ಕಬಿನಿಯಲ್ಲಿ ಸ್ಯಾಂಡಲ್‌ವುಡ್‌ ಕ್ರೇಜಿ ಕ್ವೀನ್ ಮೋಜು ಮಸ್ತಿ.. ನಟಿ ರಕ್ಷಿತಾ ಪ್ರೇಮ್​ ಕ್ಯೂಟ್​ ವಿಡಿಯೋ ಇಲ್ಲಿದೆ!

author-image
Veena Gangani
Updated On
ಕಬಿನಿಯಲ್ಲಿ ಸ್ಯಾಂಡಲ್‌ವುಡ್‌ ಕ್ರೇಜಿ ಕ್ವೀನ್ ಮೋಜು ಮಸ್ತಿ.. ನಟಿ ರಕ್ಷಿತಾ ಪ್ರೇಮ್​ ಕ್ಯೂಟ್​ ವಿಡಿಯೋ ಇಲ್ಲಿದೆ!
Advertisment
  • ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಕೊಂಡ ಸ್ಟಾರ್​ ನಟಿ
  • ತಮ್ಮ ರಾಣಾನ ಮದುವೆ ಕೆಲಸದಲ್ಲಿ ಬ್ಯುಸಿಯಾಗಿದ್ದ ನಟಿ
  • ಹುಲಿ, ಆನೆ, ನವಿಲು, ಜಿಂಕೆಯನ್ನು ನೋಡಿ ನಟಿ ಫುಲ್ ಖುಷ್

ಸ್ಯಾಂಡಲ್​ವುಡ್​ ಕ್ರೇಜಿ ಕ್ವೀನ್ ನಟಿ ರಕ್ಷಿತಾ ಪ್ರೇಮ್ ಸದ್ಯ ಫ್ರೀಯಾಗಿದ್ದಾರೆ. ಅದ್ಧೂರಿಯಾಗಿ ತಮ್ಮ ರಾಣಾ ಮದುವೆ ಮಾಡಿಸಿ ಸ್ಯಾಂಡಲ್​ವುಡ್​ ನಟಿ ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಕೊಂಡಿದ್ದಾರೆ.

ಇದನ್ನೂ ಓದಿ: ಧನರಾಜ್​ ಆಚಾರ್​ ಮನೆ ಮಂದಿಗೆ ಬಿಗ್​ ಸರ್​ಪ್ರೈಸ್;​ ಮಾಸ್ಟರ್ ತ್ರಿವಿಕ್ರಮ್ ಬಂದಿದ್ದೇಕೆ? ಫೋಟೋಸ್ ಇಲ್ಲಿವೆ!

publive-image

ಹೌದು, ಇಷ್ಟು ದಿನ ಮದುವ ಕೆಲಸದಲ್ಲಿ ಸಖತ್ ಬ್ಯುಸಿಯಾಗಿದ್ದ ​ನಟಿ ರಕ್ಷಿತಾ ಕಬಿನಿಗೆ ಭೇಟಿ ನೀಡಿ ಖುಷಿ ಪಟ್ಟಿದ್ದಾರೆ. ಇದೇ ಖುಷಿಯಲ್ಲಿ ಕಬಿನಿಗೆ ಭೇಟಿ ಕೊಟ್ಟ ರಕ್ಷಿತಾ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.

publive-image

ವಿಡಿಯೋ ಜೊತೆಗೆ ಕಬಿನಿ ಎಷ್ಟು ಇಷ್ಟ ಅಂತ ಬರೆದಿದ್ದಾರೆ. ರಕ್ಷಿತಾ ಅತಿ ಹೆಚ್ಚು ಪ್ರೀತಿಸುವ ಸ್ಥಳವೆಂದರೆ ಅದು ಕಬಿನಿ. ಈ ಬಾರಿ ಕಬಿನಿಗೆ ಭೇಟಿ ನೀಡಿದ್ದ ರಕ್ಷಿತಾ ಹುಲಿ, ಆನೆ, ನವಿಲು, ಜಿಂಕೆ, ಕೋತಿ ಹೀಗೆ ಸಾಕಷ್ಟು ಪ್ರಾಣಿಗಳನ್ನು ನೋಡಿ ಖುಷಿಯಾಗಿದ್ದಾರೆ.

publive-image

ನಾನು ಏನೋ ಕಳೆದುಕೊಂಡಿದ್ದೇನೆ, ಅಥವಾ ಮುಂದಿನ ಕೆಲಸಕ್ಕೆ ಇನ್ನೂ ತಯಾರಿ ನಡೆಸಿಲ್ಲ ಅಂತ ಎನಿಸಿದಾಗ ನಾನು ಮೊದಲು ಹೋಗಲು ಬಯಸುವ ಸ್ಥಳ ಸಫಾರಿ. ಕಾಡಿನಲ್ಲಿ ಸಫಾರಿ ಮಾಡುವುದು ನನಗೆ ಇಷ್ಟ. ಸಫಾರಿಗಾಗಿ ನಾನು ಯಾವುದೋ ಕಾಡನ್ನು ಆಯ್ಕೆ ಮಾಡಿಕೊಳ್ಳೋದಿಲ್ಲ. ನನಗೆ ಕಬಿನಿ ತುಂಬಾ ಇಷ್ಟ. ಅಲ್ಲಿನ ತಾಜಾ ಗಾಳಿ, ಸೂರ್ಯ, ನಾನು ಭೇಟಿಯಾಗುವ ಅದ್ಭುತ ಜನರು. ವಿಶೇಷವಾಗಿ ನಮ್ಮ ಡ್ರೈವರ್ ರಘು ಅಂತ ರಕ್ಷಿತಾ ಬರೆದಿದ್ದಾರೆ. ಇಲ್ಲಿನ ಸುಂದರ ಪ್ರಾಣಿಗಳು ನನಗೆ ಇಷ್ಟ. ನಾನು ಈ ಬಾರಿ ಹುಲಿ ರಾಣನನ್ನು ನೋಡಿದೆ. ಅವನು ತುಂಬಾ ಸುಂದರವಾಗಿದ್ದಾನೆ. ನನ್ನ ಹೃದಯದಲ್ಲಿ ಜಾಗ ಪಡೆದಿರುವ ಸ್ಥಳವೆಂದ್ರೆ ಅದು ಕಬಿನಿ ಹಿನ್ನೀರು ಎಂದು ರಕ್ಷಿತಾ ಬರೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment