‘ನನಗೆ ಕಾನೂನಿನ ಮೇಲೆ ನಂಬಿಕೆ ಇದೆ, ಆದಷ್ಟು ಬೇಗ ಬರ್ತೀನಿ’- ನಟ ದರ್ಶನ್​​

author-image
Ganesh Nachikethu
Updated On
‘ಇದೆಲ್ಲ ಬೇಕಿತ್ತಾ ನಂಗೆ..’ ಅಧಿಕಾರಿಗಳ ಮುಂದೆ ದರ್ಶನ್ ದುಃಖ; ಬಳ್ಳಾರಿ ಜೈಲಿಗೆ ಶಿಫ್ಟ್​ ಆಗಲು ಹೆದರಿದ ದಾಸ..!
Advertisment
  • ಕೊಲೆ ಕೇಸಲ್ಲಿ ಚಾಲೆಂಜಿಂಗ್​ ಸ್ಟಾರ್​​ ದರ್ಶನ್​ ಜೈಲು ಸೇರಿ 2 ತಿಂಗಳು
  • ಕಾನೂನು ಮೇಲೆ ನಂಬಿಕೆ ಇದೆ, ಆದಷ್ಟು ಬೇಗ ಬರ್ತೀನಿ ಎಂದ ದರ್ಶನ್​​
  • ನಟ ದರ್ಶನ್​ ಭೇಟಿ ಬಳಿಕ ನಟಿ ರಚಿತಾ ರಾಮ್​​ ಹೇಳಿದ್ದೇನು ಗೊತ್ತಾ..?

ಬೆಂಗಳೂರು: ಕೊಲೆ ಕೇಸಲ್ಲಿ ಜೈಲು ಸೇರಿದ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅವರನ್ನು ನಟಿ ರಚಿತಾ ರಾಮ್​ ಅವರು ಭೇಟಿಯಾಗಿದ್ದರು. ಪರಪ್ಪನ ಅಗ್ರಹಾರ ಜೈಲಲ್ಲಿ ಭೇಟಿ ಆದಾಗ ರಚಿತಾ ರಾಮ್​ಗೆ ನಟ ದರ್ಶನ್​ ಅವರು, ನನಗೆ ಕಾನೂನು ಮೇಲೆ ನಂಬಿಕೆ ಇದೆ. ಆದಷ್ಟು ಬೇಗ ಬರ್ತೀನಿ ಎಂದಿದ್ದಾರಂತೆ. ಈ ಬಗ್ಗೆ ರಚಿತಾ ರಾಮ್​ ಅವರೇ ಸ್ಪಷ್ಟನೆ ನೀಡಿದ್ದಾರೆ.

ರಚಿತಾ ರಾಮ್​ ಹೇಳಿದ್ದೇನು?

ನನಗೆ ರಾಜನ ರೀತಿ ದರ್ಶನ್​ ಅವರನ್ನು ನೋಡಲು ಇಷ್ಟ. ಈ ರೀತಿ ನೋಡಲು ನನಗೆ ಇಷ್ಟವಿಲ್ಲ. ಅವರ ಬ್ಯಾನರ್​ನಿಂದಲೇ ನಾನು ಸಿನಿಮಾಗೆ ರಂಗಕ್ಕೆ ಬಂದಿದ್ದು. ನಾನು ಅವರನ್ನು ನೋಡಿದ ಕೂಡಲೇ ಭಾವುಕ ಆದೆ. ಅವರೇ ನನಗೆ ಧೈರ್ಯ ತುಂಬಿದ್ರು ಎಂದರು.

publive-image

ದರ್ಶನ್​ ಅವರು ನನಗೆ ಸಮಾಧಾನ ಮಾಡಿದ್ರು. ನನಗೆ ಕಾನೂನಿನ ಮೇಲೆ ನಂಬಿಕೆ ಇದೆ. ಆದಷ್ಟ ಬೇಗ ಜೈಲಿನಿಂದ ಹೊರಗೆ ಬರ್ತೀನಿ ಎಂದರು. ಇದಕ್ಕೆ ನಾನು ವೈಟ್​ ಮಾಡ್ತಾ ಇದೀವಿ ಬನ್ನಿ ಎಂದೆ. ಅವರನ್ನು ನೋಡಿದ ಮೇಲೆ ನಿರಾಳ ಆಯ್ತು ಎಂದರು.

ಇದನ್ನೂ ಓದಿ:ಪರಪ್ಪನ ಅಗ್ರಹಾರದಲ್ಲಿ ದಚ್ಚು ಮೀಟ್ ಮಾಡಿದ ರಚ್ಚು.. 3 ಬ್ಯಾಗ್‌ಗಳಲ್ಲಿ ಡಿಂಪಲ್ ಕ್ವೀನ್ ತಂದು ಕೊಟ್ಟಿದ್ದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment