ಮೇಘಾ ಶೆಟ್ಟಿ ಜೊತೆಗಿರೋ ಆ ಫೋಟೋ ಹಾಕಿದ್ಕೆ ಬೈಸ್ಕೊಂಡೆ- ಶಾಕಿಂಗ್ ರಿವೀಲ್ ಮಾಡಿದ ತ್ರಿವಿಕ್ರಮ್​

author-image
Veena Gangani
Updated On
ಮೇಘಾ ಶೆಟ್ಟಿ ಜೊತೆಗಿರೋ ಆ ಫೋಟೋ ಹಾಕಿದ್ಕೆ ಬೈಸ್ಕೊಂಡೆ- ಶಾಕಿಂಗ್ ರಿವೀಲ್ ಮಾಡಿದ ತ್ರಿವಿಕ್ರಮ್​
Advertisment
  • ಬಿಗ್​ಬಾಸ್​ ಮೂಲಕ ಫೇಮಸ್​ ಆಗಿದ್ದ ನಟ ತ್ರಿವಿಕ್ರಮ್
  • ಬಿಗ್​ಬಾಸ್​ ಸೀಸನ್​ 11ರ ರನ್ನರ್ ಅಪ್​ ಆಗಿದ್ದ ನಟ
  • ಮುದ್ದು ಸೊಸೆ ಶೂಟಿಂಗ್​ ಸೆಟ್​ನಲ್ಲಿ ಅಂದು ಆಗಿದ್ದೇನು?

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11ರ ಮೂಲಕ ಸಖತ್​ ಫೇಮಸ್​ ಆಗಿದ್ದರು ನಟ ತ್ರಿವಿಕ್ರಮ್​. ಅಲ್ಲದೇ ಬಿಗ್​ಬಾಸ್​ ಸೀಸನ್ 11ರ ರನ್ನರ್​ ಅಪ್​ ಕೂಡ ಆದ್ರು. ಬಿಗ್​ಬಾಸ್​ ಮುಕ್ತಾಯ ಬಳಿಕ ಸದ್ಯ ನಟ ತ್ರಿವಿಕ್ರಮ್​ಮುದ್ದು ಸೊಸೆ ಸೀರಿಯಲ್​ನಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: ಗಂಡನಿಂದ 9 ತಿಂಗಳ ಗರ್ಭಿಣಿ ಪತ್ನಿಯ ಬರ್ಬರ ಕೊಲೆ.. ಭೂಮಿಗೆ ಬರುವ ಮೊದಲೇ ಕಣ್ಣು ಮುಚ್ಚಿದ ಕಂದಮ್ಮ..

publive-image

ನಿನ್ನೆಯಷ್ಟೇ ಕಲರ್ಸ್​ ಕನ್ನಡದಲ್ಲಿ ಮುದ್ದು ಸೊಸೆ ಸೀರಿಯಲ್​ ಪ್ರಸಾರ ಕಂಡಿದೆ. ಈ ಸೀರಿಯಲ್​ ರಿಮೇಕ್​ ಸ್ಟೋರಿ ಆದ್ರೂ ಬೆಟ್ಟದಷ್ಟು ನಿರೀಕ್ಷೆ ಇದೆ. ಬಿಗ್​ಬಾಸ್​ನಲ್ಲಿ ಟಾಪ್​ನಲ್ಲಿದ್ದ ತ್ರಿವಿಕ್ರಮ್​ಗೆ ಮತ್ತೊಂದು ದೊಡ್ಡಮಟ್ಟದ ಹಿಟ್​​ ಕೊಡುತ್ತಾ ಅಂತ ಕಾದು ನೋಡಬೇಕಿದೆ. ಇದೇ ಸೀರಿಯಲ್​ನಲ್ಲಿ ಭದ್ರೇಗೌಡರ ಪಾತ್ರದಲ್ಲಿ ನಟ ತ್ರಿವಿಕ್ರಮ್​ ಅಭಿನಯಿಸುತ್ತಿದ್ದಾರೆ.  ​

publive-image

ಇನ್ನೂ, ಇದೇ ‘ಮುದ್ದು ಸೊಸೆ’ ಸೀರಿಯಲ್​ನಲ್ಲಿ ಅತಿಥಿ ಪಾತ್ರದಲ್ಲಿ ನಟಿ ಮೇಘಾ ಶೆಟ್ಟಿ ನಿಭಾಯಿಸಿದ್ದಾರೆ. ಈ ಸೀರಿಯಲ್ ನಿರ್ಮಾಣಕ್ಕೆ ಅವರು ಕೂಡ ಸಾಥ್ ನೀಡಿರೋದು ವಿಶೇಷವಾಗಿದೆ. ಇದೇ ಸೀರಿಯಲ್​ ಶೂಟಿಂಗ್ ವೇಳೆ ನಟಿ ಮೇಘಾ ಶೆಟ್ಟಿ ಅವರ ಜೊತೆಗೆ ಕ್ಲಿಕ್ಕಿಸಿಕೊಂಡ ಫೋಟೋವನ್ನು ತ್ರಿವಿಕ್ರಮ್​ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಕೂಡ ಆಗಿತ್ತು. ಆದ್ರೆ ಪಾತ್ರ, ಸೀರಿಯಲ್​ ತೆರೆಗೆ ಬರದೇ ಫೋಟೋ ಶೇರ್ ಮಾಡಿಕೊಂಡಿದ್ದ ತ್ರಿವಿಕ್ರಮ್​ಗೆ ನಟಿ ಮೇಘಾ ಶೆಟ್ಟಿ ಬೈದಿದ್ದರಂತೆ.

ಈ ಬಗ್ಗೆ ನ್ಯೂಸ್​ ಫಸ್ಟ್​ನೊಂದಿಗೆ ಮಾತಾಡಿದ ತ್ರಿವಿಕ್ರಮ್​, ಅವರ ಜೊತೆಗೆ ಒಂದು ಸೀನ್​ ಮಾಡಬೇಕಾಗಿತ್ತು. ನಾನು ಆ ಫೋಟೋ ಹಾಕಿದೆ. ಫೋಟೋ ಹಾಕಿದ ಮೇಲೆ ನಾನೇ ಬೈಸ್ಕೊಂಡೆ. ಅದೊಂದು ಚಿಕ್ಕ ಸೀನ್​ ಆಗಿತ್ತು. ಇದಾದ ಬಳಿಕ ಮತ್ತೆ ರೀ ಶೂಟ್​ ಮಾಡಿದ್ರು. ಶೂಟಿಂಗ್​ ಸೆಟ್​ಗೆ ಬಂದಿದ್ದಕ್ಕೆ ನಾನು ಫೋಟೋ ತೆಗೆಸಿಕೊಂಡೆ ಅಂತ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment