2 ಮಕ್ಕಳ ತಾಯಿಯಾದ ಮೇಲೂ ತರುಣಿಯಂತೆ ಕಾಣ್ತಾರೆ.. ನಯನತಾರಾ ಡಯಟ್ ಸಿಕ್ರೇಟ್ ರಿವೀಲ್..!

author-image
Ganesh
Updated On
2 ಮಕ್ಕಳ ತಾಯಿಯಾದ ಮೇಲೂ ತರುಣಿಯಂತೆ ಕಾಣ್ತಾರೆ.. ನಯನತಾರಾ ಡಯಟ್ ಸಿಕ್ರೇಟ್ ರಿವೀಲ್..!
Advertisment
  • ಸೌತ್ ಇಂಡಸ್ಟ್ರಿ, ಬಾಲಿವುಡ್‌ನಲ್ಲಿ ಜನಪ್ರಿಯತೆ
  • ನಯನತಾರಾ ಬ್ಯೂಟಿ ಹಿಂದಿನ ರಹಸ್ಯ ಏನು?
  • ಎಳೆನೀರು ಅಂದರೆ ನಯನತಾರಾಗೆ ಸಿಕ್ಕಾಪಟ್ಟೆ ಇಷ್ಟ

ಸೌತ್ ಇಂಡಸ್ಟ್ರಿ ಮತ್ತು ಬಾಲಿವುಡ್‌ನಲ್ಲಿ ಹೆಸರು ಮಾಡಿರುವ ನಯನತಾರಾ ಸಖತ್ ಫಿಟ್ ಅಂಡ್ ಫೈನ್. ತಮ್ಮ 38ನೇ ವಯಸ್ಸಿನಲ್ಲೂ 18 ವರ್ಷದ ತರುಣಿಯಂತೆ ಕಾಣ್ತಾರೆ. ಎರಡು ಮಕ್ಕಳ ತಾಯಿಯಾದ ನಂತರವೂ ನಯನತಾರಾ ಅವರ ಫಿಟ್‌ನೆಸ್​ಗೆ ಸಲಾಂ ಹೇಳಲೇಬೇಕು. ನಟನೆ ಮತ್ತು ತಮ್ಮ ನೋಟದಿಂದ ಈಗಲೂ ಗಮನ ಸೆಳೆಯುವ ಬ್ಯೂಟಿಯ ಸಿಕ್ರೇಟ್ ಇಲ್ಲಿದೆ.

ನಟಿ ಪರಿಪೂರ್ಣ ಆಹಾರದ ಜೊತೆಗೆ ವರ್ಕೌಟ್‌ಗಳತ್ತ ಗಮನ ಹರಿಸುತ್ತಾರೆ. ಫಿಟ್‌ನೆಸ್ ಬಗ್ಗೆ ತುಂಬಾ ಜಾಗೃತರಾಗಿರುವ ಅವರು, ಪ್ರತಿದಿನ ವರ್ಕ್ ಔಟ್ ಮಾಡುತ್ತಾರೆ. ಕಾರ್ಡಿಯೋ (cardio exercise) ಮತ್ತು ತೂಕದ ತರಬೇತಿಯು ಅವರ ನೆಚ್ಚಿನ ಮತ್ತು ಅತ್ಯಂತ ಪ್ರಮುಖ ಫಿಟ್ನೆಸ್ ಮಂತ್ರವಾಗಿದೆ. ಪ್ರತಿದಿನ ವರ್ಕೌಟ್ ಮಾಡೋದನ್ನು ತಪ್ಪಿಸಿಕೊಳ್ಳಲ್ಲ.

ಇದನ್ನೂ ಓದಿ:ರೆಹಮಾನ್​- ಸೈರಾ ಬಾನುವಿನಿಂದ ಬಿಲ್​ಗೇಟ್ಸ್​​ವರೆಗೆ ; ದೀರ್ಘಕಾಲದ ದಾಂಪತ್ಯಗಳು ಮುರಿದು ಬೀಳುತ್ತಿರುವುದೇಕೆ?

publive-image

ಡಯಟ್ ಸೀಕ್ರೆಟ್
ನಯನತಾರಾ ಡಯಟ್ ಬ್ಯಾಲೆನ್ಸ್ ಆಗಿರ್ತಾರೆ. ಕ್ರ್ಯಾಶ್ ಡಯಟ್ (crash diet) ಫಾಲೋ ಮಾಡಲ್ಲ. ಆರೋಗ್ಯಕರ ಆಹಾರವನ್ನು ಸೇವಿಸುತ್ತಾರೆ. ಹಣ್ಣುಗಳು, ತರಕಾರಿಗಳು, ಮಾಂಸ, ಮೊಟ್ಟೆಗಳು ಮತ್ತು ಪ್ರೋಟೀನ್ ಮತ್ತು ಫೈಬರ್ ಸಮೃದ್ಧವಾಗಿರುವ ಎಲ್ಲಾ ಬಗೆಯ ಆಹಾರಗಳನ್ನು ಸೇವನೆ ಮಾಡುತ್ತಾರೆ.

ಪ್ರತಿನಿತ್ಯ ಎಳೆನೀರು ಸೇವನೆ
ನಯನತಾರಾ ಅವರಿಗೆ ಎಳೆನೀರು ಅಂದರೆ ತುಂಬಾ ಇಷ್ಟ. ಬೆಳಗಿನ ದಿನಚರಿಯನ್ನು ಎಳೆನೀರು ಕುಡಿಯುವ ಮೂಲಕವೇ ಆರಂಭಿಸುತ್ತಾರಂತೆ. ಇದರಲ್ಲಿ ಕಡಿಮೆ ಕ್ಯಾಲೋರಿ ಮತ್ತು ಖನಿಜಗಳಿಂದ ಸಮೃದ್ಧವಾಗಿರುತ್ತದೆ. ಜೊತೆಗೆ ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.

publive-image

ಸಕ್ಕರೆ ತಿನ್ನಲ್ಲ
ನಯನತಾರಾ ಫಿಟ್‌ನೆಸ್ ಕಾಪಾಡಿಕೊಳ್ಳಲು ಸಕ್ಕರೆಯಿಂದ ದೂರ ಇದ್ದಾರೆ. ತಮ್ಮ ಆಹಾರದಲ್ಲಿ ಸಂಸ್ಕರಿಸಿದ ಸಕ್ಕರೆಯನ್ನು ತೆಗೆದುಕೊಳ್ಳುವುದಿಲ್ಲ. ಹೆಚ್ಚಾಗಿ ಸಿಹಿಯನ್ನೂ ಅವೈಡ್ ಮಾಡ್ತಾರೆ.

ದ್ರವ ಪದಾರ್ಥ ಸೇವನೆ
ಕೇವಲ ಎಳೆ ನೀರು ಮಾತ್ರವಲ್ಲದೇ ಜ್ಯೂಸ್​ಗಳನ್ನು ಹೆಚ್ಚು ಸೇವಿಸುತ್ತಾರೆ. ಜೊತೆಗೆ ಸೂಪ್ ಕೂಡ ತೆಗೆದುಕೊಳ್ತಾರೆ. 4-5 ಲೀಟರ್ ನೀರನ್ನು ಪ್ರತಿದಿನ ಸೇವಿಸುತ್ತಾರೆ.

ಇದನ್ನೂ ಓದಿ:ಟೆನ್ಷನ್ ಬಿಟ್ಹಾಕಿ ಕೂಲ್ ಆಗಿರಿ.. ಈ 4 ಮಾರ್ಗಗಳನ್ನ ಪಾಲಿಸಿದ್ರೆ ಒತ್ತಡದಿಂದ ಪಾರಾಗಬಹುದು; ನೀವೂ ಟ್ರೈ ಮಾಡಿ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment