/newsfirstlive-kannada/media/post_attachments/wp-content/uploads/2025/02/rakshitha4.jpg)
ಸ್ಯಾಂಡಲ್‌ವುಡ್‌ನ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ಅವರ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಹೌದು, ನಟಿ ರಕ್ಷಿತಾ ಪ್ರೇಮ್​ ಅವರ ಸಹೋದರ ರಾಣಾ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
/newsfirstlive-kannada/media/post_attachments/wp-content/uploads/2025/02/rakshitha.jpg)
ಇದೇ ಫೆಬ್ರವರಿ 7 ಮತ್ತು 8ರಂದು ಮದುವೆ ನಡೆಯುತ್ತಿದೆ. ರಕ್ಷಿತಾ ಸಹೋದರ ಮದುವೆ ಆಗ್ತಿರೋ ಹುಡುಗಿಯ ಹೆಸರು ಕೂಡ ರಕ್ಷಿತಾ. ರಾಣಾ ಮತ್ತು ರಕ್ಷಿತಾ ಕಳೆದ ವರ್ಷ ಎಂಗೇಜ್ ಆಗಿದ್ದರು. ನವೆಂಬರ್ ತಿಂಗಳಲ್ಲಿಯೇ ಈ ಜೋಡಿ ಸರಳವಾಗಿಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
/newsfirstlive-kannada/media/post_attachments/wp-content/uploads/2025/02/rakshitha2.jpg)
ಇದೀಗ ರಕ್ಷಿತಾ ಸಹೋದರ ಮನೆಯಲ್ಲಿ ಮದುವೆ ಸಂಭ್ರಮ ಶುರು ಆಗಿದೆ. ಇದೇ ಸಂಭ್ರಮದಲ್ಲಿದ್ದ ನಟಿ ರಕ್ಷಿತಾ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಮದುವೆ ಸಂಭ್ರಮ ಶುರು ಅಂತ ಕೆಲವೊಂದು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
/newsfirstlive-kannada/media/post_attachments/wp-content/uploads/2025/02/rakshitha3.jpg)
ನಟಿ ರಕ್ಷಿತಾ ಅವರು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
/newsfirstlive-kannada/media/post_attachments/wp-content/uploads/2025/02/rakshitha1.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us