ದಿಢೀರ್​ ಕೋರ್ಟ್​ನಲ್ಲಿ ಕಾಣಿಸಿಕೊಂಡ ಸ್ಯಾಂಡಲ್​ವುಡ್​ ನಟಿ ರಮ್ಯಾ; ಏನಿದು ಕೇಸ್​​?

author-image
Ganesh Nachikethu
Updated On
ದಿಢೀರ್​ ಕೋರ್ಟ್​ನಲ್ಲಿ ಕಾಣಿಸಿಕೊಂಡ ಸ್ಯಾಂಡಲ್​ವುಡ್​ ನಟಿ ರಮ್ಯಾ; ಏನಿದು ಕೇಸ್​​?
Advertisment
  • ಬರೋಬ್ಬರಿ 7 ವರ್ಷಗಳ ನಂತರ ಅತಿಥಿ ಪಾತ್ರದಲ್ಲಿ ನಟಿ ರಮ್ಯಾ
  • ಕೇಸ್​ನಿಂದಲೇ ಭಾರೀ ಸದ್ದು ಮಾಡಿದ್ದ ಸ್ಯಾಂಡಲ್​ವುಡ್​ ಕ್ವೀನ್​​
  • ಇಂದು ವಿಚಾರಣೆಗಾಗಿ ದಿಢೀರ್​​ ಕೋರ್ಟ್​ಗೆ ಬಂದ ಸ್ಟಾರ್​​ ನಟಿ

ಬೆಂಗಳೂರು: ಸ್ಯಾಂಡಲ್​ವುಡ್ ಸ್ಟಾರ್​ ನಟಿ ರಮ್ಯಾ. ಇವರು ಈ ಹಿಂದೆಯಷ್ಟೇ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡದ ವಿರುದ್ಧ ಕೋರ್ಟ್​​ ಮೆಟ್ಟಿಲೇರಿದ್ದರು. ಇಂದು ಕೇಸ್​​ ವಿಚಾರಣೆಗಾಗಿ ನಟಿ ರಮ್ಯಾ ವಾಣಿಜ್ಯ ಕೋರ್ಟ್​ಗೆ ಆಗಮಿಸಿದ್ದಾರೆ.

ಬರೋಬ್ಬರಿ 7 ವರ್ಷಗಳ ನಂತರ ನಟಿ ರಮ್ಯಾ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರದ ಪ್ರೊಮೋಷನಲ್ ವಿಡಿಯೋನಲ್ಲೂ ರಮ್ಯಾ ನಟಿಸಿದ್ದರು. ಆದರೆ ಸಿನಿಮಾ ಟ್ರೈಲರ್ ರಿಲೀಸ್​ ಆದಮೇಲೆ ನಟಿ ರಮ್ಯಾಕೋರ್ಟ್​ ಮೆಟ್ಟಿಲೇರಿದ್ದರು.

ಏನಿದು ವಿವಾದ?

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಪ್ರೋಮೋ ಶೂಟ್​ಗೆ ಮಾತ್ರ ನನ್ನ ಪರ್ಮೀಷನ್​​ ಇತ್ತು. ನನ್ನ ದೃಶ್ಯಗಳನ್ನು ಪರ್ಮೀಷನ್​​ ಇಲ್ಲದೆ ಸಿನಿಮಾ ಮತ್ತು ಟ್ರೈಲರ್​ನಲ್ಲೂ ಬಳಸಿಕೊಳ್ಳಲಾಗಿದೆ. ಈ ಸಿನಿಮಾ ರಿಲೀಸ್​ಗೆ ತಡೆ ನೀಡಬೇಕು. ಒಂದು ಕೋಟಿ ಪರಿಹಾರ ಕೊಡಬೇಕು ಎಂದು ನಟಿ ರಮ್ಯಾ ಚಿತ್ರತಂಡದ ವಿರುದ್ಧ ಕೇಸ್​ ಹಾಕಿದ್ದರು.

ಸಿನಿಮಾಗಳಿಂದ ದೂರ ಉಳಿದಿದ್ದ ರಮ್ಯಾ ಅಷ್ಟಾಗಿ ಸುದ್ದಿಯಲ್ಲಿರಲಿಲ್ಲ. ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದಲ್ಲಿ ಇವರು ಕಾಮಿಯೋ ಎಂದಾಗ ಸಾಕಷ್ಟು ಸದ್ದು ಮಾಡಿದ್ದರು.

ಇದನ್ನೂ ಓದಿ:ಮತ್ತೊಂದು ವಂಚನೆ ಕೇಸ್‌.. ಐಶ್ವರ್ಯಾ ಗೌಡ ಬಂಧನದ ಬೆನ್ನಲ್ಲೇ ಬಿಡುಗಡೆ; ಏನಿದು ಹೊಸ ಟಿಸ್ಟ್‌?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment