ತಮ್ಮ ವಿರುದ್ಧದ ಆರೋಪಕ್ಕೆ ಉತ್ತರ ಕೊಟ್ಟ ರಚಿತಾ ರಾಮ್, ಏನ್ ಹೇಳಿದರು?

author-image
Bheemappa
Updated On
ತಮ್ಮ ವಿರುದ್ಧದ ಆರೋಪಕ್ಕೆ ಉತ್ತರ ಕೊಟ್ಟ ರಚಿತಾ ರಾಮ್, ಏನ್ ಹೇಳಿದರು?
Advertisment
  • ಆ ದೇವರೇ ಬಂದು ಮುಂದೆ ನಿಂತರೂ ಸ್ವಾರಿ ಕೇಳಲ್ಲ- ರಚಿತಾ ರಾಮ್
  • ಸಂಜು ವೆಡ್ಸ್ ಗೀತಾ- 2 ಚಿತ್ರತಂಡಕ್ಕೆ ನಟಿ ರಚಿತಾ ರಾಮ್ ತಿರುಗೇಟು
  • ಉಪ್ಪಿ ರುಪ್ಪಿ ಸಿನಿಮಾ ಕುರಿತು ರಚಿತಾ ರಾಮ್ ಅವರು ಹೇಳಿದ್ದು ಏನು?

ಬೆಂಗಳೂರು: ಸ್ಯಾಂಡಲ್​ವುಡ್​ನ ಖ್ಯಾತ ನಟಿ ರಚಿತಾ ರಾಮ್ ಅವರ ಮೇಲೆ ಸಂಜು ವೆಡ್ಸ್ ಗೀತಾ- 2 ಹಾಗೂ ಉಪ್ಪಿ ರುಪ್ಪಿ ಸಿನಿಮಾ ತಂಡದವರು ಆರೋಪ ಮಾಡಿದ್ದರು. ಈ ಕುರಿತು ರಚಿತಾ ರಾಮ್ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ರಚಿತಾ ರಾಮ್ ಅವರು ತಮ್ಮ ಅಧಿಕೃತ ಇನ್​ಸ್ಟಾ ಅಕೌಂಟ್​ನ ವಿಡಿಯೋದಲ್ಲಿ ಮಾತನಾಡಿದ್ದು, ಈಗ ಒಂದು ವಾರದಿಂದ ನನ್ನ ಮೇಲೆ ಅರೋಪಗಳು ಕೇಳಿ ಬರುತ್ತಿವೆ. ಇದರಲ್ಲಿ ಮೊದಲು ಸಂಜು ವೆಡ್ಸ್​ ಗೀತಾ-2 ಸಿನಿಮಾ ಬಗ್ಗೆ ಮಾತನಾಡುತ್ತೇನೆ. ನನ್ನ ತಂಡ, ನಿರ್ಮಾಪಕರು, ನಿರ್ದೇಶಕರು ಹಾಗೂ ಹೀರೋ ಕೂಡ ಮಾಧ್ಯಮಗೋಷ್ಠಿಯಲ್ಲಿ ನನ್ನ ಬಗ್ಗೆ ಮಾತನಾಡಿದ್ದಾರೆ. ಅವರು ಮಾತನಾಡುವಾಗ ಬಳಸಿದಂತ ಪದಗಳು, ಸ್ಟೇಟ್​​ಮೆಂಟ್​ಗಳು ತುಂಬಾ ನೋವು ಉಂಟುಮಾಡಿವೆ, ತುಂಬಾನೇ ಬೇಸರ ಆಗಿದೆ ಎಂದು ಹೇಳಿದ್ದಾರೆ.

publive-image

ನಾನು ಸ್ವೀಕರಿಸುವಂತ ವಿಚಾರ ಅಲ್ಲವೇ ಅಲ್ಲ. ಸಂಜು ವೆಡ್ಸ್​ ಗೀತಾ- 2 ಸಿನಿಮಾ ತಂಡದ ಜೊತೆ ಒಂದೂವರೆ ವರ್ಷ ಸಿನಿಮಾ ಮಾಡಿರುತ್ತೇನೆ. ಜನವರಿ 17 ರಂದು ಮೊದಲ ಬಾರಿಗೆ ಈ ಸಿನಿಮಾ ರಿಲೀಸ್ ಆಗುತ್ತದೆ. ಈ ಸಮಯದಲ್ಲಿ ಎಲ್ಲ ವೇದಿಕೆಗಳಲ್ಲಿ ನನ್ನ ಬಗ್ಗೆ ತುಂಬಾ ಒಳ್ಳೆಯ ಮಾತುಗಳನ್ನಾಡುತ್ತಾರೆ. ಮೊದಲ ಬಾರಿ ಸಿನಿಮಾ ರಿಲೀಸ್ ಆಗುವಾಗ ನನ್ನನ್ನು ಎಲ್ಲ ರೀತಿಯಿಂದಲೂ ಹೊಗಳಿದ್ದರು ಎಂದು ಹೇಳಿದ್ದಾರೆ.

ಅದೇ ತಂಡ ಇವತ್ತು ರೀ ರಿಲೀಸ್​ ಸಮಯದಲ್ಲಿ ನನ್ನ ಬಗ್ಗೆ ತುಂಬಾ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಇದೇ ಮಾತನ್ನು ಮೊದಲ ರಿಲೀಸ್ ಸಂದರ್ಭದಲ್ಲೇ ಮಾತನಾಡಬೇಕಿತ್ತು. ಯಾಕೆ ಆಗ ಕೆಟ್ಟ ಮಾತುಗಳನ್ನು ಆಡಲಿಲ್ಲ. ಆವಾಗ ಅಷ್ಟೊಂದು ಹೊಗಳಿ, ಈಗ ಯಾಕೆ ಕೆಟ್ಟದಾಗಿ ಮಾತನಾಡ್ತಿದ್ದಾರೆ. ಸುಳ್ಳು, ನಾಟಕ ಮಾಡಿದ್ದೇನೆಂದು ಹೇಳುತ್ತಿದ್ದಾರೆ. ಇಲ್ಲಿ ಸುಳ್ಳು, ನಾಟಕ ಮಾಡುತ್ತಿರುವವರು ಯಾರು?. ಸಂಜು ವೆಡ್ಸ್​ ಗೀತಾ- 2 ಸಿನಿಮಾದ ಶೂಟಿಂಗ್ ನಡೆಯುತ್ತಿರುತ್ತದೆ. ನನ್ನದೇ ಇನ್ನೊಂದು ಸಿನಿಮಾ ಬಿಡುಗಡೆಗೆ ರೆಡಿ ಇರುತ್ತದೆ. ಈ ವೇಳೆ ಸಿನಿಮಾದ ಪ್ರಚಾರಕ್ಕೆ, ಪ್ರಮೋಷನ್​ಗೆ ಹೋಗಲು ನಿರ್ದೇಶಕ ನಾಗಶೇಖರ್​ ಹಾಗೂ ನಟ ಶ್ರೀನಗರ ಕಿಟ್ಟಿ ಅವತ್ತು ಬಿಡಲಿಲ್ಲ ಎಂದು ಹೇಳಿದ್ದಾರೆ.

ಮಹಿಳಾ ನಿರ್ಮಾಪಕಿ ದುಡ್ಡು ಹಾಕಿ ಸಿನಿಮಾ ಮಾಡಿದ್ದರು. ಆವತ್ತು ಯಾಕೆ ಇವರು ಪ್ರಚಾರ ಮಾಡಲು ನನಗೆ ಬಿಡಲಿಲ್ಲ. ಅವರದು ದುಡ್ಡು ಅಲ್ವಾ?. ಅವರದ್ದು ಸಿನಿಮಾ ಅಲ್ವಾ?. ಒಂದು ದಿನ ನನ್ನ ಆ ಸಿನಿಮಾ ಪ್ರಮೋಷನ್​ಗೆ ಕಳಿಸಲಿಲ್ಲ ಇವರು. ಆದರೆ ಇವತ್ತು ಹೇಳುತ್ತಿದ್ದಾರೆ ರಚಿತಾ ರಾಮ್ ಅವರು ಪ್ರಮೋಷನ್​ಗೆ ಬರುತ್ತಿಲ್ಲ ಅಂತ. ಸಿನಿಮಾದಲ್ಲಿ ಏನ್ ಮಾಡಬೇಕು ಅಂತ ಇತ್ತೋ ಅದನ್ನು ಸಂಪೂರ್ಣವಾಗಿ ಮಾಡಿದ್ದೇನೆ. ರೀ ರಿಲೀಸ್ ವೇಳೆ ಈ ಬಾರಿ ನನಗೆ ಬೇರೆ ಸಿನಿಮಾದ ಕಮಿಟ್​ಮೆಂಟ್ ಇರುತ್ತೆ. ರೀ ರಿಲೀಸ್ ಟೈಮ್​ ಪೋಸ್ಟ್​ಪಾಂಡ್ ಆಗಿರುತ್ತೆ. ಅದಕ್ಕೆ ನಾನಾ ಹೊಣೆ? ಎಂದು ಪ್ರಶ್ನೆ ಮಾಡಿದ್ದಾರೆ.

ಅವತ್ತು ಸಂಜು ವೆಡ್ಸ್ ಗೀತಾ 2 ಟೀಮ್ ಏನ್ ಹೇಳಿದರೋ, ಅದನ್ನೇ ಈ ಬಾರಿ ಈ ಹೊಸ ಸಿನಿಮಾದ ನಿರ್ದೇಶಕರು ಹೇಳುತ್ತಿದ್ದಾರೆ. ರಚಿತಾ ಅವರೇ ನಮ್ಮ ಸಿನಿಮಾಗೆ ಡೇಟ್ಸ್ ಕೊಟ್ಟಿದ್ದೀರಿ, ನಾವು ಸಿನಿಮಾ ಮಾಡಿ ಮುಗಿಸಬೇಕಿದೆ ಅಂತ ಹೇಳುತ್ತಿದ್ದಾರೆ. ಈಗ ನೀವು ಹೇಳಿ ತಪ್ಪು ಯಾರದ್ದು ಅಂತ. ನಾನು ತಪ್ಪು ಮಾಡಿದ್ದೇನೆ ಅಂತ ಅನ್ನಿಸುತ್ತಿಲ್ಲ. ಸಂಜು ವೆಡ್ಸ್ ಗೀತಾ 2 ಪ್ರಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:International Yoga Day; 5 ಲಕ್ಷಕ್ಕೂ ಅಧಿಕ ಜನರ ಜೊತೆ ಯೋಗ ಮಾಡಲಿರೋ ಪ್ರಧಾನಿ ಮೋದಿ

publive-image

ಉಪ್ಪಿ ರುಪ್ಪಿ ಸಿನಿಮಾ ಬಗ್ಗೆ ರಚಿತಾ ರಾಮ್ ಏನಂದ್ರು?
ಉಪ್ಪಿ ರುಪ್ಪಿ ಸಿನಿಮಾಕ್ಕಾಗಿ ಪಡೆದ ಹಣಕ್ಕೆ ಸಂಬಂಧಿಸಿದ ಆರೋಪದ ಬಗ್ಗೆ ಮಾತನಾಡಿದ ರಚಿತಾ ರಾಮ್ ಅವರು, ಈ ವಿಷಯ ಈಗಾಗಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮೆಟ್ಟಿಲೇರಿದೆ. ಇದರ ಬಗ್ಗೆ ಹೆಚ್ಚು ಮಾತನಾಡಿಲ್ಲ. ಏಕೆಂದರೆ ಸಾ.ರಾ ಗೋವಿಂದು ಅವರು ಈ ವಿಷಯವನ್ನು ನಿಭಾಯಿಸುತ್ತಿದ್ದಾರೆ. ಅವರು, ನಾನು ಹೇಳುವವರೆಗೂ ಈ ಬಗ್ಗೆ ಮಾತನಾಡಬೇಡ ಎಂದಿದ್ದಾರೆ. ಅವರ ಮಾತಿಗೆ ಗೌರವ ಕೊಟ್ಟು ಇದರ ಬಗ್ಗೆ ಹೆಚ್ಚು ಮಾತಾಡಲ್ಲ. ಈ ವಿಷಯದ ಬಗ್ಗೆ ಯಾರೂ ಚರ್ಚಿಸುವುದು ಬೇಡ ಎಂದು ರಚಿತಾ ರಾಮ್ ಅವರು ಮನವಿ ಮಾಡಿದ್ದಾರೆ.

ನಂದು ತಪ್ಪು ಇದೆ ಎಂದರೆ ಚಿಕ್ಕ ಮಕ್ಕಳ ಕಾಲಿಗೂ ಬೀಳುತ್ತೇನೆ. ನಾನು ತಪ್ಪು ಮಾಡಿಲ್ಲ ಅಂದರೆ ದೇವರೇ ಬಂದು ಮುಂದೆ ನಿಂತರೂ ಸ್ವಾರಿ ಕೇಳಲ್ಲ. 100ಕ್ಕೆ ನೂರರಷ್ಟು ಸ್ವಾರಿ ಕೇಳಲ್ಲ. ನನ್ನ ಅಭಿಮಾನಿಗಳಿಗೆ ಹರ್ಟ್ ಆಗಿದ್ದರೇ ನನ್ನ ಕ್ಷಮೆ ನಿಮಗಿದೆ. ನಿಮ್ಮ ಆಶೀರ್ವಾದ ನನ್ನ ಮೇಲೆ ಹೀಗೆ ಇರಲಿ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment