newsfirstkannada.com

ಬಾಸ್ ಎಲ್ಲಿದ್ರೂ ಬಾಸ್‌.. ರಚಿತಾ ರಾಮ್ ಹೇಳಿದ್ದೇ ಸತ್ಯವಾಯ್ತಾ? ರಚ್ಚು ಹೋದ ದಿನವೇ ಜೈಲಲ್ಲಿ ಪಾರ್ಟಿ?

Share :

Published August 26, 2024 at 1:21pm

    ಜೈಲಿನಲ್ಲಿರುವ ದರ್ಶನ್ ಬಗ್ಗೆ ರಚಿತಾ ರಾಮ್ ಅಂದು ಏನ್​ ಹೇಳಿದ್ದರು?

    ದರ್ಶನ್​ರನ್ನ ಆ ತರ ನೋಡೋದಕ್ಕೆ ಕಷ್ಟ ಆಗ್ತಿದೆ ಎಂದಿದ್ದ ರಚಿತಾ ರಾಮ್

    ನಟಿ ದರ್ಶನ್ ಭೇಟಿಗಾಗಿ ಜೈಲಿಗೆ ಬಂದಿದ್ದ ವೇಳೆ ಕ್ಲಿಕ್ಕಿಸಿದ್ದ ಈ ಫೋಟೋ?

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್​ ಜೈಲಿನಲ್ಲಿ ಬಿಂದಾಸ್ ಆಗಿ ಇರುವ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ. ದರ್ಶನ್ ಬಗ್ಗೆ ಕೇಳಿ ಬರ್ತಿದ್ದ ಊಹಾಪೋಹಗಳಿಗೂ ಈ ಫೋಟೋಗಳು ಉತ್ತರ ನೀಡುತ್ತಿವೆ. ದರ್ಶನ್ ಸಣ್ಣ ಆಗಿದ್ದಾರೆ, ಮಾನಸಿಕವಾಗಿ ಕುಗ್ಗಿದ್ದಾರೆ, ಯಾರು ಬಂದು ಮಾತನಾಡುತ್ತಿಲ್ಲ ಅಂತ. ಆದ್ರೆ ಜೈಲಿನಲ್ಲಿ ದರ್ಶನ್ ಆರಾಮಾಗಿದ್ದಾರೆ ಅನ್ನೋದಕ್ಕೆ ವೈರಲ್​ ಆಗಿರೋ ಫೋಟೋಗಳೇ ಸಾಕ್ಷಿಯಾಗಿವೆ.

ಇದನ್ನೂ ಓದಿ: ಚೆನ್ನಾಗಿದ್ದೀರಾ ಬಾಸ್.. ಹೂ ಚಿನ್ನ; ದರ್ಶನ್ ಬಿಂದಾಸ್ ಲೈಫ್‌ಗೆ ಹೊಸ ಟ್ವಿಸ್ಟ್‌; ವಿಡಿಯೋ ಕಾಲ್ ಮಾಡಿದ್ಯಾರು?

ಇದರ ಮಧ್ಯೆ ಸ್ಯಾಂಡಲ್​ವುಡ್​ ನಟಿ ರಚಿತಾ ರಾಮ್​ ಹೇಳಿದ್ದೇ ಸತ್ಯವಾಗಿದೆ. ಕಳೆದ ಗುರುವಾರ ದರ್ಶನ್​ನನ್ನು ಭೇಟಿ ಮಾಡಲು ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದರು. ಇದಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ರಚ್ಚು, ರಾಜನನ್ನ ರಾಜನ ರೀತಿ ನೋಡೋಕೆ ನನಗಿಷ್ಟ, ಈ ರೀತಿಯಲ್ಲಿ ನೋಡೋಕೆ ಕಷ್ಟ ಆಗುತ್ತೆ. ಬಾಸ್ ಎಲ್ಲಿದ್ರೂ ಬಾಸ್ ಅಂತ ರಚಿತಾ ರಾಮ್ ಹೇಳಿದ್ದರು. ಇದೇ ಮಾತು ಈಗ ಫೋಟೋಗಳ ಮೂಲಕ ಆಚೆ ಬಂದಿವೆ ಅನ್ನೋ ಮಾತು ಕೇಳಿ ಬಂದಿದೆ.

ಕೈಯಲ್ಲಿ ಸಿಗರೇಟ್, ಕಾಫಿ ಹಾಗೂ ವಿಡಿಯೋ ಕಾಲ್ ಅಂತ ಆರಾಮಾಗಿರುವ ದರ್ಶನ್​ ಫೋಟೋಗಳೇ ಈಗ ಸಖತ್​ ಹಲ್​ಚಲ್​ ಎಬ್ಬಿಸಿವೆ. ವೈರಲ್ ಆಗುತ್ತಿರುವ ಫೋಟೋಗಳು ರಚಿತಾ ರಾಮ್ ಭೇಟಿಯಾಗಿದ್ದ ದಿನದ್ದಾ ಎಂಬ ಪ್ರಶ್ನೆ ಮೂಡಿದೆ. ನಟಿ ಭೇಟಿ ಕೊಟ್ಟ ಅದೇ ದಿನ ದರ್ಶನ್ ಸಿಗರೇಟ್ ಹಿಡಿದಿದ್ದ ಫೋಟೋ ಕ್ಲಿಕ್ಕಿಸಿದ್ದಾ? ಜೈಲಿನಲ್ಲಿರುವ ಮತ್ತೊಬ್ಬ ಕೈದಿ ಕ್ಲಿಕ್ಕಿಸಿರುವ ಫೋಟೋ ಈಗ ವೈರಲ್​ ಆಗುತ್ತಿವೆ.

ಇದನ್ನೂ ಓದಿ: ದರ್ಶನ್‌ಗೆ ವಿಡಿಯೋ ಕಾಲ್‌ ಮಾಡಿದ ಸೀಕ್ರೆಟ್ ಬಯಲು.. ಬಿಲ್ಡಪ್ ಕೊಟ್ಟು ಸಿಕ್ಕಿಬಿದ್ದಿದ್ದೇ ರೋಚಕ ಸತ್ಯ!

ಜೈಲಿನಲ್ಲಿರುವ ದರ್ಶನ್ ಫೋಟೋ ಲೀಕ್ ಆದ ಬೆನ್ನಲ್ಲೆ ರಾತ್ರೋ ರಾತ್ರಿ ಎಎಜಿ ಆನಂದ್ ರೆಡ್ಡಿ ತಡರಾತ್ರಿವರೆಗೂ ವಿಚಾರಣೆ ನಡೆಸಿದ್ದಾರೆ. ತನಿಖೆ ನಡೆಸಿ ಪ್ರಕರಣದ ಬಗ್ಗೆ ಡಿಜಿಗೆ ವರದಿ ಸಲ್ಲಿಸಿದ್ದಾರೆ. ಯಾರು ಆ ಫೋಟೋ ತೆಗೆದದ್ದು ಎಂದು ಪ್ರಾಥಮಿಕ ಮಾಹಿತಿಯನ್ನು ಜೈಲು ಅಧಿಕಾರಿಗಳು ಕಲೆ ಹಾಕಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಕಳೆದ ಗುರುವಾರ ನಟಿ ರಚಿತಾ ರಾಮ್ ದರ್ಶನ್ ಭೇಟಿಗಾಗಿ ಜೈಲಿಗೆ ಎಂಟ್ರಿ ಕೊಟ್ಟಿದ್ದಾಗ ಈ ಫೋಟೋ ತೆಗೆದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಲ್ಲಿನ ಸಿಬ್ಬಂದಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರಂತೆ. ಜೊತೆಗೆ ಜೈಲಿನ ಸಿಸಿಟಿವಿ ಪರಿಶೀಲನೆ ನಡೆಸಲಾಗ್ತಿದೆ. ಇನ್ನೂ ಅಮಾನತ್ತಾಗಿರೋ ಜೈಲರ್​ಗಳಾದ ಪ್ರಭು ಖಂಡ್ರೆ ಹಾಗೂ ಶರಣಬಸಪ್ಪ ಎರಡು ಪಾಳಿಯಲ್ಲಿ ಜೈಲಿನ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದರು. ಇವರ ನಿರ್ಲಕ್ಷ್ಯದಿಂದಲೇ ಈ ಘಟನೆಗೆ ಕಾರಣ ಎನ್ನಲಾಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಸ್ ಎಲ್ಲಿದ್ರೂ ಬಾಸ್‌.. ರಚಿತಾ ರಾಮ್ ಹೇಳಿದ್ದೇ ಸತ್ಯವಾಯ್ತಾ? ರಚ್ಚು ಹೋದ ದಿನವೇ ಜೈಲಲ್ಲಿ ಪಾರ್ಟಿ?

https://newsfirstlive.com/wp-content/uploads/2024/08/rachitha-ram.jpg

Load More