ಫುಲ್ ರಾಂಗ್ ಆದ ನಟಿ ರಾಗಿಣಿ ದ್ವಿವೇದಿ.. ಅಭಿಮಾನಿ ಕಪಾಳಕ್ಕೆ ಬಾರಿಸಿ ಕೋಪಾತಾಪ; ವಿಡಿಯೋ ಇಲ್ಲಿದೆ!

author-image
Veena Gangani
Updated On
ಫುಲ್ ರಾಂಗ್ ಆದ ನಟಿ ರಾಗಿಣಿ ದ್ವಿವೇದಿ.. ಅಭಿಮಾನಿ ಕಪಾಳಕ್ಕೆ ಬಾರಿಸಿ ಕೋಪಾತಾಪ; ವಿಡಿಯೋ ಇಲ್ಲಿದೆ!
Advertisment
  • ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಌಕ್ಟೀವ್ ಆಗಿರೋ ನಟಿ
  • ಅಭಿಮಾನಿ ವರ್ತನೆ ಕಂಡು ಏಕಾಏಕಿ ಸಿಡಿದೆದ್ದಿ ನಟಿ ರಾಗಿಣಿ ದ್ವಿವೇದಿ
  • ಎಲ್ಲರ ಮುಂದೆ ಆ ಅಭಿಮಾನಿ ಮೇಲೆ ಸಿಟ್ಟಾಗಿ ಬೈದಿದ್ದೇಕೆ ಸ್ಟಾರ್ ನಟಿ!

ಸ್ಯಾಂಡಲ್‌ವುಡ್ ನಟಿ ರಾಗಿಣಿ ದ್ವಿವೇದಿ ಇತ್ತೀಚಿನ ದಿನಗಳಲ್ಲಿ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಌಕ್ಟೀವ್​ ಆಗಿದ್ದಾರೆ. ಹೊಸ ಹೊಸ ಬೋಲ್ಡ್​ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಾ ಹಾಟ್​ ಟಾಪಿಕ್​ನಲ್ಲಿ ಇರುತ್ತಾರೆ.

publive-image

ಆದ್ರೆ ಇದರ ಮಧ್ಯೆ ಅಭಿಮಾನಿಯೊಬ್ಬರ ವರ್ತನೆ ಕಂಡು ಏಕಾಏಕಿ ಸಿಡಿದೆದ್ದಿದ್ದಾರೆ ನಟಿ ರಾಗಿಣಿ ದ್ವಿವೇದಿ. ಹೌದು, ಇಂದು ನಟಿ ರಾಗಿಣಿ ದ್ವಿವೇದಿ ಅವರು ಇವೆಂಟ್‌ವೊಂದರಲ್ಲಿ ಭಾಗವಹಿಸಿದ್ದರು. ಆ ವೇಳೆ ಅಭಿಮಾನಿಗಳು ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದರು.

ಇದನ್ನೂ ಓದಿ:ನಟಿ ರನ್ಯಾ ರಾವ್ ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ನಲ್ಲಿ ಪ್ರಭಾವಿ ಸಚಿವರು; ಸ್ಫೋಟಕ ಮಾಹಿತಿ ಬಹಿರಂಗ!

ಇದೇ ವೇಳೆ ಅಭಿಮಾನಿಯೊಬ್ಬ ಏಕಾಏಕಿ ನಟಿ ರಾಗಿಣಿ ದ್ವಿವೇದಿ ಅವರ ಕೈಯನ್ನು ಹಿಡಿದುಕೊಂಡಿದ್ದಾನೆ. ಇದಕ್ಕೆ ಸಿಟ್ಟಾಗಿದ್ದ ನಟಿ ರಾಗಿಣಿ ಆತನ ಕೆನ್ನೆಗೆ ಬಾರಿಸಿದ್ದಾರೆ. ಇದಾದ ಬಳಿಕ ಎಲ್ಲರ ಮುಂದೆ ಆ ಅಭಿಮಾನಿ ಮೇಲೆ ಸಿಟ್ಟಾಗಿ ಬೈದಿದ್ದಾರೆ. ನಂತರ ಅಲ್ಲಿನ ಸಿಬ್ಬಂದಿಗಳು ಆತನನ್ನು ಬೇರೆ ಕಡೆ ಕರೆದುಕೊಂಡು ಹೋಗಿದ್ದಾರೆ.

ನಟಿ ರಾಗಿಣಿ ದ್ವಿವೇದಿ ಅಭಿಮಾನಿಗೆ ಹೊಡೆದ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಇದೇ ವಿಡಿಯೋ ನೋಡಿದ ಅಭಿಮಾನಿಗಳು ಫುಲ್ ಶಾಕ್ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment