newsfirstkannada.com

ಚಿನ್ನು, ಗೊಂಬೆ ಲೈಫ್​ನಲ್ಲಿ ನಡೀತಿವೆ ಒಂದೇ ರೀತಿ ಘಟನೆಗಳು; ಅದು ಹೇಗೆ ಸಾಧ್ಯ.. ನೇಹಾ ಗೌಡ ಹೇಳಿದ್ದೇನು?

Share :

Published September 4, 2024 at 9:09pm

    ನಾವಿಬ್ಬರು ಶೇರ್ ಮಾಡಿಕೊಳ್ಳುವುದು ತುಂಬಾನೇ ಇದೆ ಎಂದ ನಟಿ

    ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ ನಟಿ ನೇಹಾ ಗೌಡ ಹೇಳಿಕೆ

    ವೀಕ್ಷಕರ ಮನಸ್ಸಲ್ಲಿ ಹಸಿರಾಗಿ ಉಳಿದುಕೊಂಡಿದ್ದಾರೆ ಈ ಜೋಡಿ

ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಧಾರಾವಾಹಿಗಳು ಬಂದು ಹೋಗಿವೆ. ಆದರೆ ಅದರಲ್ಲಿ ಕೆಲವೊಂದು ಸೀರಿಯಲ್​ಗಳು ಮಾತ್ರ ವೀಕ್ಷಕರ ಮನಸ್ಸಲ್ಲಿ ಹಚ್ಚ ಹಸಿರಾಗಿ ಉಳಿದುಕೊಳ್ಳುತ್ತವೆ. ಅದೇ ಸಾಲಿನಲ್ಲಿ ಲಕ್ಷ್ಮೀ ಬಾರಮ್ಮ ಸೀರಿಯಲ್​ ಇದೆ. ಲಕ್ಷ್ಮೀ ಬಾರಮ್ಮ ಸೀರಿಯಲ್​ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದಿರೋ ಜೋಡಿ ಎಂದ್ರೆ ಅದು ಚಿನ್ನು ಹಾಗೂ ಗೊಂಬೆ.

ಇದನ್ನೂ ಓದಿ: ಕೆರೆ ಪಕ್ಕದಲ್ಲಿ ‘ಲಕ್ಷ್ಮೀ ಬಾರಮ್ಮ’ ಚಿನ್ನು ಕ್ಯೂಟ್​ ಬೇಬಿ ಬಂಪ್; ನಟಿಯ ಲುಕ್​ಗೆ ಫ್ಯಾನ್ಸ್​ ಫಿದಾ

ಚಿನ್ನು ಪಾತ್ರದಲ್ಲಿ ನಟಿ ಕವಿತಾ ಗೌಡ ಅಭಿನಯಿಸಿದ್ದರು. ಗೊಂಬೆ ಪಾತ್ರದಲ್ಲಿ ನೇಹಾ ಗೌಡ ನಟಿಸಿದ್ದರು. ಇದೇ ಸೀರಿಯಲ್​ ಮೂಲಕ ಈ ಇಬ್ಬರು ಸಹ ಈಗಲೂ ವೀಕ್ಷಕರ ಮನಸ್ಸಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿದ್ದಾರೆ. ಆದರೆ ಈ ಇಬ್ಬರ ಜೀವನ ಸೀರಿಯಲ್​​ ಸ್ಕ್ರಿಪ್ಟ್ ರೀತಿಯಲ್ಲೇ ಇದೆಯಂತೆ. ಸೀರಿಯಲ್​ನಲ್ಲಿ ಏನೆಲ್ಲಾ ಆಗಿದೆಯೋ ಹಾಗೇ ನಮ್ಮ ಜೀವನದಲ್ಲಿ ನಡೆಯುತ್ತಿದೆಯಂತೆ.

ಅದಕ್ಕೆ ಸಾಕ್ಷಿ ಎಂಬಂತೆ ನಟಿ ನೇಹಾ ಗೌಡ ಬಹುಕಾಲದ ಗೆಳೆಯ ಹಾಗೂ ಅಂತರಪಟ ಸೀರಿಯಲ್ ನಟ ಚಂದನ್ ಫೆಬ್ರವರಿ 18, 2018ರಂದು ಮದುವೆಯಾಗಿದ್ದರು. ಮದುವೆಯಾದ 6 ವರ್ಷಗಳ ಬಳಿ ನಟಿ ನೇಹಾ ಗೌಡ ಗರ್ಭಿಣಿ ಆಗ್ತಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ನೇಹಾ ಹಾಗೂ ನಟ ಚಂದನ್ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೆ ಗುಡ್​ನ್ಯೂಸ್ ಹಂಚಿಕೊಂಡಿದ್ದರು.

ಇದನ್ನೂ ಓದಿ: ನೇಹಾ ಗೌಡ ಸೀಮಂತ ಶಾಸ್ತ್ರದಲ್ಲಿ ತಾರೆಯರ ಬಳಗ; ಯಾರೆಲ್ಲಾ ಬಂದಿದ್ರು? ಫೋಟೋಗಳು ಇಲ್ಲಿವೆ ನೋಡಿ!

ಇನ್ನು,  ಕವಿತಾ ಗೌಡ ಹಾಗೂ ನಟ ಚಂದನ್​ ಕುಮಾರ್​ ಈ ಇಬ್ಬರು ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ನಟಿಸಿದ್ದರು. ತದನಂತರ ಲಾಕ್‌ಡೌನ್ ಸಮಯದಲ್ಲಿ ಜೋಡಿ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಬಳಿಕ 2021 ಮೇ 14ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಸ್ಟಾರ್ ದಂಪತಿ ಕೂಡ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ. ಈ ಬಗ್ಗೆ ಕೂಡ ಕವಿತಾ ಗೌಡ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು.

ಇದೇ ವಿಚಾರವಾಗಿ ನ್ಯೂಸ್​ ಫಸ್ಟ್​ನೊಂದಿಗೆ ಮಾತಾಡಿದ ನಟಿ ನೇಹಾ ಗೌಡ, ಸೀರಿಯಲ್​ನಲ್ಲಿ ಅವರೊಟ್ಟಿಗೆ ಒಂದು ಕ್ಲೋಸ್​ ಬಾಡಿಂಗ್​ ಇದೆ. ಅವರು ಕೂಡ ಆ ಬಾಂಡ್​ಗೆ ತುಂಬಾ ಪ್ರೀತಿ ಕೊಟ್ಟಿದ್ದಾರೆ. ಸೀರಿಯಲ್ ಮುಗಿದ ಬಳಿಕ ಕೂಡ ನಮ್ಮ ಮಧ್ಯೆ ಆ ಬಾಂಡ್​ ಹಂಗೇ ಇದೆ. ನಾವಿಬ್ಬರು ಯಾವುದೇ ರೀತಿಯಲ್ಲೂ ಈ ಬಗ್ಗೆ ಮಾತಾಡಿರಲಿಲ್ಲ. ನಮ್ಮಿಬ್ಬರಿಗೂ ಒಂಥರಾ ಸರ್ಪ್ರೈಸ್ ಆಗಿದೆ. ಕಾಕತಾಳೀಯವಾಗಿ ಅದು ಆದಾಗ ತುಂಬಾ ಖುಷಿ ಆಯ್ತು. ಸೀರಿಯಲ್ ಶೂಟಿಂಗ್​ ಸಂದರ್ಭದಲ್ಲಿ ಎಷ್ಟೊಂದು ಸನ್ನಿವೇಶಗಳು ನಮ್ಮ ರಿಯಲ್​ ಲೈಫ್​ನಲ್ಲಿ ಆಗಿದೆ. ನಾವಿಬ್ಬರು ಶೇರ್ ಮಾಡಿಕೊಳ್ಳುವುದು ತುಂಬಾನೇ ಇದೆ. ಫೋನ್ ಮಾಡಿದಾಗ ಸಾಕಷ್ಟು ವಿಚಾರಗಳ ಬಗ್ಗೆ ಮಾತಾಡುತ್ತೇವೆ. ಕೆಲವೊಂದು ಸಿಮ್ಟಮ್ಸ್​ಗಳು ಸೇಮ್​ ಟು ಸೇಮ್​ ಆಗಿವೆ ಅಂತ ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಿನ್ನು, ಗೊಂಬೆ ಲೈಫ್​ನಲ್ಲಿ ನಡೀತಿವೆ ಒಂದೇ ರೀತಿ ಘಟನೆಗಳು; ಅದು ಹೇಗೆ ಸಾಧ್ಯ.. ನೇಹಾ ಗೌಡ ಹೇಳಿದ್ದೇನು?

https://newsfirstlive.com/wp-content/uploads/2024/09/neha-gowda1.jpg

Load More