Advertisment

ನಟಿ ಪ್ರಿಯಾಂಕಾ ಮೋಹನ್ ಭಾಗಿಯಾಗಿದ್ದ ಕಾರ್ಯಕ್ರಮದ ವೇದಿಕೆ ಕುಸಿತ.. ಆಮೇಲೇನಾಯ್ತು?

author-image
AS Harshith
Updated On
ನಟಿ ಪ್ರಿಯಾಂಕಾ ಮೋಹನ್ ಭಾಗಿಯಾಗಿದ್ದ ಕಾರ್ಯಕ್ರಮದ ವೇದಿಕೆ ಕುಸಿತ.. ಆಮೇಲೇನಾಯ್ತು?
Advertisment
  • ಶಾಪಿಂಗ್​ ಮಾಲ್​​ ಉದ್ಘಾಟನೆ ವೇಳೆ ನಡೆದ ದುರ್ಘಟನೆ
  • ನೋಡ ನೋಡುತ್ತಿದ್ದಂತೆ ಏಕಾಏಕಿ ಕುಸಿದ ಗಣ್ಯರಿದ್ದ ವೇದಿಕೆ
  • ವೇದಿಕೆ ಕುಸಿಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​

ನಟಿ ಪ್ರಿಯಾಂಕಾ ಮೋಹನ್​​ ಭಾಗಿಯಾಗಿದ್ದ ಕಾರ್ಯಕ್ರಮದ ವೇದಿಕೆ ಕುಸಿದ ಘಟನೆ ತೆಲಂಗಾಣದಲ್ಲಿ ನಡೆದಿದೆ. ನಟಿ ಪ್ರಿಯಾಂಕಾ ಈ ಅವಘಡದಲ್ಲಿ ಸಣ್ಣ ಪುಟ್ಟ ಗಾಯಗಳಿಂದ  ಪಾರಾಗಿದ್ದಾರೆ.

Advertisment

ತೆರೂರಿನಲ್ಲಿ ಗುರುವಾರ ಕಸಮ್​​ ಶಾಪಿಂಗ್​ ಮಾಲ್​​ ಉದ್ಘಾಟನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಪ್ರಿಯಾಂಕಾ ಮೋಹನ್​ ಭಾಗವಹಿಸಿದ್ದರು. ಮಾಲ್​ ಉದ್ಘಾಟನಾ ಸಮಾರಂಭದಲ್ಲಿ ನಟಿಯನ್ನು ಕಾಣಲು ಪ್ರೇಕ್ಷಕರೂ ಕಿಕ್ಕಿರಿದು ಸೇರಿದ್ದರು. ಆದರೆ ಈ ವೇಳೆ ಇದ್ದಕ್ಕಿದ್ದಂತೆಯೇ ವೇದಿಕೆ ಕುಸಿದಿದೆ.

ಇದನ್ನೂ ಓದಿ: ಮುದ್ದು ಮಗಳಿಗೆ ಜನ್ಮ ನೀಡಿದ ಸ್ಯಾಂಡಲ್​​ವುಡ್​ ಚಿಟ್ಟೆ ಹರ್ಷಿಕಾ ಪೂಣಚ್ಚ.. ಸಂತಸದಲ್ಲಿ ಭುವನ್​ ಪೊನ್ನಣ್ಣ 

Advertisment

ವೇದಿಕೆ ಕುಸಿದ ಪರಿಣಾಮ ಕಾಂಗ್ರೆಸ್​​ ಶಾಸಕಿ ಯಶಸ್ವಿನಿ ಅವರ ತಾಯಿ ಝಾನ್ಸಿ ರೆಡ್ಡಿ, ಕಾಂಗ್ರೆಸ್​​ ಪಕ್ಷದ ಉಸ್ತುವಾರಿ ಹನುಮಂಡ್ಲ ಝಾನ್ಸಿ ರೆಡ್ಡಿ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ. ಆದರೆ ಜೀವಕ್ಕೆ ಯಾವುದೇ ಅಪಾಯವಾಗಿಲ್ಲ. ನಟಿ ಪ್ರಿಯಾಂಕಾ ಕೂಡ  ಸಣ್ಣ ಪುಟ್ಟ ಗಾಯದಿಂದ ಬಚಾವ್​ ಆಗಿದ್ದಾರೆ. ಸದ್ಯ ವೇದಿಕೆ ಕುಸಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.


">October 3, 2024

ಇದನ್ನೂ ಓದಿ: ಬಿಗ್​ ಬಾಸ್​ನಿಂದ ಚೈತ್ರಾರನ್ನು ಹೊರಗೆ ಹಾಕಿ, ಇಲ್ಲದಿದ್ರೆ ಕಾರ್ಯಕ್ರಮ ಸ್ಥಗಿತ ಮಾಡಿಸುತ್ತೇನೆ ಎಂದ ವಕೀಲ!

Advertisment

ಪ್ರಿಯಾಂಕಾ ಮೋಹನ್ ಎಕ್ಸ್​ನಲ್ಲಿ ಘಟನೆ ಬಗ್ಗೆ ಬರೆದಿದ್ದು, ‘ನಾನು ಇಂದು ತೊರೂರಿನಲ್ಲಿ ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ಅಪಘಾತದ ಸಂಭವಿಸಿತ್ತು. ಸದ್ಯ ನಾನು ಚೆನ್ನಾಗಿದ್ದೇನೆ ಮತ್ತು ಸಣ್ಣಪುಟ್ಟ ಗಾಯಗಳೊಂದಿಗೆ ಅದೃಷ್ಟದಿಂದ ಪಾರಾಗಿದ್ದೇನೆ ಎಂದು ತಿಳಿಸಲು ಬಯಸುತ್ತೇನೆ’ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment