/newsfirstlive-kannada/media/post_attachments/wp-content/uploads/2024/02/rakul-2.jpg)
ಕನ್ನಡದ 'ಗಿಲ್ಲಿ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ರಕುಲ್ ಪ್ರೀತ್ ಸಿಂಗ್ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟಿ ರಕುಲ್ ಪ್ರೀತ್ ಸಿಂಗ್ ಹಾಗೂ ಬಾಲಿವುಡ್ ನಟ ಹಾಗೂ ನಿರ್ಮಾಪಕ ಜಾಕಿ ಭಗ್ನಾನಿ ಜೊತೆ ಗೋವಾದ ಪ್ರತಿಷ್ಠಿತ ಐಟಿಸಿ ಗ್ರ್ಯಾಂಡ್‌ನಲ್ಲಿ ಮದುವೆಯಾಗಿದ್ದಾರೆ.
ಇದನ್ನು ಓದಿ: ರಕುಲ್ ಪ್ರೀತ್ ಸಿಂಗ್ ವೆಡ್ಡಿಂಗ್ ಕಾರ್ಡ್ ವೈರಲ್! ಮೋದಿ ಹೇಳಿದಂತೆ ಈ ಜೋಡಿ ಮದುವೆ ಆಗ್ತಿರೋದು ಎಲ್ಲಿ ಗೊತ್ತಾ?
ಕಳೆದ ಒಂದು ವಾರದಿಂದ ಗೋವಾದಲ್ಲಿ ರಕುಲ್ ಪ್ರೀತ್ ಸಿಂಗ್ ಹಾಗೂ ಜಾಕಿ ಭಗ್ನಾನಿ ಮದುವೆ ಸಮಾರಂಭಗಳು ನಡೆಯುತ್ತಿದ್ದವು. ಇದೀಗ ಗುರು ಹಿರಿಯರ ಸಮ್ಮುಖದಲ್ಲಿ ರಕುಲ್ ಪ್ರೀತ್ ಸಿಂಗ್ ಹಾಗೂ ಜಾಕಿ ಭಗ್ನಾನಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನೂ ರಕುಲ್ ಹಾಗೂ ಜಾಕಿ ಮದುವೆ ಸಮಾರಂಭದಲ್ಲಿ ಆಪ್ತರು, ಸ್ನೇಹಿತರು, ಕುಟುಂಬಸ್ಥರು ಹಾಗೂ ಬಾಲಿವುಡ್‌ನ ಗಣ್ಯರು ಭಾಗವಹಿಸಿದ್ದರು. ಅದರಲ್ಲೂ ಸಂಗೀತ ಕಾರ್ಯಕ್ರಮದಲ್ಲಿ ಶಿಲ್ಪಾ ಶೆಟ್ಟಿ ತಮ್ಮ ಪತಿ ರಾಜ್ ಕುಂದ್ರಾರೊಂದಿಗೆ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಆ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
View this post on Instagram
ರಕುಲ್ ಪ್ರೀತ್ ಸಿಂಗ್ ಮದುವೆಗೆ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಅನನ್ಯ ಪಾಂಡೇ, ಆದಿತ್ಯ ರಾಯ್ ಕಪೂರ್, ಭೂಮಿ ಪಡ್ನೇಕರ್, ವರುಣ್ ಧವನ್ ಸೇರಿದಂತೆ ಹಲವು ಬಾಲಿವುಡ್ ಗಣ್ಯರು ಗೋವಾಗೆ ಹೋಗಿದ್ದಾರೆ. ರಕುಲ್ ಪ್ರೀತ್ ಸಿಂಗ್ ಹಾಗೂ ಜಾಕಿ ಭಗ್ನಾನಿ ಈ ಇಬ್ಬರ ಮದುವೆಗೆ ಕಾಸ್ಟ್ಯೂಮ್‌ಗಳನ್ನು ತರುಣ್ ತಹಿಲಿಯಾನಿ ಡಿಸೈನ್ ಮಾಡಿದ್ದಾರೆ. ಮದುವೆ ಬಳಿಕ ಒಂದು ವಾರ ಗ್ಯಾಪ್ ಕೊಟ್ಟು ಮತ್ತೆ ಸಿನಿಮಾಗೆ ಮರಳಲಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ