newsfirstkannada.com

6 ಗಂಟೆ ವಾಯ್ಸ್​ ನೋಟ್.. ಅಭಿಮಾನಿಯ ಮೆಸೇಜ್‌ ನೋಡಿ ದಂಗಾದ ನಟಿ ಮೃಣಾಲ್‌ ಠಾಕೂರ್‌; ಏನದು?

Share :

Published July 23, 2024 at 7:55pm

    ತನಗೆ ಬಂದ ವಾಯ್ಸ್​ ನೋಟ್​ ನೋಡಿ ಬೆಚ್ಚಿ ಬಿದ್ದ ಮೃಣಾಲ್ ಠಾಕೂರ್

    ಸೀತಾ ರಾಮಂ ಸಿನಿಮಾದ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದ ನಟಿ

    ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಯ್ತು ಈ ಫೋಟೋ!

ಸೀತಾ ರಾಮಂ ಚಿತ್ರದಲ್ಲಿ ನಟಿಸುವ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದ ಬಾಲಿವುಡ್​ ನಟಿ ಮೃಣಾಲ್ ಠಾಕೂರ್ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಸೀತಾ ರಾಮಂ ಚಿತ್ರದಲ್ಲಿ ನಟಿಸಿದ್ದ ನಟಿ ಮೃಣಾಲ್ ಠಾಕೂರ್ ಅಭಿನಯಕ್ಕೆ ಅದೆಷ್ಟೋ ಜನರು ಮಾರು ಹೋಗಿದ್ದಾರೆ.

ಇದನ್ನೂ ಓದಿ: 2 ತಿಂಗಳ ಗರ್ಭಿಣಿ ಪತ್ನಿಗೆ ಚೂರಿ ಇರಿದ ನೇತ್ರಾವತಿ ಧಾರಾವಾಹಿ ನಟ.. ಗರ್ಭಪಾತವಾಗಿ ಆಸ್ಪತ್ರೆಗೆ ದಾಖಲು

ಆಗಾಗ ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸಾಕಷ್ಟು ಚರ್ಚೆಯಲ್ಲಿ ಇರೋ ನಟಿ ಮೃಣಾಲ್ ಠಾಕೂರ್ ಅವರಿಗೆ ಅಭಿಮಾನಿಯೊಬ್ಬರು ಬರೋಬ್ಬರಿ 6 ಗಂಟೆಯ ವಾಯ್ಸ್​ ನೋಟ್​ ಅನ್ನು ಕಳುಹಿಸಿದ್ದಾರೆ. ಹೌದು, ನಟಿ ಮೃಣಾಲ್ ಠಾಕೂರ್ ಅವರು ಸೀತಾ ರಾಮಂ ಸಿನಿಮಾದ ಮಾಡಿದ ಮೂಲಕವೇ ಸಖತ್​ ಫೇಮಸ್ ಆಗಿದ್ದರು. ಇದಾದ ಬಳಿಕ ನಟಿಯ ಬಗ್ಗೆ ಸಾಕಷ್ಟು ಅಭಿಮಾನಿಗಳು ಅವರ ಅದ್ಭುತ ನಟನೆಯ ಬಗ್ಗೆ ಹಾಡಿ ಹೊಗಳಿದ್ದರು.

ಆದರೆ ನಟಿಯ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಅಭಿಮಾನಿಯೊಬ್ಬರು ಅವರ ಬಗ್ಗೆ ಹಾಡಿ ಹೊಗಳಿದ್ದಾರೆ. ಅದು 6 ಗಂಟೆ, 2 ನಿಮಿಷ, 57 ಸೆಕೆಂಡ್​ ಕುರಿತು ವಾಯ್ಸ್​ ನೋಟ್ ಕಳುಹಿಸಿದ್ದಾರೆ. ಆ ವಾಯ್ಸ್​ ನೋಟ್​ನಲ್ಲಿ ನಟಿ ಮೃಣಾಲ್ ಠಾಕೂರ್ ಬಗ್ಗೆ ಸಾಕಷ್ಟು ಮಾತಾಡಿದ್ದಾರಂತೆ. ಅಭಿಮಾನಿ ಕಳುಸಿರೋ ವಾಯ್ಸ್​ ನೋಟ್​ ಅನ್ನು ನಟಿ ತಮ್ಮ ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. 6 ಗಂಟೆ, 2 ನಿಮಿಷ, 57 ಸೆಕೆಂಡ್​ ವಾಯ್ಸ್​ ನೋಟ್‌ನಲ್ಲಿ ಮೃಣಾಲ್ ಠಾಕೂರ್ ಅವರನ್ನು ಹೊಗಳಿ, ಹೊಗಳಿ ಅಟ್ಟಕ್ಕೇರಿಸಲಾಗಿದ್ಯಂತೆ.

ಇದೇ ಫೋಟೋವನ್ನು ನೋಡಿದ ನೆಟ್ಟಿಗರು, ಪ್ರತಿಯೊಬ್ಬ ಅಭಿಮಾನಿ ಕೂಡ ತಮ್ಮ ನೆಚ್ಚಿನ ನಟ, ನಟಿಯರಿಗೆ ಈ ರೀತಿಯ ಪೋಸ್ಟ್‌ಗಳನ್ನು ಕಳಿಸುತ್ತಾ ಇರುತ್ತಾರೆ. ಇದಕ್ಕೆ ನಟಿ ನಿಜವಾಗಿಯೂ ಅದಕ್ಕೆ ಅರ್ಹರು ಎಂದು ಕಾಮೆಂಟ್​ ಮಾಡಿದ್ದಾರೆ. ಇನ್ನೂ ಕೆಲವರು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ 1 ನಿಮಿಷಕ್ಕಿಂತ ಹೆಚ್ಚು ವಾಯ್ಸ್​ ನೋಟ್​ ಅನ್ನು ಕಳುಹಿಸಲು ಅನುಮತಿ ಇದೆಯೇ? ಅದನ್ನು ಕಳುಸಿದ ವ್ಯಕ್ತಿ ಸೈಕೋ ಫ್ಯಾನ್ ಇರಬೇಕು ಅಂತ ಗೇಲಿ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

6 ಗಂಟೆ ವಾಯ್ಸ್​ ನೋಟ್.. ಅಭಿಮಾನಿಯ ಮೆಸೇಜ್‌ ನೋಡಿ ದಂಗಾದ ನಟಿ ಮೃಣಾಲ್‌ ಠಾಕೂರ್‌; ಏನದು?

https://newsfirstlive.com/wp-content/uploads/2024/07/mrunal-thakur1.jpg

Load More