/newsfirstlive-kannada/media/post_attachments/wp-content/uploads/2025/05/mouna-guddemani.jpg)
ಕನ್ನಡ ಕಿರುತೆರೆ ನಟಿ, ರಾಮಾಚಾರಿ ಸೀರಿಯಲ್ ಮೂಲಕ ಫೇಮಸ್ ಆಗಿದ್ದ ಮೌನ ಗುಡ್ಡೆಮನೆ ಕೆಂಡ ಕಾರುತ್ತಿದ್ದಾರೆ. ಕುಲದಲ್ಲಿ ಕೀಳ್ಯಾವುದೋ ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ನಟಿ ಮೌನ ಅವರದ್ದೇ ಚಿತ್ರದ ನಾಯಕನ ವಿರುದ್ಧ ಕೆಂಡ ಕಾರಿದ್ದಾರೆ.
ಇದನ್ನೂ ಓದಿ: ಮಂಗಳೂರಲ್ಲಿ ಕರುಳು ಚುರ್ ಅನ್ನೋ ದೃಶ್ಯ.. ಗುಡ್ಡ ಕುಸಿತದಲ್ಲಿ ಸಿಲುಕಿ ಕೈ ಅಲ್ಲಾಡಿಸ್ತಿದೆ ಪುಟ್ಟ ಕಂದಮ್ಮ..
ಸಹ ನಟಿಗೆ ಕಿರುಕುಳ, ಲೈಂಗಿಕ ದೌರ್ಜನ್ಯ, ವಂಚನೆ ಪ್ರಕರಣದಲ್ಲಿ ನಟ ಮಡೆನೂರು ಮನು ಜೈಲಿನಲ್ಲಿದ್ದಾರೆ. ಸಾಲು ಸಾಲು ಗಂಭೀರ ಆರೋಪ ಮಧ್ಯೆ ಮಡೆನೂರು ಮನು ಕನ್ನಡದ ಸ್ಟಾರ್ ನಟರ ಬಗ್ಗೆ ಮಾತಾಡಿರೋ ಆಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಆ ಆಡಿಯೋದಲ್ಲಿ ಮಡೆನೂರು ಮನು ನಟ ಶಿವರಾಜ್ ಕುಮಾರ್, ದರ್ಶನ್, ಧ್ರುವ ಸರ್ಜಾ ಅವರ ಬಗ್ಗೆ ಕೆಟ್ಟದಾಗಿ ಮಾತಾಡಿದ್ದರು. ಇದೇ ಆ ಆಡಿಯೋದಲ್ಲಿ ವೈರಲ್ ಆದ ಬೆನ್ನಲ್ಲೇ ಫಿಲ್ಮ್ ಚೇಂಬರ್ ಮಡೆನೂರು ಮನುನನ್ನು ಕಿರಿತೆರೆ ಹಾಗೂ ಹಿರಿತೆರೆಯಿಂದ ಬ್ಯಾನ್ ಮಾಡಲಾಗಿತ್ತು.
View this post on Instagram
ಇದೀಗ ಇದೇ ಆಡಿಯೋ ವಿಚಾರವಾಗಿ ಮಾತಾಡಿದ ನಟಿ, ಮಡೆನೂರು ಮನು ವಿರುದ್ಧ ಸಿಟ್ಟಿನಲ್ಲಿ ಮಾತಾಡಿದ್ದಾರೆ. ನನ್ನ ಮೊದಲ ಚಿತ್ರವೇ ಹೀಗಾಯ್ತಲ್ಲ ಎನ್ನುವ ಬೇಸರ ನನಗೆ ತುಂಬಾ ಇದೆ. ಚಿತ್ರರಂಗಕ್ಕೆ ನಾನು ಹೊಸಬಳು ಚಿತ್ರದಲ್ಲಿ ಕೇವಲ ಮಡೆನೂರು ಮನು ಮಾತ್ರ ಅಭಿನಯಿಸಿಲ್ಲ ನಾನು ಕೂಡ ಆಕ್ಟ್ ಮಾಡಿದ್ದೇನೆ, ನನ್ನ ಜೊತೆ ಇನ್ನು ಹಲವಾರು ಕಲಾವಿದರು ಚಿತ್ರದಲ್ಲಿದ್ದಾರೆ, ಎಲ್ಲರನ್ನು ಒಂದು ಕಡೆ ಸೇರಿಸಿ ಒಂದೊಳ್ಳೆಯ ಚಿತ್ರವನ್ನು ಕೂಡ ಮಾಡಿದ್ದಾರೆ. ಆದರೆ ಈ ಪ್ರಕರಣದಿಂದಾಗಿ ನಾನು ಮಾನಸಿಕ ಒತ್ತಡಕ್ಕೊಳಗಾದೆ. ಆರಂಭದಲ್ಲಿ ಈ ವಿಚಾರ ಹೊರ ಬಂದಾಗ ನಾನು ಧೈರ್ಯವಾಗಿದ್ದೆ, ಆದರೂ ಕೂಡ ಆತಂಕ ಇದ್ದೇ ಇತ್ತು ಎಂದಿರುವ ಮೌನ ಗುಡ್ಡೆಮನೆ ಹೋಗಿ ಹೋಗಿ ಇಂತಹ ಚಿತ್ರ ಮಾಡಿದ್ದೀಯಾ ಅಲ್ಲ ಎಂದು ತುಂಬಾ ಜನ ನನಗೆ ಹೇಳಿದರು. ಈ ಚಿತ್ರಕ್ಕೆ ತುಂಬಾ ಶ್ರಮ ಹಾಕಿದ್ವಿ ಆದರೆ ಹೀಗಾಗೋಯ್ತು. ನಾನು ದರ್ಶನ್ ಅವರ ಬಹು ದೊಡ್ಡ ಅಭಿಮಾನಿ. ಆ ಆಡಿಯೋದಿಂದ ನನಗೆ ತೀವೃ ನೋವಾಗಿದೆ. ಅದೆಲ್ಲ ಕೇಳಿದರೆ ನಮ್ಮ ರಕ್ತ ಕುದಿಯುತ್ತೆ ಅಂತ ಕೆಂಡ ಕಾರಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ