ಒಂದೇ ವೇದಿಕೆ ಮೇಲೆ ಮಿಂಚಿದ ಬಿಗ್​ಬಾಸ್​ ಖ್ಯಾತಿಯ ಮೋಕ್ಷಿತಾ ಪೈ, ಉಗ್ರಂ ಮಂಜು.. PHOTOS

author-image
Veena Gangani
Updated On
ಒಂದೇ ವೇದಿಕೆ ಮೇಲೆ ಮಿಂಚಿದ ಬಿಗ್​ಬಾಸ್​ ಖ್ಯಾತಿಯ ಮೋಕ್ಷಿತಾ ಪೈ, ಉಗ್ರಂ ಮಂಜು.. PHOTOS
Advertisment
  • ಬಿಗ್​ಬಾಸ್​ ಮೂಲಕ ಫೇಮಸ್​ ಆಗಿದ್ದ ಈ ಇಬ್ಬರು
  • ಜೋಡಿಯಾಗಿ ಮೋಕ್ಷಿ, ಮಂಜು ಹೋಗಿದ್ದು ಎಲ್ಲಿಗೆ?
  • ಬಿಗ್​ಬಾಸ್​ ಸ್ಪರ್ಧಿಗಳನ್ನು ನೋಡಿ ಫ್ಯಾನ್ಸ್​ ಖುಷ್

ಕನ್ನಡದ ಬಿಗ್​ಬಾಸ್​ ಸೀಸನ್ 11ರ ಸ್ಪರ್ಧಿಗಳಾಗಿರೋ ಮೋಕ್ಷಿತಾ ಪೈ ಹಾಗೂ ಉಗ್ರಂ ಮಂಜು ಇದೇ ಮೊದಲ ಬಾರಿಗೇ ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:ಸಿನಿಮಾವನ್ನೂ ಮೀರಿಸುವಂತಿದೆ ಸೋನಂ ಪ್ಲಾನ್.. ತನಿಖೆಯಲ್ಲಿ ಪ್ರತಿ ಸನ್ನಿವೇಶಗಳೂ ಮರುಸೃಷ್ಟಿ..

publive-image

ಬಿಗ್​ಬಾಸ್​ ಸೀಸನ್ 11ರ ಮೂಲಕ ಫೇಮಸ್​ ಆಗಿದ್ದ ಉಗ್ರಂ ಮಂಜು ಹಾಗೂ ಮೋಕ್ಷಿತಾ ಪೈ ಇಬ್ಬರನ್ನು ಒಂದೇ ವೇದಿಕೆ ಮೇಲೆ ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

publive-image

ಹೌದು, ಬಿಗ್​ಬಾಸ್​ ಮುಕ್ತಾಯದ ಬಳಿ ಈ ಇಬ್ಬರು ಅಷ್ಟಾಗಿ ಮೀಟ್​ ಆಗಿರಲಿಲ್ಲ. ಇದೀಗ ತುಮಕೂರು ಕಾಲೇಜುವೊಂದರಲ್ಲಿ ನಡೆದಿದ್ದ ಸಾರಾ ಡಿಸೈನರ್ ಫ್ಯಾಷನ್ ಶೋ 2025 (Saara designer fashion show 2025)ಕ್ಕೆ ಜಡ್ಜ್ ಆಗಿ ಈ ಇಬ್ಬರು ಭಾಗಿಯಾಗಿದ್ದರು.

publive-image

ಅಷ್ಟೇ ಅಲ್ಲದೇ ಸಾರಾ ಡಿಸೈನರ್ ಫ್ಯಾಷನ್ ಶೋನಲ್ಲಿ ವೀಜೇತರಿಗೆ ಟ್ರೋಫಿ ಕೊಟ್ಟಿದ್ದಾರೆ. ಇನ್ನೂ ಈ ಇಬ್ಬರನ್ನು ಒಂದೇ ವೇದಿಕೆ ಮೇಲೆ ನೋಡಿದ ಅಭಿಮಾನಿಗಳಂತೂ ಫುಲ್​ ಖುಷಿಯಾಗಿದ್ದಾರೆ. ಅಲ್ಲದೇ ಈ ಇಬ್ಬರ ಜೊತೆಗೆ ಫೋಟೋವನ್ನು ಕ್ಲಿಕ್ಕಿಸಿಕೊಂಡು ಖುಷಿ ಪಟ್ಟಿದ್ದಾರೆ.

publive-image

ಇನ್ನೂ, ಬಿಗ್​ಬಾಸ್​ ಮನೆಯಲ್ಲಿದ್ದಾಗ ಉಗ್ರಂ ಮಂಜು ಹಾಗೂ ಮೋಕ್ಷಿತಾ ಪೈ ನಡವೆ ಗಲಾಟೆ ನಡೆಯುತ್ತಲೇ ಇತ್ತು. ಆದ್ರೆ, ಕೊನೆ ಕೊನೆಯಲ್ಲಿ ಈ ಇಬ್ಬರು ಮುನಿಸು ಬಿಟ್ಟು ಮತ್ತೇ ಮಾತಾಡಲು ಶುರು ಮಾಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment