/newsfirstlive-kannada/media/post_attachments/wp-content/uploads/2025/05/karunya.jpg)
ಕನ್ನಡದ ನಟಿ ಕಾರುಣ್ಯ ರಾಮ್ ಅವರು ಸ್ಟಾರ್​ ದಂಪತಿಯ ಮಗುವನ್ನು ಎತ್ತಿಕೊಂಡು ಮುದ್ದಾಡಿದ್ದಾರೆ. ಮೊನ್ನೆಯಷ್ಟೇ ಅದ್ಧೂರಿಯಾಗಿ ಈ ಮುದ್ದಾದ ಮಗುವಿನ ನಾಮಕರಣ ಮಾಡಲಾಗಿತ್ತು. ಅಷ್ಟೇ ಅಲ್ಲದೇ ಸಖತ್ ಸ್ಟ್ರಾಂಗ್​ ಆಗಿರೋ ಹೆಸರನ್ನು ಸಹ ಇಡಲಾಗಿತ್ತು. ಈ ಮಗು ಬೇರೆ ಯಾರದ್ದು ಅಲ್ಲ ಅದುವೆ​ ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಪೊನ್ನಣ್ಣ ಪುತ್ರಿ.
/newsfirstlive-kannada/media/post_attachments/wp-content/uploads/2025/05/karunya1.jpg)
ಹೌದು, ಸ್ಯಾಂಡಲ್​ವುಡ್​ ಸ್ಟಾರ್​ ದಂಪತಿ ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಪೊನ್ನಣ್ಣ ಮೊನ್ನೆಯಷ್ಟೇ ತಮ್ಮ ಮುದ್ದಾದ ಮಗಳ ಅದ್ಧೂರಿಯಾಗಿ ನಾಮಕರಣ ಶಾಸ್ತ್ರ ಮಾಡಿದ್ದರು. ಸದ್ಯ ಹರ್ಷಿಕಾ ಪೂಣಚ್ಚ ದಂಪತಿ ತಮ್ಮ ಮುದ್ದಾದ ಮಗಳ ಜೊತೆಗೆ ಕಾಲ ಕಳೆಯುತ್ತಿದ್ದಾರೆ. ಅದರಲ್ಲೂ ಕ್ಯೂಟ್​ ಬೇಬಿಯನ್ನು ನೋಡಲು ನಟಿ ಕಾರುಣ್ಯ ಹರ್ಷಿಕಾ ಪೂಣಚ್ಚ ಮನೆಗೆ ಬಂದಿದ್ದಾರೆ.
View this post on Instagram
ತ್ರಿದೇವಿ ಜೊತೆಗೆ ಅಮೂಲ್ಯವಾದ ಸಮಯವನ್ನು ಕಳೆದಿದ್ದಾರೆ. ಅದೇ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೇ ವಿಡಿಯೋಗೆ ಭವ್ಯಾ ಗೌಡ ಸೋ ಕ್ಯೂಟ್ ಅಂತ ಕಾಮೆಂಟ್ ಮಾಡಿದ್ದಾರೆ.
/newsfirstlive-kannada/media/post_attachments/wp-content/uploads/2025/05/harshika-poonacha-.jpg)
ತ್ರಿದೇವಿ ಎಂದರೇನು..?
ತ್ರಿದೇವಿ = “ತ್ರಿ” ಏಕೆಂದರೆ ಅವಳು ತನ್ನ ಜನ್ಮ ದಿನಾಂಕ ಮತ್ತು ಸಮಯದ ಪ್ರಕಾರ ತುಂಬಾ ಬಲವಾದ ಸಂಖ್ಯೆ 3 ಆಗಿದ್ದಾಳೆ. “ದೇವಿ” ಏಕೆಂದರೆ ಅವಳು ನವರಾತ್ರಿಯ ಮೊದಲ ದಿನದಂದು ಜನಿಸಿದಳು ಮತ್ತು ಮೂಕಾಂಬಿಕಾ ದೇವಿಯಿಂದ ನಮಗೆ ಉಡುಗೊರೆಯಾಗಿ ಬಂದಳು. ಪೊನ್ನಕ್ಕ = ಇದು ಅವಳ ಪೋಷಕರಿಬ್ಬರ ಹೆಸರುಗಳ ಸಂಯೋಜನೆಯಾಗಿದೆ. ಪೊನ್ನಣ್ಣ + ಹರ್ಷಿಕಾ = “ಪೊನ್ನಕ್ಕ”.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us