ಸ್ಟಾರ್ ನಟಿ ರಂಭಾ ಮಗಳ ನೋಡಿದ್ದೀರಾ? ಬ್ಯೂಟಿಯಲ್ಲಿ ಅಮ್ಮನನ್ನೇ ಮೀರಿಸ್ತಾಳೆ ಈ ಚೆಲುವೆ!

author-image
Veena Gangani
Updated On
ಸ್ಟಾರ್ ನಟಿ ರಂಭಾ ಮಗಳ ನೋಡಿದ್ದೀರಾ? ಬ್ಯೂಟಿಯಲ್ಲಿ ಅಮ್ಮನನ್ನೇ ಮೀರಿಸ್ತಾಳೆ ಈ ಚೆಲುವೆ!
Advertisment
  • ರಂಭಾ ಪುತ್ರಿಯ ಸೌಂದರ್ಯಕ್ಕೆ ಫ್ಯಾನ್ಸ್​ ಕ್ಲೀನ್ ಬೋಲ್ಡ್
  • ನಟಿ ರಂಭಾ ಮಗಳನ್ನು ನೋಡಿ ಅಭಿಮಾನಿಗಳು ಶಾಕ್
  • ಸ್ಟಾರ್ ನಟಿ ಮುದ್ದಿನ ಮಗಳು ಸಿನಿಮಾಗೆ ಎಂಟ್ರಿ ಕೊಡ್ತಾರಾ?

ಸ್ಟಾರ್ ನಟಿ ರಂಭಾ ಅವರು ನಟನೆಯಿಂದ ದೂರ ಸರಿದು ಹಲವು ವರ್ಷಗಳು ಕಳೆದಿವೆ. ಬಣ್ಣದ ಲೋಕಕ್ಕೆ ಮರಳಲಿ‌‌ ಮತ್ತೆ ಬರಲಿ ಅಂತ ಬಯಸುತ್ತಿದ್ದ ಅಭಿಮಾನಿಗಳಿಗೆ ಸರ್​ಪ್ರೈಸ್​ ಕೊಟ್ಟಿದ್ದರು. ಮತ್ತೆ ನಟನೆಗೆ ಮರಳುತ್ತೇನೆ ಅಂತ ಭರವಸೆ ನೀಡಿದ್ದರು.

ಇದನ್ನೂ ಓದಿ: ರೆಸ್ಟೋರೆಂಟ್‌ನಲ್ಲಿ ವೇಟರ್ ಆಗಿದ್ದ.. ಈಗ 2500 ಕೋಟಿ ಒಡೆಯ.. ಯಾರು ಈ ಸ್ಟಾರ್​ ಹೀರೋ?

publive-image

ಇದರ ಮಧ್ಯೆ ನಟಿ ರಂಭಾ ಮಗಳ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ. ರಂಭಾ ಮಗಳನ್ನು ನೋಡಿದ ನೆಟ್ಟಿಗರು ಆಕೆಯ ಸೌಂದರ್ಯದ ಬಗ್ಗೆಯೇ ಚರ್ಚೆ ಮಾಡುತ್ತಿದ್ದಾರೆ. ಅಲ್ಲದೇ ರಂಭಾ ಅವರಂತೆ ಅವರ ಮುದ್ದಿನ ಮಗಳು ಸಿನಿಮಾಗೆ ಎಂಟ್ರಿ ಕೊಡ್ತಾರಾ ಅಂತ ಕಾಯುತ್ತಿದ್ದಾರೆ.

publive-image

ಹೌದು, ನಟಿ ರಂಭಾ ಚಿತ್ರರಂಗಕ್ಕೆ ಬಂದಾಗ ಅವರಿಗೆ ಕೇವಲ 15 ವರ್ಷ. ಸಣ್ಣ ವಯಸ್ಸಿನಲ್ಲೇ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡರು.‌ ನಟಿಯಾಗಿ ಗುರುತಿಸಿಕೊಂಡ ಬಳಿಕ ಅವರ ಜನಪ್ರಿಯತೆಗೆ ಪಾರವೇ ಇಲ್ಲದಂತೆ ಆಯಿತು. 1993ರಲ್ಲಿ ಸರ್ವರ್ ಸೋಮಣ್ಣ ಸಿನಿಮಾ ರಿಲೀಸ್ ಆಗಿತ್ತು.‌ ಇದು ಅವರ ನಟನೆಯ ಮೊದಲನೇ ಕನ್ನಡ ಸಿನಿಮಾ ಕೂಡ ಹೌದು. ಆ ಬಳಿಕ 8 ಕನ್ನಡ ಸಿನಿಮಾಗಳಲ್ಲಿ ನಟಿ ರಂಭಾ ನಟಿಸಿದರು. ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ನಟಿಸಿ ಸಖತ್ ಫೇಮಸ್​ ಕೂಡ ಆದರು.

publive-image

2010ರಲ್ಲಿ ರಂಭಾ ಅವರು ಇಂದ್ರಕುಮಾರ್ ಪದ್ಮನಾಥನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅಲ್ಲದೇ ಮದುವೆ ಬಳಿಕ‌ ಕೆನಡಾಗೆ ತೆರಳಿದ ನಟಿ ಸಿನಿಮಾದಲ್ಲಿ ನಟಿಸೋದು ಕಮ್ಮಿ ಆಯ್ತು. ಇದಾದ ಬಳಿಕ ನಟಿ ತಮ್ಮ ಮುದ್ದಾ ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾದ್ರು. ಸದ್ಯ ನಟಿಗೆ  ಇಬ್ಬರು ಹೆಣ್ಣು ಮಕ್ಕಳಾದ ಲಾನ್ಯಾ, ಸಶಾ ಹಾಗೂ ಒಬ್ಬ ಶಿವಿನ್ ಮಗನಿದ್ದಾನೆ.

ಆದ್ರೆ ಈಗ ನಟಿ ರಂಭಾ ಅವರ ಹಿರಿಯ ಮಗಳು ಲಾನ್ಯಾ ಪದ್ಮನಾಥನ್ ಅವರ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ. ಲಾನ್ಯಾ ಪದ್ಮನಾಥನ್ ತನ್ನ ತಾಯಿಯಂತೆಯೇ ತುಂಬಾ ಸುಂದರವಾಗಿದ್ದಾರೆ. ಲಾನ್ಯಾ ಸೌಂದರ್ಯದಲ್ಲಿ ಅವರ ಅಮ್ಮನನ್ನೇ ಮಿರಿಸುತ್ತಾಳೆ ಅಷ್ಟೊಂದು ಕ್ಯೂಟ್​ ಆಗಿದ್ದಾಳೆ. ಇದೇ ಫೋಟೋಸ್​ ನೋಡಿ ಅಭಿಮಾನಿಗಳು  ಶೀಘ್ರದಲ್ಲೇ ಲಾನ್ಯಾ ಪದ್ಮನಾಥನ್ ನಾಯಕಿಯಾಗಿ ಚಿತ್ರರಂಗಕ್ಕೆ ಪ್ರವೇಶಿಸುವ ಅವಕಾಶವಿದೆ ಅಂತ ಕಾಮೆಂಟ್ಸ್​ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment