ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ ಆರೋಪಿ ನಟ ದರ್ಶನ್
ಜೈಲಿನಲ್ಲಿ ನಟ ದರ್ಶನ್‌ಗೆ ವಿಶೇಷ ಆತಿಥ್ಯ ನೀಡುತ್ತಿರುವ ಫೋಟೋ ವೈರಲ್
ದರ್ಶನ್ ರಾಜಾತಿಥ್ಯ ಕೇಸ್ನಲ್ಲಿ ನಟಿ ರಚಿತಾ ರಾಮ್ಗೂ ಎದುರಾಯ್ತು ಸಂಕಷ್ಟ
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ ಆರೋಪಿ ನಟ ದರ್ಶನ್‌ಗೆ ರಾಜಾತಿಥ್ಯ ನೀಡುತ್ತಿರುವ ಫೋಟೋವೊಂದು ವೈರಲ್ ಆಗಿದೆ. ದರ್ಶನ್ ಒಂದು ಕೈಯಲ್ಲಿ ಕಾಫಿ ಮಗ್, ಮತ್ತೊಂದು ಕೈಯಲ್ಲಿ ಸಿಗರೇಟ್ ಹಿಡಿದು ಕಾಲು ಮೇಲೆ ಕಾಲು ಹಾಕಿ ಕೂತಿರುವ ಫೋಟೋ ಇದಾಗಿದೆ. ಇವರಿಗೆ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ ಮತ್ತಿತ್ತರು ಕಂಪನಿ ಕೊಟ್ಟಿದ್ದಾರೆ. ಈ ಫೋಟೋ ತೆಗೆದ ದಿನವೇ ನಟಿ ರಚಿತಾ ರಾಮ್ ಕೂಡ ಜೈಲಿಗೆ ಭೇಟಿ ನೀಡಿದ್ದು, ಈ ಪಾರ್ಟಿ ನಡೆದಿರುವುದು ಕನ್ಫರ್ಮ್ ಆಗಿದೆ.
ಇನ್ನು, ರಚಿತಾ ರಾಮ್ ಆಗಸ್ಟ್ 22ನೇ ತಾರೀಕು ಎಂದರೆ 4 ದಿನಗಳ ಹಿಂದೆ ಭೇಟಿ ನೀಡಿದ್ದರು. ಅಂದು ಸಂಜೆಯೇ ನಟ ದರ್ಶನ್ ವಿಲ್ಸನ್ ಗಾರ್ಡನ್ ನಾಗನ ಜೊತೆ ಪಾರ್ಟಿ ಮಾಡಿದ್ದಾರೆ. ಹಾಗಾಗಿ ದರ್ಶನ್ ಬಿಂದಾಸ್ ಲೈಫ್ ಬಗ್ಗೆ ರಚಿತಾ ರಾಮ್ಗೆ ಗೊತ್ತಿತ್ತು. ಅದರಲ್ಲೂ ರಚಿತಾ ರಾಮ್ ದರ್ಶನ್ ಬಾಸ್ ಎಲ್ಲಿದ್ರೂ ಬಾಸ್ ಎಂದಿದ್ದರು. ಈ ಬಗ್ಗೆ ಸ್ವತಃ ಬಂಧಿಖಾನೆ ಅಧಿಕಾರಿ ಮಾಲಿನಿ ಕೃಷ್ಣ ಮೂರ್ತಿ ಹೇಳಿಕೆ ನೀಡಿದ್ದು, ರಚಿತಾ ರಾಮ್ ಅವರಿಗೆ ಸಂಕಷ್ಟ ಎದುರಾಗಿದೆ. ಮುಂದಿನ ದಿನಗಳಲ್ಲಿ ರಚಿತಾ ರಾಮ್ ಅವರನ್ನು ಕರೆದು ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಅಧಿಕಾರಿಗಳು ಅಮಾನತು!
ಜೈಲಲ್ಲಿ ದರ್ಶನ್‌ಗೆ ವಿಶೇಷ ಸೌಲಭ್ಯ ನೀಡುತ್ತಿರುವ ಆರೋಪ ಪ್ರಕರಣ ಸಂಬಂಧ 7 ಜನ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಅಮಾನತು ಮಾಡಿದ್ದೇವೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ. ಜೈಲರ್ ಶರಣಬಸವ ಅಮಿನ್‌ಘಡ್, ಪ್ರಭು ಎಸ್. ಖಂಡೇಲ್ ವಾಲ್, ಅಸಿಸ್ಟೆಂಟ್ ಜೈಲರ್ಸ್ ಶ್ರೀಕಾಂತ್ ತಳವಾರ್, ಎಲ್. ಎಸ್ ತಿಪ್ಪೇಸ್ವಾಮಿ, ಹೆಡ್ ವಾರ್ಡರ್ಸ್ ವೆಂಕಪ್ಪ, ಸಂಪತ್ ಕುಮಾರ್ ತಡಪಟ್ಟಿ, ವಾರ್ಡರ್ ಬಸ್ಸಪ್ಪ ತೇಲಿ ಅಮಾನತು ಆದವರು.
ಇದನ್ನೂ ಓದಿ: ರಾಜಾತಿಥ್ಯ ಸಿಗ್ತಿರೋ ದರ್ಶನ್‌ಗೆ ನಿಜವಾಗ್ಲೂ ಶಿಕ್ಷೆ ಆಗುತ್ತಾ? ಸ್ಫೋಟಕ ಸತ್ಯ ಬಿಚ್ಚಿಟ್ಟ ಮಾಜಿ ಜೈಲರ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ