Advertisment

ಲಕ್ಷ್ಮೀ ಬಾರಮ್ಮ ಸೀರಿಯಲ್​ ನಟಿ ಕವಿತಾ ಗೌಡ ಹೊಸ ಫೋಟೋಶೂಟ್​; ತುಂಬು ಗರ್ಭಿಣಿಗೆ ಫ್ಯಾನ್ಸ್​ ಶುಭ ಹಾರೈಕೆ

author-image
Veena Gangani
Updated On
ಲಕ್ಷ್ಮೀ ಬಾರಮ್ಮ ಸೀರಿಯಲ್​ ನಟಿ ಕವಿತಾ ಗೌಡ ಹೊಸ ಫೋಟೋಶೂಟ್​; ತುಂಬು ಗರ್ಭಿಣಿಗೆ ಫ್ಯಾನ್ಸ್​ ಶುಭ ಹಾರೈಕೆ
Advertisment
  • 2021ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಚಂದನ್, ಕವಿತಾ ಗೌಡ
  • ಲಕ್ಷ್ಮೀ ಬಾರಮ್ಮ ಸೀರಿಯಲ್​ನಿಂದ ಖ್ಯಾತಿ ಪಡೆದ ಸ್ಟಾರ್​ ದಂಪತಿ
  • ಗಣೇಶ ಹಬ್ಬದ ದಿನದಂದೇ ವಿಭಿನ್ನ ಲುಕ್​ನಲ್ಲಿ ಕಾಣಿಸಿಕೊಂಡ ನಟಿ

ಕನ್ನಡದ ನಟಿ ಕವಿತಾ ಗೌಡ ಮನೆಯಲ್ಲಿ ಸಂಭ್ರಮದ ಮನೆ ಮಾಡಿದೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರೋ ಕವಿತಾ ಗೌಡ ಹಾಗೂ  ಚಂದನ್ ಕುಮಾರ್​ಗೆ ಖುಷಿ ದುಪ್ಪಟ್ಟಾಗಿದೆ. ಲಕ್ಷ್ಮೀ ಬಾರಮ್ಮ ಸೀರಿಯಲ್ ಮೂಲಕ​ ಖ್ಯಾತಿ ಪಡೆದುಕೊಂಡ ಈ ಸ್ಟಾರ್​ ಜೋಡಿ ಚೊಚ್ಚಲ ಮಗುವನ್ನು ಬರಮಾಡಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.

Advertisment

ಇದನ್ನೂ ಓದಿ:ಕೆರೆ ಪಕ್ಕದಲ್ಲಿ ‘ಲಕ್ಷ್ಮೀ ಬಾರಮ್ಮ’ ಚಿನ್ನು ಕ್ಯೂಟ್​ ಬೇಬಿ ಬಂಪ್; ನಟಿಯ ಲುಕ್​ಗೆ ಫ್ಯಾನ್ಸ್​ ಫಿದಾ

publive-image

ಮೇ 5ರಂದು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಮುದ್ದಾದ ಫೋಟೋವನ್ನು ಶೇರ್​ ಮಾಡಿಕೊಳ್ಳುವ ಮೂಲಕ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಅಂತ ತಿಳಿಸಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳು ಹಾಗೂ ಕಿರುತೆರೆ ನಟ ನಟಿಯರು ಕವಿತಾ ಗೌಡ ಹಾಗೂ ನಟ ಚಂದನ್ ಕುಮಾರ್​ಗೆ ಶುಭ ಹಾರೈಸಿದ್ದರು. ಆಗಾಗ ನಟಿ ಕವಿತಾ ಗೌಡ ತಮ್ಮ ಮುದ್ದಾದ ಬೇಬಿ ಬಂಪ್​ ಫೋಟೋವನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ.

ಇದೀಗ ಇಂದು ಗಣೇಶ ಚತುರ್ಥಿ ಹಬ್ಬದ ನಿಮಿತ್ತ ನಟಿ ಕವಿತಾ ಗೌಡ ಅವರು ಚೆಂದವಾಗಿ ಸೀರೆಯುಟ್ಟು ಕ್ಯಾಮೆರಾಗೆ ಪೋಸ್​ ಕೊಟ್ಟಿದ್ದಾರೆ. ಒಂದು ಕಡೆ ಗಣೇಶನ ಮೂರ್ತಿಯನ್ನು ಹಿಡಿದುಕೊಂಡು ಸಖತ್​ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಇದೇ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೇ ಫೋಟೋಸ್ ನೋಡಿದ ಅಭಿಮಾನಿಗಳು, ನಿಮಗೂ ನಿಮ್ಮ ಮನೆಯವರೆಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು, ವಿಘ್ನೇಶ್ವರ ನಿಮ್ಮಲ್ಲರಿಗೂ ಆಯಸ್ಸು ಆರೋಗ್ಯ ನೆಮ್ಮದಿ ಜೀವನ ಕೊಟ್ಟು ಒಳ್ಳೆಯದನ್ನು ಮಾಡಲಿ, ಪುಟ್ಟ ಗೌರಿ ಬರಲಿ ಸುಖ ಶಾಂತಿ ಇರಲಿ ನಿಮ್ಮ ಬದುಕಿನಲ್ಲಿ.ಗಣೇಶ ಬರಲಿದ್ದಾನೆ. ಹರುಷ ತರಲಿದ್ದಾನೆ. ಕಾಟ ಕೋಡಲಿದ್ದಾನೆ ಅಂತ ಕಾಮೆಂಟ್ಸ್ ಹಾಕಿದ್ದಾರೆ.

Advertisment

ಕವಿತಾ ಗೌಡ ಅವರು ಕನ್ನಡ ಕಿರುತೆರೆ ನಟಿ. ಚಂದನ್​ ಕುಮಾರ್​ ಅವರು ಕಿರುತೆರೆ, ಬೆಳ್ಳಿತೆರೆಯಲ್ಲಿ ಮುಂಚಿದ ನಟ. ಕವಿತಾ ಗೌಡ ಹಾಗೂ ಚಂದನ್ ಅವರು ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ನಟಿಸಿದ್ದರು. ತದನಂತರ ಲಾಕ್‌ಡೌನ್ ಸಮಯದಲ್ಲಿ ಜೋಡಿ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಬಳಿಕ 2021 ಮೇ 14ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಸ್ಟಾರ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment