newsfirstkannada.com

ಅದ್ಧೂರಿಯಾಗಿ ಹೊಸ ಜೀವನಕ್ಕೆ ಕಾಲಿಟ್ಟ ನಟಿ ಮಾನ್ವಿತಾ ಕಾಮತ್; ಮದುವೆ ಸಂಭ್ರಮ ಹೇಗಿತ್ತು ನೋಡಿ!

Share :

Published May 1, 2024 at 3:47pm

    ಮಾನ್ವಿತಾ ಕಾಮಂತ್​ ಕುಟುಂಬಸ್ಥರು, ಸಿನಿಮಾ ರಂಗದ ಗಣ್ಯರು, ಆಪ್ತರು ಭಾಗಿ

    ಬಹಳ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಟಗರು ಪುಟ್ಟಿ ಮಾನ್ವಿತಾ

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ನಟಿಯ ಮದುವೆ ಫೋಟೋಸ್​

ಸ್ಯಾಂಡಲ್​ವುಡ್​ ನಟಿ ಮಾನ್ವಿತಾ ಕಾಮತ್​ ಅವರು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋವನ್ನು ಶೇರ್ ಮಾಡಿ ಅಭಿಮಾನಿಗಳಿಗೆ ಸರ್ಪ್ರೈಸ್​​ವೊಂದನ್ನು ನೀಡಿದ್ದರು. ಈ ಕುರಿತಾಗಿ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಎರಡು ಕಲಾತ್ಮಕ ಆತ್ಮಗಳು ಒಂದಾದಾಗ ಮ್ಯಾಜಿಕ್​ ಉಂಟಾಗುತ್ತದೆ ಎಂದು ಪೋಸ್ಟ್​ ಹಂಚಿಕೊಂಡಿದ್ದರು.

ಇದನ್ನೂ ಓದಿ: ಮ್ಯೂಸಿಕ್​ ಡೈರೆಕ್ಟರನ್ನ ವಿವಾಹವಾಗಲು ಮುಂದಾದ ಟಗರು ಪುಟ್ಟಿ! ಫ್ಯಾನ್ಸ್​ ಜೊತೆ ಶುಭ ಸುದ್ದಿ ಹಂಚಿಕೊಂಡ ಮಾನ್ವಿತಾ ಕಾಮತ್​

ಇದೀಗ ಸಂಗೀತ ನಿರ್ದೇಶಕ ಅರುಣ್​ ಕುಮಾರ್​ ಎಂಬುವವರ ಜೊತೆ ನಟಿ ಮಾನ್ವಿತಾ ಕಾಮತ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು, ನಟಿ ಮಾನ್ವಿತಾ ಕಾಮತ್ ಅವರು ಚಿಕ್ಕಮಗಳೂರಿನ ಕಳಸದಲ್ಲಿ ಅರುಣ್ ಕುಮಾರ್ ಜೊತೆ ಮದುವೆ ಆಗಿದ್ದಾರೆ. ಎರಡು ಕುಟುಂಬದ ಸದಸ್ಯರು ಮತ್ತು ಸಿನಿಮಾ ರಂಗದ ಗಣ್ಯರು ಹಾಗೂ ಆಪ್ತರು ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು. ನಿನ್ನೆ ನವಜೋಡಿಯ ಅರಿಶಿನ ಶಾಸ್ತ್ರ, ಮೆಹಂದಿ ಮತ್ತು ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತ್ತು.

ಅಂದ್ಹಾಗೆ, ಮಾನ್ವಿತಾ ಮತ್ತು ಅರುಣ್ ಅವರದ್ದು ಅರೇಂಜ್ ಮ್ಯಾರೇಜ್ ಆಗಿದ್ದು, ಅಮ್ಮ ನೋಡಿದ ವರನನ್ನೇ ಮಾನ್ವಿತಾ ಮದುವೆಯಾಗಿದ್ದಾರೆ. ಸದ್ಯ ನಟಿ ಮಾನ್ವಿತಾ ಕಾಮತ್ ಹಾಗೂ ಅರುಣ್ ಕುಮಾರ್ ಅವರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ. ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ನವ ದಂಪತಿಗಳಿಗೆ ಶುಭ ಹಾರೈಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಅದ್ಧೂರಿಯಾಗಿ ಹೊಸ ಜೀವನಕ್ಕೆ ಕಾಲಿಟ್ಟ ನಟಿ ಮಾನ್ವಿತಾ ಕಾಮತ್; ಮದುವೆ ಸಂಭ್ರಮ ಹೇಗಿತ್ತು ನೋಡಿ!

https://newsfirstlive.com/wp-content/uploads/2024/05/manvita-kamath.jpg

Load More