ಕೊನೆ ಕ್ಷಣದಲ್ಲಿ ಕರ್ಣ ಸೀರಿಯಲ್ ಮುಂದೂಡಿಕೆ​.. ಕೈ ಮುಗಿದು ಕ್ಷಮೆ ಕೇಳಿದ ನಮ್ರತಾ ಗೌಡ

author-image
Veena Gangani
Updated On
ಕೊನೆ ಕ್ಷಣದಲ್ಲಿ ಕರ್ಣ ಸೀರಿಯಲ್ ಮುಂದೂಡಿಕೆ​.. ಕೈ ಮುಗಿದು ಕ್ಷಮೆ ಕೇಳಿದ ನಮ್ರತಾ ಗೌಡ
Advertisment
  • ವೀಕ್ಷಕರಲ್ಲಿ ಕ್ಷಮೆಯಾಚಿಸಿದ ನಟಿ ನಮ್ರತಾ ಗೌಡ
  • ಸೀರಿಯಲ್​ ನೋಡಬೇಕೆಂದು ಕಾಯುತ್ತಿದ್ದ ಫ್ಯಾನ್ಸ್
  • ಕರ್ಣ ಸೀರಿಯಲ್​​ಗೆ ಸಮಸ್ಯೆ ಆಗಿದ್ದೇನು? ನಟಿ ಏನಂದ್ರು?

ಕನ್ನಡ ಕಿರುತೆರೆಯಲ್ಲಿ ಬಹುನಿರೀಕ್ಷೆ ಹುಟ್ಟಿಸಿದ್ದ ಧಾರಾವಾಹಿ ಎಂದರೆ ಅದು ಕರ್ಣ. ಅಂದುಕೊಂಡಂತೆ ನಿನ್ನೆ ಅಂದರೆ ಸೋಮವಾರ ಮೊದಲ ಎಪಿಸೋಡ್ ಟೆಲಿಕಾಸ್ಟ್ ಆಗಬೇಕಿತ್ತು. ಭವ್ಯಾ, ಕಿರಣ್​ ರಾಜ್​ ಹಾಗೂ ನಮ್ರತಾ ಗೌಡ ಜೋಡಿಯ ಪ್ರೋಮೋ ಈಗಾಗಲೇ ಕನ್ನಡ ನಾಡಿನ ಜನರ ಮನ ಗೆದ್ದಿತ್ತು. ಸೋಮವಾರ ರಾತ್ರಿ 8.00 ಗಂಟೆಗೆ ಅದ್ಧೂರಿಯಾಗಿ ತೆರೆಗೆ ಬರಬೇಕಿದ್ದ ಕರ್ಣ ಏಕಾಏಕಿ ಮುಂದೂಡಿಕೆಯಾಗಿದೆ.

ಇದನ್ನೂ ಓದಿ: ಕರ್ಣ ಸೀರಿಯಲ್‌ ಲಾಂಚ್ ಆಗಲೇ ಇಲ್ಲ.. ಬೇಸರದಲ್ಲೇ ಕ್ಷಮೆ ಕೇಳಿದ ನಟ ಕಿರಣ್ ರಾಜ್

publive-image

ಈ ಬಗ್ಗೆ ಖುದ್ದು ನಟ ಕಿರಣ್ ರಾಜ್ ಅವರೇ ವೀಕ್ಷಕರಲ್ಲಿ ಕ್ಷಮೆಯಾಚಿಸಿದ್ದರು. ಇದೀಗ ಕರ್ಣ ಸೀರಿಯಲ್​ನಲ್ಲಿ ನಿತ್ಯ ಪಾತ್ರದಲ್ಲಿ ನಟಿಸಿರೋ ನಟಿ ನಮ್ರತಾ ಗೌಡ ಅವರು ವೀಕ್ಷಕರಿಗೆ ಕೈ ಮುಗಿದು ಕ್ಷಮೆ ಕೇಳಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ನೀವೆಲ್ಲಾ ಕೇಳುತ್ತಿರೋ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ತುಂಬಾ ಜನ ಮೆಸೇಜ್​ ಮಾಡಿದ್ರಿ. 16ನೇ ತಾರೀಖು ಪ್ರಸಾರ ಆಗಬೇಕಿದ್ದ ಕರ್ಣ ಧಾರಾವಾಹಿ ಏಕೆ ಪ್ರಸಾರ ಆಗಲಿಲ್ಲ ಅಂತ ಕೇಳಿದ್ರಿ. ಆದ್ರೆ ಇಡೀ ತಂಡದ ಪರವಾಗಿ ನಾನು ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ. ಕಾರಣಾಂತರಗಳಿಂದ ನಾವು ಬರೋದಕ್ಕೆ ಆಗಿಲ್ಲ. ಆದ್ರೆ ಪ್ರಾಮಿಸ್​ ಮತ್ತೆ 8 ಗಂಟೆಗೆ ನಾವು ಆದಷ್ಟು ಬೇಗನೇ ಬರುತ್ತೇವೆ ಅಂತ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment