/newsfirstlive-kannada/media/post_attachments/wp-content/uploads/2025/04/pranitha1.jpg)
ಬಹುಭಾಷಾ ನಟಿ ಪ್ರಣೀತಾ ಸುಭಾಷ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಌಕ್ಟೀವ್ ಆಗಿರೋ ಚಲುವೆ ತನ್ನ ಮುದ್ದು ಮಗನ ನಾಮಕರಣ ಸಂಭ್ರಮದಲ್ಲಿ ಮಿಂಚಿದ್ದಾರೆ.
ಇದನ್ನೂ ಓದಿ:ವೇದಿಕೆ ಮೇಲೆ ಸುನೀಲ್ಗೆ ಭರ್ಜರಿ ಸರ್ಪ್ರೈಸ್.. ಅಮೃತಾ ಗಿಫ್ಟ್ಗೆ ಎಲ್ಲರೂ ಶಾಕ್!
ಹೌದು, ನಟಿ, ಸೌಥ್ ಬ್ಯೂಟಿ ಪ್ರಣೀತಾ ಸುಭಾಷ್ ತಮ್ಮ ಮಗನ ನಾಮಕರಣವನ್ನು ಅದ್ಧೂರಿಯಾಗಿ ಮಾಡಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಾಮಕರಣ ಸಮಾರಂಭ ನಡೆದಿದ್ದು, ಈ ಕಾರ್ಯಕ್ರಮಕ್ಕೆ ಸಿನಿಮಾ ರಂಗದ ಹಲವು ತಾರೆಯರು ಭಾಗಿಯಾಗಿದ್ದಾರೆ.
ಪ್ರಣೀತಾ ಮಗನ ನಾಮಕರಣದಲ್ಲಿ ಭಾಗಿಯಾದ ಸ್ಯಾಂಡಲ್‌ವುಡ್ ನಟಿ ರಮ್ಯಾ ಅವರು ಪ್ರೀತಿಯ ಶುಭಾಶಯ ತಿಳಿಸಿದರು.
ಸ್ಯಾಂಡಲ್‌ವುಡ್ ತಾರೆಯರೆಲ್ಲಾ ಆಗಮಿಸಿ ಪ್ರಣೀತಾ ಮಗನಿಗೆ ವಿಶ್ ಮಾಡಿದ ಖುಷಿಪಟ್ಟಿದ್ದಾರೆ. ಅದರಲ್ಲೂ ಮೋಹಕತಾರೆ ರಮ್ಯಾ, ಡಾಲಿ ಧನಂಜಯ್ ಆಗಮಿಸಿದ್ದಾರೆ.
ಅಷ್ಟೇ ಅಲ್ಲದೇ ಕನ್ನಡದ ಹಿರಿಯ ನಟಿ ಶ್ರುತಿ, ಹಾಗೂ ಅವರ ಮಗಳು ಗೌರಿ, ನಟಿ ಮಾಳವಿಕ, ನಟಿ ಅಮೂಲ್ಯ, ನಿರ್ದೇಶಕ ಯೋಗರಾಜ್ ಭಟ್, ಡಾ. ರಾಜ್ಕುಮಾರ್ ಮೊಮ್ಮಗಳು ನಟಿ ಧನ್ಯಾ ಬಂದಿದ್ದರು.
ಇನ್ನೂ, ನಟಿ ಪ್ರಣೀತಾ ಅವರು ನಾಮಕರಣದಲ್ಲಿ ತಮ್ಮ ಮಗನಿಗೆ ಜಯ್ ಕೃಷ್ಣ ನಿತಿನ್ ರಾಜ್ ಅನ್ನೋ ಹೆಸರಿಟ್ಟಿದ್ದಾರೆ.
ನಟಿ ಪ್ರಣೀತಾ ಅವರಿಗೆ ಇಬ್ಬರು ಮಕ್ಕಳು. ಮೊದಲ ಮಗಳ ಹೆಸರು ಆರ್ನಾ. ಆಕೆಗೆ 2 ವರ್ಷ. ಈಗ ಮಗನ ನಾಮಕರಣವನ್ನು ಅದ್ಧೂರಿಯಾಗಿ ಮಾಡಿ ಖುಷಿ ಪಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ