/newsfirstlive-kannada/media/post_attachments/wp-content/uploads/2024/11/Keerthy-Suresh.jpg)
ದಕ್ಷಿಣ ಭಾರತದ ಸ್ಟಾರ್ ನಟಿ ಕೀರ್ತಿ ಸುರೇಶ್. ಇವರು ಸದಾ ಒಂದಲ್ಲ ಮತ್ತೊಂದು ವಿಚಾರಕ್ಕೆ ಸುದ್ದಿ ಆಗುತ್ತಲೇ ಇರುತ್ತಾರೆ. ಈಗ ತಮ್ಮ ಮದುವೆ ವಿಚಾರಕ್ಕೆ ನಟಿ ಕೀರ್ತಿ ಸುರೇಶ್ ಸುದ್ದಿ ಆಗಿದ್ದಾರೆ. ಈ ಹಿಂದೆ ಕೂಡ ನಟಿ ಕೀರ್ತಿ ಸುರೇಶ್ ಅವರ ಹೆಸರು ಸ್ಟಾರ್ ನಟರೊಂದಿಗೆ ಕೇಳಿ ಬಂದಿತ್ತು. ಇತ್ತೀಚೆಗಷ್ಟೇ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಂಚಂದ್ರನ್ ಅವರನ್ನು ಮದುವೆ ಆಗಬಹುದು ಎಂದು ಹೇಳಲಾಗಿತ್ತು. ಈಗ ಎಲ್ಲಾ ರೂಮರ್ಸ್ಗೂ ತೆರೆ ಬಿದ್ದಿದ್ದು, ಕೊನೆಗೂ ಕೀರ್ತಿ ಸುರೇಶ್ ಮದುವೆ ಫಿಕ್ಸ್ ಆಗಿದೆ ಎಂದು ವರದಿಯಾಗಿದೆ.
ಬಾಲ್ಯದ ಗೆಳೆಯನೊಂದಿಗೆ ಕೀರ್ತಿ ಸುರೇಶ್ ಮ್ಯಾರೇಜ್
ನಟಿ ಕೀರ್ತಿ ಸುರೇಶ್ ತಮ್ಮ ಬಾಲ್ಯದ ಗೆಳೆಯನನ್ನೇ ಮದುವೆ ಆಗಲಿದ್ದಾರೆ ಎಂದು ತಿಳಿದು ಬಂದಿದೆ. ಇವರ ಹೆಸರು ಆಂಟೊನಿ ತಟ್ಟಿಲ್. ಇಬ್ಬರು ಕ್ಲಾಸ್ಮೇಟ್ಸ್ ಮತ್ತು 14 ವರ್ಷಗಳ ಗೆಳೆತನ. ಒಟ್ಟಿಗೆ ಹೈಸ್ಕೂಲ್ನಲ್ಲಿ ಓದಿದ್ರು. ಇದು ಹಲವು ವರ್ಷಗಳ ಪ್ರೀತಿ ಎಂದು ಹೇಳಲಾಗುತ್ತಿದೆ.
ಗೋವಾದಲ್ಲಿ ಮದುವೆ ಆಗೋ ಪ್ಲ್ಯಾನ್
ಮನೆಯವರ ಒಪ್ಪಿಗೆ ಪಡೆದು ವಿವಾಹವಾಗುತ್ತಿದ್ದಾರೆ. ಜೋಡಿ ಡಿಸೆಂಬರ್ 11-12ನೇ ತಾರೀಕು ಗೋವಾದಲ್ಲಿ ಮದುವೆ ಆಗುತ್ತಿದೆ. ಇಬ್ಬರ ಮದುವೆಗೆ ಕುಟುಂಬಸ್ಥರು ಮತ್ತು ಆತ್ಮೀಯರು ಸಾಕ್ಷಿ ಆಗಲಿದ್ದಾರೆ ಎನ್ನಲಾಗಿದೆ.
ಯಾರು ಈ ಆಂಟೊನಿ ತಟ್ಟಿಲ್?
ಆಂಟೊನಿ ತಟ್ಟಿಲ್ ಮೂಲತಃ ಕೇರಳದ ಕೊಚ್ಚಿಯವರು. ದುಬೈನಲ್ಲಿ ಇವರದ್ದು ಹಲವು ಬ್ಯುಸಿನೆಸ್ ಇದೆ. ಹುಟ್ಟಿದ್ದು ಕೇರಳದಲ್ಲಾದ್ರೂ ಬೆಳೆದಿದ್ದು ಮಾತ್ರ ಚೆನ್ನೈನಲ್ಲೇ. ಈಗ ಆಂಟೊನಿ ತಟ್ಟಿಲ್ ನೆಲೆಸಿರುವುದು ದುಬೈನಲ್ಲಿ ಎನ್ನುವ ಮಾಹಿತಿ ಇದೆ.
ಸಿನಿಮಾದಲ್ಲಿ ಬ್ಯುಸಿಯಾಗಿರೋ ಕೀರ್ತಿ ಸುರೇಶ್
ಇತ್ತೀಚೆಗಷ್ಟೇ ಕೀರ್ತಿ ಸುರೇಶ್ ನಟನೆಯ ‘ರಘು ತಾತ’ ಸಿನಿಮಾ ರಿಲೀಸ್ ಆಗಿ ಒಳ್ಳೆಯ ಹೆಸರು ಮಾಡಿತ್ತು. ಇದರ ನಿರ್ಮಾಣದ ಜವಾಬ್ದಾರಿ ಹೊಂಬಾಳೆ ಸಂಸ್ಥೆ ವಹಿಸಿಕೊಂಡಿತ್ತು. ಈಗ ಬಾಲಿವುಡ್ನಲ್ಲೂ ವರುಣ್ ಧವನ್ ಜೊತೆಗೆ ಕೀರ್ತಿ ಸುರೇಶ್ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ