ಲವ್​ ಯೂ ಕಂದ.. ಎನ್ನುತ್ತ ಕ್ಯೂಟ್​ ಮಗಳಿಗೆ ಬ್ಯೂಟಿಫುಲ್​ ಸಾಂಗ್ ಡೆಡಿಕೇಟ್ ಮಾಡಿದ ಸ್ಟಾರ್ ದಂಪತಿ.. VIDEO

author-image
Veena Gangani
ಲವ್​ ಯೂ ಕಂದ.. ಎನ್ನುತ್ತ ಕ್ಯೂಟ್​ ಮಗಳಿಗೆ ಬ್ಯೂಟಿಫುಲ್​ ಸಾಂಗ್ ಡೆಡಿಕೇಟ್ ಮಾಡಿದ ಸ್ಟಾರ್ ದಂಪತಿ.. VIDEO
Advertisment
  • ಸೆ. 05ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಮಿಲನಾ ನಾಗರಾಜ್
  • ಸಖತ್​ ಖುಷಿಯಲ್ಲಿದ್ದಾರೆ ಸ್ಯಾಂಡಲ್​ವುಡ್​ ಸ್ಟಾರ್​ ದಂಪತಿ
  • ಮುದ್ದಾದ ಪರಿ ಜೊತೆಗಿರೋ ಕ್ಯೂಟ್ ವಿಡಿಯೋ ವೈರಲ್

ಸ್ಯಾಂಡಲ್​ವುಡ್ ಸ್ಟಾರ್​ ಜೋಡಿ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಅವರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಇತ್ತೀಚೆಗಷ್ಟೇ ಮುದ್ದಾದ ಹೆಣ್ಣು ಮಗುವನ್ನು ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ತಮ್ಮ ಮನೆಗೆ ಅದ್ಧೂರಿಯಾಗಿ ಬರಮಾಡಿಕೊಂಡಿದ್ದರು.

ಇದನ್ನೂ ಓದಿ:Whatsappನಲ್ಲಿ ಸ್ಟೇಟಸ್ ಹಾಕೋರಿಗೆ ಗುಡ್ ​ನ್ಯೂಸ್.. ಬಂದಿದೆ ಮತ್ತೊಂದು ಹೊಸ ಫೀಚರ್; ಏನದು?

publive-image

ಆದ್ರೆ ಇದೀಗ ನಟಿ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಅವರ ಮುದ್ದಾದ ಮಗಳಿಗೆ 7 ತಿಂಗಳು ತುಂಬಿದೆ. ಇದೇ ಖುಷಿಯಲ್ಲಿ ದಂಪತಿ ಸ್ಪೆಷಲ್ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಹೌದು, ಸ್ಟಾರ್ ದಂಪತಿ ಲವ್ ಮಾಕ್ಟೇಲ್ ಸಿನಿಮಾದ ಲವ್​ ಯೂ ಕಂದ ಎಂದು ಹಾಡು ಹಾಡಿದ್ದಾರೆ. ಅದಕ್ಕೆ ಮಿಲನಾ ನಾಗರಾಜ್​ ಕಂದಾ ಸಖತ್​ ಆಗಿ ರೆಸ್ಪಾನ್ಸ್ ಮಾಡಿದೆ.

publive-image

ಇದೇ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಇದೇ ವಿಡಿಯೋ ನೋಡಿದ ಅಭಿಮಾನಿಗಳು ಎಷ್ಟು ಕ್ಯೂಟ್​ ಆಗಿದ್ದಾರೆ ಈ ಪರಿ.. ಸಖತ್​ ಚಿಟ್ಟೆ ಹಾಗೇ ಇರೋ ಪರಿಗೆ ದೃಷ್ಟಿ ತೆಗೆಯಿರಿ ಅಂತ ಕಾಮೆಂಟ್ಸ್​ ಹಾಕಿದ್ದಾರೆ.

ಈ ಹಿಂದೆ ಶಿವರಾತ್ರಿ ಹಬ್ಬದ ದಿನ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಅಂತ ಅಭಿಮಾನಿಗಳಿಗೆ ಗುಡ್​ನ್ಯೂಸ್​ ಕೊಟ್ಟಿತ್ತು ಈ ಜೋಡಿ. ಇದಾದ ಬಳಿಕ ಗರ್ಭಿಣಿಯಾಗಿದ್ದ ಮಿಲನಾ ನಾಗರಾಜ್ ಅವರು ಹೊಸ ಹೊಸ ಬೇಬಿ ಬಂಪ್​ ಲುಕ್​ನಲ್ಲಿ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುವ ಮೂಲಕ ಖುಷಿ ಪಡುತ್ತಿದ್ದರು. ಸೆಪ್ಟೆಂಬರ್ 05ರಂದು  ಮುಂಜಾನೆ ನಟಿ ಮಿಲನಾ ನಾಗರಾಜ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

ಇದಾದ ಬಳಿಕ ಸೆಪ್ಟೆಂಬರ್ 27ರಂದು ಮುದ್ದಾದ ಮಗಳಾದ ಪರಿಯನ್ನು ತಮ್ಮ ನಿವಾಸಕ್ಕೆ ಗ್ರ್ಯಾಂಡ್​ ಆಗಿ ವೆಲ್​ಕಮ್​ ಮಾಡಿದ್ದರು. ಆ ವಿಡಿಯೋವನ್ನು ದಂಪತಿ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆ ವಿಡಿಯೋ ನೋಡಿದ ಫ್ಯಾನ್ಸ್​ ಮುದ್ದಾದ ಪರಿಗೆ ಶುಭ ಹಾರೈಸುತ್ತಿದ್ದಾರೆ. ಮುದ್ದಾದ ನಿದಿಮಾ ಅಂತ ಕಾಮೆಂಟ್ಸ್​ ಹಾಕಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment