‌ಗೆ ಕಪಾಳ ಮೋಕ್ಷ; ಅಸಲಿಗೆ ಆಗಿದ್ದೇನು?

author-image
Veena Gangani
Updated On
ಕಂಗನಾರ ಸಂಸದ ಸ್ಥಾನಕ್ಕೆ ಬಂತಾ ಕುತ್ತು..? ಉತ್ತರ ನೀಡುವಂತೆ ನೋಟಿಸ್ ಜಾರಿ ಮಾಡಿದ ಹೈಕೋರ್ಟ್..!
Advertisment
  • ನನಗೆ ಸಾಕಷ್ಟು ಕರೆಗಳು ಬರುತ್ತೀವೆ, ನಾನು ಆರಾಮಾಗಿದ್ದೇನೆ ಎಂದ ನಟಿ
  • ಏರ್​ಪೋರ್ಟ್​​​ನಲ್ಲಿ ಮಹಿಳಾ ಅಧಿಕಾರಿಯಿಂದ ಕಂಗನಾಗೆ ಕಪಾಳ ಮೋಕ್ಷ?
  • ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ನಟಿಯ ವಿಡಿಯೋ

ಚಂಡೀಗಡ: ಇಂದು ಚಂಡೀಗಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಐಎಸ್​ಎಫ್​​​ ಅಧಿಕಾರಿ ಬಿಜೆಪಿ ನೂತನ ಸಂಸದೆ ಮತ್ತು ಬಾಲಿವುಡ್​ ನಟಿ ಕಂಗನಾ ರಣಾವತ್​ಗೆ ಕಪಾಳ ಮೋಕ್ಷ ಮಾಡಿದ್ದಾರೆ. ಸಿಐಎಸ್​ಎಫ್​​​ ಅಧಿಕಾರಿ ಕುಲ್ವಿಂದರ್​ ಕೌರ್​ ಎಂಬುವವರು ತನಗೆ ಕಪಾಳ ಮೋಕ್ಷ ಮಾಡಿದ್ದಾರೆ ಎಂದು ಕಂಗನಾ ವಿಡಿಯೋ ಮಾಡುವ ಮೂಲಕ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

Advertisment

publive-image

ಇದನ್ನೂ ಓದಿ:VIDEO: ಏರ್ಪೋರ್ಟ್​​ನಲ್ಲಿ ಮಹಿಳಾ ಅಧಿಕಾರಿಯಿಂದ ನಟಿ ಕಂಗನಾಗೆ ಕಪಾಳ ಮೋಕ್ಷ?


">June 6, 2024


ಸಾಮಾಜಿಕ ಜಾಲತಾಣದಲ್ಲಿ ಬಾಲಿವುಡ್​ ನಟಿ ಕಂಗನಾ ರಣಾವತ್ ಅವರು ಚಂಡೀಗಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏನಾಯಿತು ಎಂಬುವುದರ ಬಗ್ಗೆ ಎಳೆ ಎಳೆಯಾಗಿ ಮಾಹಿತಿ ನೀಡಿದ್ದಾರೆ. ನಟಿ ಶೇರ್ ಮಾಡಿಕೊಂಡ ವಿಡಿಯೋದಲ್ಲಿ ನನಗೆ ಸಾಕಷ್ಟು ಜನರಿಂದ ಕರೆಗಳು ಬರುತ್ತೀವೆ. ನಾನು ಆರಾಮಾಗಿದ್ದೇನೆ. ಇಂದು ಚಂಡೀಗಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನನ್ನ ಮೇಲೆ ಹಲ್ಲೆ ಮಾಡಲಾಗಿದೆ.

Advertisment

ನಾನು ಆಗ ತಾನೇ ಸೆಕ್ಯೂರಿಟಿ ಎಲ್ಲಾ ಚೆಕ್​ ಮಾಡಿದ ಮೇಲೆ ನಾನು ಹೋದೆ. ಆಗ ಅಲ್ಲೇ ನಿಂತುಕೊಂಡಿದ್ದ ಸಿಐಎಸ್​ಎಫ್​​​ ಅಧಿಕಾರಿಯೊಬ್ಬರು ನನಗೆ ಕಪಾಳಕ್ಕೆ ಹೊಡೆದಿದ್ದಾರೆ. ಆಗ ನಾನು ಏಕೆ ಹೀಗೆ ಮಾಡಿದ್ದೀರಿ ಅಂತ ಕೇಳಿದೆ. ಆಗ ಅವರು ನಾನು ರೈತರ ಪರ ಹೋರಾಟ ಮಾಡುತ್ತಿದ್ದೇನೆ ಅಂತ ಹೇಳಿದ್ರು. ಪಂಜಾಬ್‌ನಲ್ಲಿ ಆತಂಕವಾದಿ (ಭಯೋತ್ಪಾದನೆ) ಮತ್ತು ಹಿಂಸಾಚಾರ ಹೆಚ್ಚಾಗುತ್ತಿದೆ. ಇದನ್ನು ತಡೆಯೋದರ ಬಗ್ಗೆ ನಾವು ಯೋಚಿಸಬೇಕಿದೆ ಎಂದು ಹೇಳಿಕೊಂಡಿದ್ದಾರೆ. ಸದ್ಯ ನಟಿ ಕಂಗನಾ ರಣಾವತ್ ಶೇರ್ ಮಾಡಿಕೊಂಡಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment