ಡ್ರಗ್ಸ್​​ ಕೇಸ್​​ನಲ್ಲಿ ನಟಿ ರಕುಲ್ ಪ್ರೀತ್ ಸಿಂಗ್ ಸಹೋದರ ಅರೆಸ್ಟ್! 2 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್

author-image
AS Harshith
Updated On
ಡ್ರಗ್ಸ್​​ ಕೇಸ್​​ನಲ್ಲಿ ನಟಿ ರಕುಲ್ ಪ್ರೀತ್ ಸಿಂಗ್ ಸಹೋದರ ಅರೆಸ್ಟ್! 2 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್
Advertisment
  • 13 ಮಂದಿ ಡ್ರಗ್ ಸೇವನೆ ಮಾಡಿದವರ ಬಂಧನ
  • 2 ಕೋಟಿ ಮೌಲ್ಯದ 200 ಗ್ರಾಂ ಕೊಕೇನ್​​, 2 ಬೈಕ್​ ವಶಕ್ಕೆ
  • ಕಳೆದ ಆರು ತಿಂಗಳಲ್ಲಿ 2.6 ಕಿಲೋ ಗ್ರಾಂ ಕೊಕೇನ್ ಸಪ್ಲೈ

ಹೈದರಾಬಾದ್​​​ನಲ್ಲಿ ಮತ್ತೊಂದು ಮತ್ತಿನ ಲೋಕದ ಕೇಸ್​ ಬಯಲಾಗಿದೆ. ಇತ್ತೀಚಿಗೆ ಬೆಂಗಳೂರಿನಲ್ಲಿ ರೇವ್​​ ಪಾರ್ಟಿ ಮಾಡಿ ಹಲವು ಟಾಲಿವುಡ್​​ ಮಂದಿ ಅಂದರ್​​ ಆಗಿದ್ರು. ಇದೀಗ ಡ್ರಗ್ಸ್​​ ಕೇಸ್​​ನಲ್ಲಿ ನಟಿ ರಕುಲ್ ಪ್ರೀತ್ ಸಿಂಗ್ ಬ್ರದರ್​​ ಅರೆಸ್ಟ್​​ ಆಗಿದ್ದು, ಇನ್ನೂ ಕೆಲವರ ಹುಡುಕಾಟ ನಡೆದಿದೆ.

ರಕುಲ್​​​. ಸ್ನಿಗ್ಧ ಸೌಂದರ್ಯ. ಕಣ್ಣಲ್ಲೆ ಕೆಣಕುವ ಕುಡಿ ನೋಟ. ಈ ತಳಕು ಬಳುಕಿನ ಸುಂದರಿ, ಪಡ್ಡೆ ಹುಡುಗರ ನಿದ್ದೆ ಕದ್ದ ಚೋರಿ. ಹಾಲ್ಬಣ್ಣದ ಈ ಬೆಳಕಿನ ಸಿರಿ, ಬಾಲಿವುಡ್​ಗಿಂತ ದಕ್ಷಿಣದ ಸಿನಿ ರಂಗದಲ್ಲಿ ಸೊಂಟ ಬಳುಕಿಸಿದ್ದೆ ಹೆಚ್ಚು. ಖ್ಯಾತಿಯಷ್ಟೇ ಅಪಖ್ಯಾತಿಯ ಸಂಕಟ ಅನುಭವಿಸಿದ್ದಿದೆ.

ಇದನ್ನೂ ಓದಿ: ವಿಪರೀತ ಮಳೆ, ಹಳ್ಳದಂತಾದ ಬಸ್ ನಿಲ್ದಾಣ.. ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

publive-image

ಎರಡು ಕೋಟಿ ಮೌಲ್ಯದ ಮಾದಕ ವಸ್ತು ಸೀಜ್!

ಹೈದರಾಬಾದ್ ಡ್ರಗ್ಸ್ ಕೇಸ್ ಪ್ರಕರಣದಲ್ಲಿ ರಕುಲ್ ಪ್ರೀತ್ ಸಿಂಗ್ ಸಹೋದರ ಅಮನ್ ಪ್ರೀತ್ ಸಿಂಗ್‌ ಬಂಧನವಾಗಿದೆ. ಇತ್ತೀಚೆಗೆ ಬೆಳಕಿಗೆ ಬಂದ ಡ್ರಗ್ಸ್ ಕೇಸ್​ನಲ್ಲಿ ತೆಲಂಗಾಣ ಆಂಟಿ ನಾರ್ಕೋಟಿಕ್ಸ್ ಬ್ಯೂರೋ ಕಾರ್ಯಾಚರಣೆಯಲ್ಲಿ ಐವರನ್ನ ಬಂಧಿಸಲಾಗಿದೆ. ಬಂಧಿತ ನೈಜೀರಿಯಾ ವ್ಯಕ್ತಿ, ಹೈಪ್ರೋಫೈಲ್​ ಕಸ್ಟಮರ್‌ಗಳಿಗೆ ಕೊಕೇನ್​ ಸಪ್ಲೈ ಮಾಡ್ತಿರೋದನ್ನ ಬಾಯ್ಬಿಟ್ಟಿದ್ದಾನೆ.

ಇದನ್ನೂ ಓದಿ: ಅಯ್ಯಯ್ಯೋ! ಬರೋಬ್ಬರಿ 2 ದಿನ ಲಿಫ್ಟ್​​ನಲ್ಲೇ ಸಿಲುಕಿದ್ದ ವ್ಯಕ್ತಿ.. ಆಮೇಲೇನಾಯ್ತು ಗೊತ್ತಾ?

publive-image

ರಕುಲ್ ಪ್ರೀತ್ ಸಹೋದರ ಅಮನ್​ ಡ್ರಗ್ ಸೇವನೆ ಖಚಿತ

ಈ ಕೇಸ್​ನಲ್ಲಿ 13 ಮಂದಿ ಡ್ರಗ್ ಸೇವನೆ ಮಾಡಿದವರನ್ನೂ ಬಂಧಿಸಲಾಗಿದೆ. ಅವರಲ್ಲಿ ರಕುಲ್ ಪ್ರೀತ್ ಸಹೋದರ ಅಮನ್​ ಪ್ರೀತ್​ಸಿಂಗ್ ಡ್ರಗ್ ಸೇವನೆ ಮಾಡಿದ್ದು ಖಚಿತವಾಗಿದೆ. ಬಂಧಿತರಿಂದ 200 ಗ್ರಾಂ ಕೊಕೇನ್​​, 2 ಬೈಕ್​, 2 ಪಾಸ್​ಪೋರ್ಟ್, 10 ಮೊಬೈಲ್​​ಗಳನ್ನ ಬಂಧಿತರಿಂದ ವಶ ಪಡಿಸಿಕೊಂಡಿದ್ದಾರೆ. ಕಳೆದ ಆರು ತಿಂಗಳಲ್ಲಿ ಸುಮಾರು 2.6 ಕಿಲೋ ಗ್ರಾಂಗಳಷ್ಟು ಕೊಕೇನ್ ಗ್ರಾಹಕರಿಗೆ ಪೂರೈಸಿದ್ದಾರೆ ಅಂತ ಡಿಸಿಪಿ ತಿಳಿಸಿದ್ದಾರೆ.

ಇದನ್ನೂ ಓದಿ: Meesho ಬಳಸೋರೇ ಎಚ್ಚರ! ಚೂರು ಯಾಮಾರಿದ್ರೂ ಹೋಯ್ತು ದುಡ್ಡು! ಏನಿದು ಸ್ಟೋರಿ?

publive-image

ಒಟ್ಟಾರೆ, ರಕುಲ್ ಪ್ರೀತ್ ಸಿಂಗ್ ಸಹೋದರನ ಹೆಸರು ಕೇಳಿ ಬರುತ್ತಿದ್ದಂತೆ ತನಿಖೆ ಮತ್ತಷ್ಟು ಚುರುಕು ಗೊಂಡಿದೆ. ಮತ್ಯಾರಾದರೂ ಪ್ರಭಾವಿ ವ್ಯಕ್ತಿಗಳಿದ್ದಾರಾ ಅನ್ನೋದನ್ನ ಕೆದಕಲಾಗ್ತಿದೆ. 2021 ಹಾಗೂ 2022ರಲ್ಲೂ ನಟಿ ರಕುಲ್ ಪ್ರೀತ್ ಸಿಂಗ್ ಹೆಸರು ಡ್ರಗ್ಸ್ ಕೇಸ್‌ನಲ್ಲಿ ಕೇಳಿ ಬಂದಿತ್ತು. ಈ ಸಂಬಂಧ ವಿಚಾರಣೆ ಸಹ ಎದುರಿಸಿದ್ರು. ಆದ್ರೀಗ ಅವರ ಸಹೋದರ ಲಾಕ್​​ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment