ಶಕ್ತಿ ದೇವತೆಯ ಮೊರೆ ಹೋದ ಪವಿತ್ರಾ ಗೌಡ.. ಮಂಗಳವಾರದ ವಿಶೇಷ ಪೂಜೆ! ಏನಿದರ ಗುಟ್ಟು?

author-image
admin
Updated On
ಮಡಿಲಕ್ಕಿ ಕೊಟ್ಟು ಕಾನೂನು ಸಂಕಷ್ಟದಿಂದ ಪಾರು ಮಾಡುವಂತೆ ಶಕ್ತಿ ದೇವತೆಗೆ ‘ಪವಿತ್ರ’ ಪ್ರಾರ್ಥನೆ..!
Advertisment
  • ನಿಮಿಷಾಂಭ ದೇವಸ್ಥಾನಕ್ಕೆ ಭೇಟಿ ನೀಡಿದ್ದ ನಟಿ ಪವಿತ್ರಾ ಗೌಡ
  • ಮಂಗಳವಾರವಾದ ಇಂದು ಶಕ್ತಿ ದೇವತೆಗೆ ವಿಶೇಷ ಪೂಜೆ ಸಲ್ಲಿಕೆ
  • ಸಂಕಷ್ಟಗಳಿಂದ ಪಾರಾಗಲು ಶಕ್ತಿ ದೇವತೆ ಮೊರೆ ಹೋದ್ರಾ ಪವಿತ್ರಾ?

ರೇಣುಕಾಸ್ವಾಮಿ ಪ್ರಕರಣದಲ್ಲಿ ಸಾಲು, ಸಾಲು ಸಂಕಷ್ಟ ಎದುರಿಸಿದ ನಟಿ ಪವಿತ್ರಾ ಗೌಡ ಅವರು ಈಗ ಶಕ್ತಿ ದೇವತೆಯ ಮೊರೆ ಹೋಗಿದ್ದಾರೆ.

ನಟ ದರ್ಶನ್‌ ಜೊತೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಪವಿತ್ರಾ ಗೌಡ ಅವರು ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ. ಸೆರೆವಾಸದಿಂದ ದೂರಾಗಿರುವ ಪವಿತ್ರಾ ಗೌಡ ಅವರು ಸದ್ಯ ಬ್ಯಾಕ್ ಟು ಬ್ಯಾಕ್ ಟೆಂಪಲ್ ರನ್ ಮಾಡುತ್ತಿದ್ದಾರೆ.

publive-image

ಇತ್ತೀಚೆಗೆ ನಿಮಿಷಾಂಭ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಪವಿತ್ರಾ ಗೌಡ ಅವರು ಈಗ ಬನಶಂಕರಿ ದೇವಿಯ ಮೊರೆ ಹೋಗಿದ್ದಾರೆ.

ಇದನ್ನೂ ಓದಿ: ವಜ್ರ ಮುನೇಶ್ವರ ದೇವಾಲಯದ ಮುಂದೆ ಪವಿತ್ರಾ ಗೌಡ ತೀರ್ಥಸ್ನಾನ.. ದರ್ಶನ್ ಹೆಸರಲ್ಲಿ ಅರ್ಚನೆ 

publive-image

ಬನಶಂಕರಿ ದೇವಸ್ಥಾನಕ್ಕೆ ಭೇಟಿ ನೀಡಿರುವ ನಟಿ ಪವಿತ್ರ ಗೌಡ ಅವರು ದೇವಿಗೆ ಸೀರೆ, ಮಡಲಕ್ಕಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದ್ದಾರೆ.

publive-image

ಮಂಗಳವಾರವಾದ ಇಂದು ಶಕ್ತಿ ದೇವತೆ ಬನಶಂಕರಿ ಅಮ್ಮನವರ ದರ್ಶನಕ್ಕೆ ಭಕ್ತರು ಆಗಮಿಸುತ್ತಾರೆ. ಮಂಗಳವಾರದ ದಿನ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ರೆ ಶುಭವಾಗಲಿದೆ ಅನ್ನೋದು ಭಕ್ತರ ನಂಬಿಕೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment