/newsfirstlive-kannada/media/post_attachments/wp-content/uploads/2025/06/huli-karthik.jpg)
ಮಜಾಭಾರತ ಮೂಲಕ ಕಾಮಿಡಿ ಶೋಗೆ ಎಂಟ್ರಿಕೊಟ್ಟವ್ರು ನಟ ಹುಲಿ ಕಾರ್ತಿಕ್​. ಅವರ ವಿಭಿನ್ನ ಮ್ಯಾನರಿಸಂ ಕಾಮಿಡಿ ಕಿಕ್​ ಕೊಡುತ್ತೆ. ಸ್ಪಾಟ್​ಲ್ಲೇ ಹೊಡೆಯೋ ಪಂಚ್​ ಡೈಲಾಗ್ ವೀಕ್ಷಕರಿಗೆ ಕಚಗುಳಿ ಇಡುತ್ತೆ. ಹುಲಿ ಇದ್ರೇ ಮಜಾನೇ ಬೇರೆ ಅನ್ನೋ ಮಟ್ಟಿಗೆ ಶೋನ ಆವರಿಸಿಕೊಂಡಿರುತ್ತಾರೆ.
ಇದನ್ನೂ ಓದಿ: ವಿಮಾನದ ಬೆಲೆ 2.18 ಸಾವಿರ ಕೋಟಿ ರೂ.. ಪತನಗೊಂಡ Boeing 787 ವಿಶೇಷತೆ ಏನೇನು..?
ಗಿಚ್ಚಿಗಿಲಿಗಿಲಿ ಮೂರು ಆವೃತ್ತಿಗಳಲ್ಲಿ ಹುಲಿ ಮೋಡಿ ಇತ್ತು. ಅಲ್ಲಿಂದ ಫ್ಯಾಮಿಲಿ ಗ್ಯಾಂಗ್‌ಸ್ಟರ್ಸ್​ನಲ್ಲೂ ಭಾಗಿಯಾಗಿದ್ರು. ಸದ್ಯ ಭರ್ಜರಿ ಬ್ಯಾಚುಲರ್ಸ್ ಶೋ ಮೂಲಕ ಸೌಂಡ್ ಮಾಡ್ತಿದ್ದಾರೆ. ಬ್ಯಾಚುಲರ್​ ಅಂದ್ಮೇಲೆ ಲವ್​ ಕಹಾನಿಗಳು ಹುಲಿ ಕಾರ್ತಿಕ್​ ಸುತ್ತಾ ಗಿರಿಕಿ ಹೊಡಿತಾನೇ ಇರ್ತಾವೆ. ಮೊನ್ನೆ ರಚಿತಾ ರಾಮ್​ ಶೋನಲ್ಲಿ ಹೇಳಿದ ಮಾತು ಗುಸು ಗುಸು ಚರ್ಚೆಗೆ ಕಾರಣವಾಗಿದೆ.
ಹೌದು, ಮಜಾ ಭಾರತ ಟೈಮ್​ನಿಂದಲೂ ರಚಿತಾ ರಾಮ್​ ಅವರ ಜೊತೆ ಹುಲಿ ಕಾರ್ತಿಕ್​ಗೆ ಒಳ್ಳೆ ಒಡನಾಟ ಇದೆ. ನಮ್ಮ ಹುಡುಗ ಅಂತ ರಚ್ಚು ಹೆಮ್ಮೆಯಿಂದ ಹೇಳ್ತಿರ್ತಾರೆ. ಭರ್ಜರಿ ವೇದಿಕೆಯಲ್ಲಿ ಅವರ ಬಾಂಡಿಂಗ್​ ನೋಡಿರ್ತಾರೆ. ಇದೇ ಸಲುಗೆಯಲ್ಲಿ ಬ್ರೇಕ್​ ಅಪ್​ ವಿಷ್ಯ ಬಾಯಿಬಿಟ್ಟಿದ್ದಾರೆ ರಚಿತಾ ರಾಮ್​.
ಸುನೀಲ್​ ಹಾಗೂ ಅಮೃತಾ ಡ್ರೀಮ್​ ಗರ್ಲ್​ ಬಗ್ಗೆ ಮಾತು ಕತೆ ನಡೀತಿರುತ್ತೆ. ಗೊಂಡು ಗೊಂಡಾಗಿರೋ ಗೊಂಬೆ ತೋರಿಸಿದ ಸುನೀಲ, ಇದೇ ಥೇಟ್​ ರಚ್ಚು ಮ್ಯಾಮ್​ ಥರನೇ ಇದೆ ಅಂತಾರೆ. ಇದಕ್ಕೆ ಪಂಚ್ ಕೊಟ್ಟ ಹುಲಿ ಕಾರ್ತಿಕ್​ ಹಂಡೆ ತರಹ ಇರೋ ಗೊಂಬೆಗೆ ರಚ್ಚು ಅಂತಿಯಾ ಅಂತಾನೆ. ಅಲ್ಲಿಗೆ ರಚ್ಚು ರೋಚ್ಚಿಗೆದ್ದು ಮಗನೇ ಹಂಡೆ ಅಂತೀಯಾ? ಬ್ರೇಕ್​ ಅಪ್​ ಆಗಿ ಕೂತಿದ್ಯಾ ಎಲ್ಲಾ ಹೇಳ್ಬೀಡ್ತಿನಿ ಅಂದು ಬಿಡ್ತಾರೆ.
ಅಲ್ಲಿಗೆ ಹುಲಿ ಕಾರ್ತಿಕ್ ಕೈ ಮುಗಿದು ವಿಷ್ಯನ ಅರ್ಧಕ್ಕೆ ಮೊಟಕು ಗೊಳಿಸ್ತಾರೆ. ಆ ಹುಡುಗಿ ಯಾರು ಅನ್ನೋದನ್ನ ಹೇಳಲ್ಲ. ಒಂದಿಷ್ಟು ಜನರು ಅವ್ರಾ? ಇವ್ರಾ ಅಂತ ಗೆಸ್ ಮಾಡ್ತಿದ್ದಾರೆ. ಹಾಗಿದ್ರೇ ಹುಲಿ ಕಾರ್ತಿಕ್​ಗೆ ಬ್ರೇಕ್​ ಆಗಿರೋದು ನಿಜ ಎಂಬ ರೀತಿಯಲ್ಲಿ ಈ ಮಾತು ಪಿಸುಗುಟ್ಟುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ