/newsfirstlive-kannada/media/post_attachments/wp-content/uploads/2025/07/actor-Lakshmi1.jpg)
ಕನ್ನಡ ಚಿತ್ರರಂಗದ ಚಂದನದ ಗೊಂಬೆ ಲಕ್ಷ್ಮಿ ಬಹು ಭಾಷೆಗಳಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟಿ ಲಕ್ಷ್ಮಿಯವರು ಕನ್ನಡವಲ್ಲದೇ ತಮಿಳು, ಹಿಂದಿ, ತೆಲುಗು ಮತ್ತು ಮಲಯಾಳಂ ಸೇರಿ ಸುಮಾರು 700ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ಬೆಳ್ಳಂಬೆಳಗ್ಗೆ ರೈಲಿನಲ್ಲಿ ಭಾರೀ ಅನಾಹುತ.. ಬೆಂಕಿಯ ಕೆನ್ನಾಲಿಗೆಗೆ ಹೊತ್ತಿ ಉರಿದ ಟ್ರೈನು.. VIDEO
ಆಂಧ್ರಪ್ರದೇಶದ ನೆಲ್ಲೂರಿನ ಮೂಲದವರಾದ ಲಕ್ಷ್ಮಿ ತಂದೆ ಯರಗುಡಿಪತಿ ವರದರಾವ್ ನಿರ್ದೇಶಕ ಹಾಗೂ ನಟರಾಗಿ ಗುರುತಿಸಿಕೊಂಡಿದ್ದರು. ಲಕ್ಷ್ಮಿ ತಾಯಿ ರುಕ್ಮಿಣಿ ಮತ್ತು ಮುತ್ತಜ್ಜಿ ಎನ್. ಜಾನಕಿ ತಮಿಳು ಸಿನಿಮಾಗಳಲ್ಲಿ ನಟಿಸಿದ್ರು. ಸಿನಿ ಕುಟುಂಬದ ಮೂರನೇ ತಲೆಮಾರಿನ ನಟಿಯಾಗಿ ಲಕ್ಷ್ಮಿ ಎಂಟ್ರಿ ಕೊಟ್ಟು ಚಿತ್ರರಂಗದಲ್ಲಿ ಇತಿಹಾಸ ಬರೆದಿದ್ದಾರೆ.
ಬಟರ್ ಜಾಮ್ ಲಕ್ಷ್ಮಿ ಅನ್ನೋದೇಕೆ?
ಇನ್ನು, ನ್ಯೂಸ್ ಫಸ್ಟ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಬಹುಭಾಷಾ ನಟ ಪ್ರಕಾಶ್ ಬೆಳವಾಡಿ ಜೊತೆಗೆ ಲಕ್ಷ್ಮಿ ಮನಬಿಚ್ಚಿ ಮಾತಾಡಿದ್ದಾರೆ. ತಮ್ಮ ಜೀವನದ ಇಡೀ ಜರ್ನಿ ಬಗ್ಗೆ ಮಾತಾಡಿದ ಲಕ್ಷ್ಮಿ ಅವರಿಗೆ ಒಂದು ಕನಸು ಇತ್ತಂತೆ. ನನಗೆ ಒಂದು ತಿನ್ನಬೇಕು ಅಂತ ಡ್ರೀಮ್ ಇತ್ತು. ಅದೇ ಬನ್ ಬಟರ್ ಜಾಮ್. ಇದನ್ನ ಯಾರಾದ್ರೂ ಕೇಳಿದ್ರೆ ನಗ್ತಾರೆ. ನಮ್ಮಲ್ಲಿ ಬನ್ ತಿನ್ನಬಾರದು. ಏಕೆಂದರೆ ಬನ್ನಲ್ಲಿ ಮೊಟ್ಟೆ ಅಂಶ ಇರುತ್ತೆ ಅಂತ ಬೇಕರಿ ಕಡೆ ಬಂದ್ರೆ, ನನ್ನ ನೋಡೋದಕ್ಕೆ ಬಿಡ್ತಾ ಇರಲಿಲ್ಲ. ಆಗ ನಾನು ಬೇಕೇಬೇಕು ಅಂತಲೇ ಒಂದು ಸ್ಟಾಪ್ ಅನ್ನು ಮಿಸ್ ಮಾಡಿ ಬೇಕರಿ ಹತ್ತಿರ ಹೋಗುತ್ತಿದ್ದೆ. ಬೇಕರಿಯಲ್ಲಿ ಒಂದು ದೊಡ್ಡ ಬನ್ ಮಧ್ಯೆ ಬಟರ್ ಒಂದು ಕಡೆ, ಮತ್ತೊಂದು ಕಡೆ ಜಾಮ್ ಹಚ್ಚಿ ಇಟ್ಟಿರುತ್ತಾರೆ. ಯಾವಾಗಲೂ ಅದನ್ನೂ ನಾನು ಹಿಂಗೆ ನೋಡ್ತಾ ಇರುತ್ತಿದ್ದೆ. ನನಗೆ ಆಗ ಡ್ರೀಮ್ ಇದ್ದಿದ್ದು, ನಾನು ಸಂಪಾದನೆ ಮಾಡುತ್ತೇನೆ, ಆ ಬನ್ ಬಟರ್ ಜಾಮ್ ಅನ್ನು ತಿನ್ನುತ್ತೇನೆ ಅಂತ. ಹೀಗೆ ಒಂದು ದಿನ ಸಿನಿಮಾ ಶೂಟಿಂಗ್ನಲ್ಲಿ ಫ್ರೀಯಾಗಿದ್ದಾಗ ಬನ್ ಬಟರ್ ಜಾಮ್ ಅನ್ನು ಕೇಳಿ ತರೆಸಿಕೊಂಡಿದ್ದೆ. ಆಗ ಅಲ್ಲಿ ಇರೋರು ನನಗೆ ಬನ್ ಬಟರ್ ಜಾಮ್ ಲಕ್ಷ್ಮಿ ಅಂತ ಕರೆಯೋದಕ್ಕೆ ಶುರು ಮಾಡಿದ್ರು. ಈಗಲೂ ಬನ್ ಬಟರ್ ಜಾಮ್ ಅನ್ನು ಬೇಕರಿಯಿಂದ ತರಿಸಿಕೊಂಡು ತಿನ್ನುತ್ತೇನೆ. ಈಗಲೂ ಅದನ್ನು ತಿನ್ನೋ ಮಜಾ ಬೇರೆ ಎಲ್ಲೂ ಸೀಗೋದಿಲ್ಲ ಅಂತ ಆ ದಿನಗಳನ್ನು ಮೆಲುಕು ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ