/newsfirstlive-kannada/media/post_attachments/wp-content/uploads/2023/10/Rachika-Suresh.jpg)
ಚಲನಚಿತ್ರ ನಟಿ ಹಾಗೂ ಒಬ್ಬ ರೈತನ ಮಗಳಾದ ರಚಿಕಾ ಸುರೇಶ್ ಈಗ ಮಿಸ್ ಇಂಡಿಯಾ ಟೀನ್-2023 ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿದ್ದಾಳೆ. ಸಿನಿಮಾ ಹಾಗೂ ಮಾಡೆಲಿಂಗ್ ಎರಡೂ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ರಚಿಕಾ ಮೂಲತಃ ಶ್ರವಣಬೆಳಗೊಳದ ರೈತನ ಪುತ್ರಿ. ಸಿನಿಮಾದ ಜೊತೆ ಮಾಡೆಲಿಂಗ್ ನಲ್ಲೂ ಗುರುತಿಸಿಕೊಂಡಿರುವ ನಟಿ ರಚಿಕಾ ಇತ್ತೀಚೆಗೆ ದಿಲ್ಲಿಯ ನೋಯ್ಡಾ ಫಿಲಂಸಿಟಿಯಲ್ಲಿ ನಡೆದ ಈ ಮಿಸ್ ಇಂಡಿಯಾ ಟೀನ್ ಸೌಂದರ್ಯ ಸ್ಪರ್ಧೆಯ ಕಿರೀಟ ಗೆದ್ದುಬಂದಿದ್ದಾರೆ.
ಈ ಮಿಸ್ ಇಂಡಿಯಾ ಟೀನ್ ಸೌಂದರ್ಯ ಸ್ಪರ್ಧೆಯಲ್ಲಿ ಎಲ್ಲಾ ರಾಜ್ಯಗಳಿಂದ ಸುಮಾರು 18-20 ಜನ ಸ್ಪರ್ಧಾಳುಗಳು ಭಾಗವಹಿಸಿದ್ದರು. ಇದರಲ್ಲಿ ವೆಸ್ಟರ್ನ್ ಹಾಗೂ ಟ್ರೆಡಿಷನಲ್ ವೇರ್ ಹೀಗೆ ಮೂರ್ನಾಲ್ಕು ರೌಂಡ್ಸ್ ಗಳಿರುತ್ತವೆ. ಅಲ್ಲದೆ ಪ್ರಶ್ನೋತ್ತರದ ರೌಂಡ್ ಕೂಡ ಇರುತ್ತದೆ. ಒಂದು ಬದಲಾವಣೆಯ ಅವಕಾಶ, ಅಧಿಕಾರ ಸಿಕ್ಕರೆ ಕಾವೇರಿ ಸಮಸ್ಯೆಯನ್ನು ಸಾಮರಸ್ಯದೊಂದಿಗೆ ಬಗೆಹರಿಸುವುದಾಗಿ ಜಡ್ಜಸ್ ಪ್ರಶ್ನೆಗೆ ಉತ್ತರಿಸಿದ್ದಾರೆ. ಹೀಗೆ ಕನ್ನಡತಿ ರಚಿಕಾ ಸುರೇಶ್ 2023ರ ಮಿಸ್ ಇಂಡಿಯಾ ಟೀನ್ ಕಿರೀಟವನ್ನು ಮುಡಿಗೇರಿಸಿಕೊಳ್ಳುವ ಮೂಲಕ ಕನ್ನಡಿಗರ ಕೀರ್ತಿ ಪತಾಕೆಯನ್ನು ದಿಲ್ಲಿಯವರೆಗೂ ಹಾರಿಸಿ ಬಂದಿದ್ದಾರೆ.
/newsfirstlive-kannada/media/post_attachments/wp-content/uploads/2023/10/Rachika-Suresh-1.jpg)
ಮಾಡೆಲಿಂಗ್ ಜೊತೆಗೆ ಅಭಿನಯವನ್ನೂ ಕಂಟಿನ್ಯೂ ಮಾಡಿರುವ ರಚಿಕಾ ಈಗಾಗಲೇ ಕನ್ನಡ, ತಮಿಳು ಚಿತ್ರರಂಗದಲ್ಲಿ ನಾಯಕಿಯಾಗಿ ಗುರ್ತಿಸಿಕೊಂಡಿದ್ದಾರೆ. ಕನ್ನಡ ಚಿತ್ರವಲ್ಲದೆ ತಮಿಳಿನ ಎಂಜಾಯ್ ಚಿತ್ರದಲ್ಲೂ ಸಹ ರಚಿಕಾ ಸುರೇಶ್ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.
ಫೇಮಸ್ ಫ್ಯಾಷನ್ ಟ್ರೈನರ್ ಫಾರೆವರ್ ನವೀನ್ ಕುಮಾರ್ ಅವರ ತರಬೇತಿಯಲ್ಲಿ ಪಳಗಿದ ರಚಿಕಾ ಸುರೇಶ್, ಹಲವಾರು ದೊಡ್ಡ ದೊಡ್ಡ ಕಂಪನಿಗಳ ರೂಪದರ್ಶಿಯಾಗಿ ಮಿಂಚಿದ್ದಾರೆ. ಕನ್ನಡ ಚಿತ್ರರಂಗದಿಂದ ಸಾಕಷ್ಟು ಆಫರ್ ಬರುತ್ತಿದ್ದು, ರಚಿಕಾ ಚೂಸಿಯಾಗಿ ಕೆಲ ಪಾತ್ರಗಳನ್ನು ಮಾತ್ರವೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us