ಮಡಿಲಕ್ಕಿ ಕೊಟ್ಟು ಕಾನೂನು ಸಂಕಷ್ಟದಿಂದ ಪಾರು ಮಾಡುವಂತೆ ಶಕ್ತಿ ದೇವತೆಗೆ ‘ಪವಿತ್ರ’ ಪ್ರಾರ್ಥನೆ..!

author-image
Veena Gangani
Updated On
ಮಡಿಲಕ್ಕಿ ಕೊಟ್ಟು ಕಾನೂನು ಸಂಕಷ್ಟದಿಂದ ಪಾರು ಮಾಡುವಂತೆ ಶಕ್ತಿ ದೇವತೆಗೆ ‘ಪವಿತ್ರ’ ಪ್ರಾರ್ಥನೆ..!
Advertisment
  • ಮಂಗಳವಾರದಂದು ಶಕ್ತಿ ದೇವತೆಗೆ ವಿಶೇಷ ಪೂಜೆ ಸಲ್ಲಿಕೆ
  • ಬನಶಂಕರಮ್ಮನ ದೇವಾಲಯಕ್ಕೆ ಪವಿತ್ರಾ ಗೌಡ ಭೇಟಿ
  • ರೇಣುಕಾಸ್ವಾಮಿ ಪ್ರಕರಣದಲ್ಲಿ A1 ಆರೋಪಿಯಾಗಿದ್ದ ನಟಿ

ಸರ್ವಮಂಗಳಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ.. ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋಸ್ತು ತೇ.. ಮಂಗಳಕರವಾದ ಮಂಗಳವಾರ ಎಲ್ಲದರಲ್ಲೂ ಮಂಗಳಕರ.. ಮಂಗಳವಾರದ ದಿನದಂದು ಪವಿತ್ರಾಗೌಡ ಪವಿತ್ರ ದೇವಿಯ ದರ್ಶನ ಪಡೆದಿದ್ದಾರೆ.

ಇದನ್ನೂ ಓದಿ:ಅಯೋಧ್ಯೆ ರಾಮ ಮಂದಿರದಲ್ಲಿ ಆತಂಕದ ವಾತಾವರಣ.. ಏನಾಯ್ತು..?

publive-image

ಇತ್ತೀಚೆಗಷ್ಟೇ ನಟ ದರ್ಶನ್‌ ಕೇರಳದ ಪ್ರಸಿದ್ಧ ದೇವಾಲಯ ಮಡಾಯಿಕಾವು ದೇವಾಲಯಕ್ಕೆ ಭೇಟಿ ನೀಡಿ ಶತ್ರು ಸಂಹಾರ ಪೂಜೆ ನೆರವೇರಿಸಿದ್ರು. ಕೆಲ ದಿನಗಳ ಹಿಂದಷ್ಟೇ ದರ್ಶನ್‌ ತಾಯಿ ಮೀನಾ ತೂಗುದೀಪ್ ನಂಜನಗೂಡು ನಂಜುಂಡೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ರು. ಅಲ್ಲದೇ ಇದೇ ಏಪ್ರಿಲ್ 11ರಂದು ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮಿಯವರು ನಗರ ದೇವತೆ ಅಣ್ಣಮ್ಮನ ಹರಕೆ ತೀರಿಸಿದ್ದಾರೆ. ದರ್ಶನ್ ಕುಟುಂಬದಿಂದ ಟೆಂಪಲ್​ ರನ್​ ಬೆನ್ನಲ್ಲೇ ಪವಿತ್ರಾ ಗೌಡ ಕೂಡ ಟೆಂಪಲ್ ರನ್ ಶುರು ಮಾಡಿದಂತೆ ಕಾಣ್ತಿದೆ.

publive-image

ಅತ್ತ ವಿಜಯಲಕ್ಷ್ಮಿ ಒಂದಾದ ಮೇಲೆ ಒಂದು ದೇವಾಲಯಗಳ ದರ್ಶನಗಳನ್ನ ಮಾಡ್ತಿದ್ರೆ, ಇತ್ತ ಪವಿತ್ರಾ ಗೌಡ ಸಹ ಒಂದರ ಮೇಲೊಂದರಂತೆ ದೇವಾಲಯಗಳ ಭೇಟಿ ಮಾಡ್ತಿದ್ದಾರೆ. ಇತ್ತೀಚೆಗಷ್ಟೇ ನಿಮಿಷಾಂಭ ದೇವಾಲಯಕ್ಕೆ ಪವಿತ್ರಾ ಗೌಡ ಭೇಟಿ ನೀಡಿ ವಿಶೇಷ ಪೂಜೆ ಮಾಡಿಸಿದ್ದರು. ಈಗ ಬೆಂಗಳೂರಿನಲ್ಲಿರೋ ಪ್ರಸಿದ್ಧಿ ಬನಶಂಕರಮ್ಮನ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ತಾಯಿ ಬನಶಂಕರಿಗೆ ಮಡಿಲಕ್ಕಿ ತುಂಬಿದ್ದಾರೆ.

publive-image

ಪವಿತ್ರಾ ಗೌಡ, ರೇಣುಕಾಸ್ವಾಮಿ ಪ್ರಕರಣದ ಎ1 ಆರೋಪಿಯಾಗಿ ಆರು ತಿಂಗಳು ಜೈಲು ವಾಸ ಅನುಭವಿಸಿ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಜಾಮೀನಿನ ಮೇಲೆ ಹೊರ ಬಂದಾಗಿನಿಂದಲೂ ಹಲವು ದೇವಾಲಯಗಳಿಗೆ ಪವಿತ್ರಾ ಗೌಡ ಭೇಟಿ ನೀಡುತ್ತಲೇ ಇದ್ದಾರೆ. ಕುಂಭಮೇಳಕ್ಕೂ ಸುತ್ತಿ ದೇವರ ಆರಾಧನೆ ನಡೆಸ್ತಿರೋ ಪವಿತ್ರಾ ಪೂಜಾ ಪ್ರಯಾಣ ಮುಂದುವರಿದಿದೆ.

publive-image

ಸದ್ಯ ತಮ್ಮ ಮೇಲೆ ಬಂದಿರು ಸಂಕಷ್ಟಗಳನ್ನ ದೂರ ಮಾಡುವಂತೆ ಪವಿತ್ರಾ ಬನಶಂಕರಿ ದೇವಿ ಬಳಿ ಪ್ರಾರ್ಥಿಸಿ ಪೂಜೆ ಸಲ್ಲಿಸಿದ್ದಾರೆ. ದೇವಿಗೆ ಮಡಿಲಕ್ಕಿ ಕೊಟ್ಟು ನಟಿ ಪೂಜೆ ಮಾಡಿಸಿದ್ದಾರೆ. ಒಟ್ಟಾರೆ, ರೇಣುಕಾ ಸ್ವಾಮಿ ಕೇಸ್​ ಕೋರ್ಟ್​ನಲ್ಲಿ ವಿಚಾರಣೆ ನಡೀತಿರುವಾಗ ಈ ರೀತಿಯ ಬ್ಯಾಕ್ ಟು ಬ್ಯಾಕ್ ಟೆಂಪಲ್​ ರನ್​ ಮಾಡೋ ಮೂಲಕ ಕಾನೂನು ಸಂಕಷ್ಟದಿಂದ ಪಾರು ಮಾಡುವಂತೆ ಮನವಿ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment