/newsfirstlive-kannada/media/post_attachments/wp-content/uploads/2025/04/mokshitha.jpg)
ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್ ಸೀಸನ್ 11ರ ಮೂಲಕ ಸಖತ್​ ಫೇಮಸ್​ ಆಗಿದ್ದು ನಟಿ ಮೋಕ್ಷಿತಾ ಪೈ. ಪಾರು ಸೀರಿಯಲ್​ನಲ್ಲಿ ತಮ್ಮ ಅಭಿನಯದ ಮೂಲಕವೇ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದ ನಟಿ ಬಿಗ್​ಬಾಸ್​ನಿಂದ ಆಚೆ ಬರುತ್ತಿದ್ದಂತೆ ಮಿಡಲ್ ಕ್ಲಾಸ್ ರಾಮಾಯಣ ನಟಿಸುತ್ತಿರೋದಾಗಿ ತಿಳಿಸಿದ್ದರು.
ಇದನ್ನೂ ಓದಿ: ಆರ್​ಸಿಬಿಗೆ ಯಾರೇ ಬರಲಿ, ಯಾರೇ ಹೋಗಲಿ.. ಕೊಹ್ಲಿಯ ಈ ದೊಡ್ಡ ಗುಣದ ಬಗ್ಗೆ ಗೊತ್ತಿರಲಿ..
ಸೋಷಿಯಲ್​ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಟಚ್​ನಲ್ಲಿದ್ದಾರೆ. ದೇವಸ್ಥಾನ, ಪ್ರವಾಸ ಅಂತ ಆತ್ಮೀಯರು ಜೊತೆ ಸುತ್ತಾಡ್ತಿದ್ದಾರೆ. ಶಿಶಿರ್​, ಐಶ್ವರ್ಯಾ ಜೊತೆಗೆ ಹೊಸ ಜಾಗಗಳನ್ನ ಎಕ್ಸ್​ಪ್ಲೋರ್ ಮಾಡ್ತಿರೋ ನಟಿ, ಈ ಬಾರಿ ಕುಟುಂಬ ಸಮೇತ ಸಿಗಂದೂರು ಚೌಡೇಶ್ವರಿ ದರ್ಶನ ಮಾಡಿದ್ದಾರೆ. ನಟಿ ಮೋಕ್ಷಿತಾ ತಮ್ಮನನ್ನ ಮಗನ ರೀತಿ ಟ್ರೀಟ್ ಮಾಡ್ತಾರೆ.
ಇನ್​ಫ್ಯಾಕ್ಟ್​ ಅಪ್ಪ-ಅಮ್ಮನಿಕ್ಕಿಂತ ಹೆಚ್ಚಾಗಿ ತಮ್ಮನನ್ನ ನೋಡಿಕೊಳ್ತಾರೆ. ದೇವಿ ದರ್ಶನಕ್ಕೆ ತಮ್ಮನನ್ನ ಕರೆದುಕೊಂಡು ಹೋಗಿದ್ರು. ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವರ್ಷ ಮೋಕ್ಷಿತಾಗೆ ಮದುವೆ ಮಾಡೋ ಪ್ಲ್ಯಾನ್​ನಲ್ಲಿದೆ ಕುಟುಂಬ. ಬಿಗ್​ಬಾಸ್​ ಮನೆಯಲ್ಲಿ ಮೋಕ್ಷಿತಾ ಕೂಡ ಈ ಬಗ್ಗೆ ಪ್ರಸ್ತಾಪ ಮಾಡಿದ್ರು. ಪಕ್ಕಾ ಈ ವರ್ಷ ಮೋಕ್ಷಿ ಕಲ್ಯಾಣ ಜರುಗುವ ಚಾನ್ಸ್ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ