‘ಕರ್ಣಗೆ ಮೊದಲೇ ಸೆಲೆಕ್ಟ್ ಆಗಿದ್ದೆ ಆದ್ರೆ’.. ನಮ್ರತಾ ಗೌಡ ಹೊಸ ಪಾತ್ರದ​ ಬಗ್ಗೆ ಏನಂದ್ರು?

author-image
Veena Gangani
Updated On
‘ಕರ್ಣಗೆ ಮೊದಲೇ ಸೆಲೆಕ್ಟ್ ಆಗಿದ್ದೆ ಆದ್ರೆ’.. ನಮ್ರತಾ ಗೌಡ ಹೊಸ ಪಾತ್ರದ​ ಬಗ್ಗೆ ಏನಂದ್ರು?
Advertisment
  • ನಾಗಿಣಿ ಸೀರಿಯಲ್​ ಮೂಲಕ ಫೇಮಸ್​ ಆಗಿದ್ದ ನಮ್ರತಾ ಗೌಡ
  • ಬಿಗ್​ಬಾಸ್​ ಶೋ ಬಳಿಕ ಮತ್ತೆ ಕಿರುತೆರೆ ಲೋಕಕ್ಕೆ ಕಾಲಿಟ್ಟ ನಟಿ
  • ಕರ್ಣ ಸೀರಿಯಲ್​ನಲ್ಲಿ ನಮ್ರತಾ ನಿತ್ಯ ಪಾತ್ರ ಒಪ್ಪಿಕೊಂಡಿದ್ದು ಹೇಗೆ?

ಕರ್ಣ.. ಶ್ರುತಿ ನಾಯ್ಡು ಸಂಸ್ಥೆಯಿಂದ ಮೂಡಿ ಬರ್ತಿರೋ ಬಹು ನಿರೀಕ್ಷಿತ ಧಾರಾವಾಹಿ. ನಾವು ಮಾಹಿತಿ ನೀಡಿದಂತೆ ಕಿರಣ್​ ರಾಜ್​ಗೆ ನಾಯಕಿಯರಾಗಿ ಭವ್ಯಾ ಗೌಡ ಹಾಗೂ ನಮ್ರತಾ ಗೌಡ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಇದನ್ನೂ ಓದಿ: ಭರ್ಜರಿ ಬ್ಯಾಚುಲರ್ಸ್ ವೇದಿಕೆ ಮೇಲೆ ರಚಿತಾ ರಾಮ್​ ಗರಂ.. ಅಷ್ಟಕ್ಕೂ ಹುಲಿ ಕಾರ್ತಿಕ್ ಮಾಡಿದ್ದೇನು?

publive-image

ಸದ್ಯ ಕರ್ಣ ಸೀರಿಯಲ್​ನ ಒಂದೊಂದು ಪ್ರೋಮೋಗಳು ರಿಲೀಸ್ ಆಗುತ್ತಿದ್ದು, ವೀಕ್ಷಕರು ಅದಕ್ಕೆ ಭರ್ಜರಿ ರೆಸ್ಪಾನ್ಸ್​ ನೀಡುತ್ತಿದ್ದಾರೆ. ಈ ಹೈ ಬಜೆಟ್​ ಧಾರಾವಾಹಿಗೆ ನಮ್ರತಾ ಗೌಡ ನಟಿಸೋದಕ್ಕೆ ಒಪ್ಪಿಕೊಂಡಿದ್ದು ಹೇಗೆ ಅಂತ ನ್ಯೂಸ್​ ಫಸ್ಟ್​ ಸಂದರ್ಶನದಲ್ಲಿ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಈ ಬಗ್ಗೆ ನ್ಯೂಸ್​ ಫಸ್ಟ್​ ಸಂದರ್ಶನದಲ್ಲಿ ಮಾತಾಡಿದ ನಟಿ ನಮ್ರತಾ ಗೌಡ, ಜೀ ಕನ್ನಡ ನನಗೆ ಯಾವಾಗಲೂ ಸ್ಪೆಷಲ್​. ನನ್ನಲ್ಲಿ ನಂಬಿಕೆ ಇಟ್ಟು ಕರ್ಣ ಧಾರಾವಾಹಿಯಲ್ಲಿ ನಿತ್ಯ ಅನ್ನೋ ಪಾತ್ರ ಕೊಟ್ಟಿದ್ದಾರೆ. ತುಂಬಾ ಜನ ಕೇಳಿದ್ದಾರೆ ಏಕೆ ಕರ್ಣ ಅಂತ. ಈ ಹಿಂದೆ ನಾನು ತುಂಬಾ ಪಾತ್ರಗಳಲ್ಲಿ ಅಭಿನಯಿಸಿದ್ದೇನೆ. ಮಹಿಳಾ ಪ್ರಧಾನ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಈ ಹಿಂದೆನೂ ಕರ್ಣ ಧಾರಾವಾಹಿ ಶುರುವಾಗಬೇಕಾಗಿತ್ತು. ಆದ್ರೆ ಕಾರಣಾತರಗಳಿಂದ ಶುರುವಾಗಲಿಲ್ಲ. ಹೀಗಾಗಿ ನನಗೆ ಮೂಡ್​ ಆಫ್​ ಆಯ್ತು. ನನಗೆ ತುಂಬಾ ಕಥೆಗಳು ಬರ್ತಾ ಇತ್ತು. ಆದ್ರೆ ಒಪ್ಪಿಕೊಳ್ಳಬೇಕು ಅಂತ ಅನಿಸಿದ್ರೂ ಬೇಡ ಅಂತ ಅಸಮಾಧಾನ  ಹೊರ ಹಾಕುತ್ತಿದ್ದೆ. ಆದ್ರೆ, ಮತ್ತೊಮ್ಮೆ ಕರ್ಣ ಆಫರ್​ ಬಂತು. ಆಗ ನಾನು ಈ ಬಗ್ಗೆ ವಿಚಾರಿಸಿದ್ದಾಗ ಕರ್ಣ ಧಾರಾವಾಹಿಯನ್ನು ಒಪ್ಪಿಕೊಂಡೆ ಅಂತ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment