ಕನ್ನಡದ ಗಿಲ್ಲಿ ನಟಿ ರಕುಲ್ ಪ್ರೀತ್ ಸಿಂಗ್ ಸಹೋದರ, ಸ್ಟಾರ್ ನಟ ಅರೆಸ್ಟ್; ಕಾರಣವೇನು?​

author-image
Veena Gangani
Updated On
ಕನ್ನಡದ ಗಿಲ್ಲಿ ನಟಿ ರಕುಲ್ ಪ್ರೀತ್ ಸಿಂಗ್ ಸಹೋದರ, ಸ್ಟಾರ್ ನಟ ಅರೆಸ್ಟ್; ಕಾರಣವೇನು?​
Advertisment
  • ನಟ ಅಮನ್‌ ಸಿಂಗ್​ನನ್ನು ಬಂಧಿಸಿದ ಸೈಬರಾಬಾದ್ ಪೊಲೀಸರು
  • ಬಹುಭಾಷಾ ನಟಿ ರಕುಲ್ ಪ್ರೀತ್ ಸಿಂಗ್ ಸಹೋದರ ಅಮನ್‌ ಬಂಧನ
  • ’ನಿನ್ನೇ ಪೆಲ್ಲದಾತಾ‘ ಚಿತ್ರದ ಮೂಲಕ ಚಿತ್ರರಂಗಕ್ಕೆ ನಟ ಅಮನ್‌ ಎಂಟ್ರಿ

ಹೈದರಾಬಾದ್: ಕನ್ನಡದ ‘ಗಿಲ್ಲಿ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಟಾಲಿವುಡ್‌ನ ಖ್ಯಾತ ನಟಿ ರಕುಲ್ ಪ್ರೀತ್ ಸಿಂಗ್ ಸಹೋದರನನ್ನು ಬಂಧಿಸಲಾಗಿದೆ. ಸ್ಟಾರ್ ನಟಿ ರಕುಲ್ ಪ್ರೀತ್ ಸಿಂಗ್ ಅವರ ಸಹೋದರ ನಟ ಅಮನ್‌ ಸಿಂಗ್ ಡ್ರಗ್ಸ್ ಕೇಸ್​ನಲ್ಲಿ ಸಿಕ್ಕಿಬಿದ್ದಿದ್ದಾರೆ. ಈ ಸಂಬಂಧ ಸೈಬರಾಬಾದ್ ಪೊಲೀಸರು ಅಮನ್‌ ಸಿಂಗ್​ನನ್ನು ಅರೆಸ್ಟ್ ಮಾಡಿದ್ದಾರೆ.

publive-image

ಇದನ್ನೂ ಓದಿ:ಬಾಯ್ ಫ್ರೆಂಡ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಕುಲ್​ ಪ್ರೀತ್​ ಸಿಂಗ್​​.. ಹುಡುಗ ಯಾರು..?

ಹೈದರಾಬಾದ್​ನಲ್ಲಿ ಭಾರೀ ಮಾದಕ ದ್ರವ್ಯ ದಂಧೆ ನಡೆಯುತ್ತಿದೆ ಎಂದು ಪೊಲೀಸರಿಗೆ ಮಾಹಿತಿ ಬಂದಿತ್ತು. ಕೂಡಲೇ ಡ್ರಗ್ಸ್​​ ದಂಧೆ ನಡೆಯುತ್ತಿದ್ದ ವೇಳೆ ರಾಕುಲ್ ಪ್ರೀತ್ ಸಿಂಗ್ ಸಹೋದರ ಅಮನ್ ಸಿಂಗ್ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ​ಅಣ್ಣನನ್ನು ಭೇಟಿಯಾಗಲು ಜೈಲಿಗೆ ಬಂದ ತಮ್ಮ ದಿನಕರ್ ತೂಗುದೀಪ; ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಸಾಥ್‌

ಸದ್ಯ ಅಮನ್ ಸಿಂಗ್​ನನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಡ್ರಗ್ಸ್ ಮಾರಾಟ ಮಾಡುತ್ತಿದ್ದ 12 ಜನರನ್ನು ಸಹ ಸೈಬರಾಬಾದ್ ಪೊಲೀಸರು ಬಂಧಿಸಿದ್ದಾರೆ. ಈ ಗ್ಯಾಂಗ್ ಬಳಿ 35 ಲಕ್ಷ ಮೌಲ್ಯದ 200 ಗ್ರಾಂ ಕೊಕೇನ್ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಬಂಧಿತ ಆರೋಪಿಗಳಲ್ಲಿ ನೈಜೀರಿಯಾದ ಒನುವಾ ಬ್ಲೆಸ್ಸಿಂಗ್, ಅಲಿಯಾಸ್ ಜೋನಾ ಗೋಮ್ಸ್, 31, ಅಲ್ಲಂ ಸತ್ಯ ವೆಂಕಟ ಗೌತಮ್, 31, ಅಜೀಜ್ ನೋಹೀಮ್ ಅಡೆಶೋಲಾ, 29, ಮೊಹಮ್ಮದ್ ಮಹಬೂಬ್ ಶರೀಫ್, 36 ಮತ್ತು ಸಾನಬೋಯಿನಾ ವರುಣ್ ಕುಮಾರ್, 42 ಸೇರಿದ್ದಾರೆ. ಕಳೆದ ಆರು ತಿಂಗಳಲ್ಲಿ ಸುಮಾರು 2.6 ಕಿಲೋಗ್ರಾಂಗಳಷ್ಟು ಕೊಕೇನ್ ಅನ್ನು ಗ್ರಾಹಕರಿಗೆ ಪೂರೈಸಿದ್ದಾರೆ ಎಂದು ಡಿಸಿಪಿ ತಿಳಿಸಿದ್ದಾರೆ.

ರಕುಲ್ ಪ್ರೀತ್ ಸಿಂಗ್‌ ಅವರ ಸಹೋದರ ಅಮನ್ ಸಿಂಗ್ ಕೂಡ ತೆಲುಗಿನಲ್ಲಿ ನಾಯಕನಾಗಿ ಪದಾರ್ಪಣೆ ಮಾಡಿದರು. ವೈಕುಂಠ ಬೋನು ನಿರ್ದೇಶನದ ನಿನ್ನೇ ಪೆಲ್ಲದಾತಾ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment