/newsfirstlive-kannada/media/post_attachments/wp-content/uploads/2025/07/RAMYA_DARSHAN-1.jpg)
ಬೆಂಗಳೂರು: ರಮ್ಯಾ ಅವರಿಗೆ ದರ್ಶನ್​ ಅಭಿಮಾನಿಗಳು ಕೆಟ್ಟದಾಗಿ, ಅಶ್ಲೀಲವಾಗಿ ಕಮೆಂಟ್​​ಗಳನ್ನು ಮಾಡಿದ್ದರು. ಈ ಸಂಬಂಧ ನಟಿ ರಮ್ಯಾ ಅವರು ಇಂದು ಬೆಂಗಳೂರು ನಗರದ ಕಮಿಷನರ್​ ಕಚೇರಿಗೆ ಭೇಟಿ ನೀಡಿ ದೂರು ದಾಖಲು ಮಾಡಿದ್ದಾರೆ.
ದರ್ಶನ್ ಅವರ ಅಭಿಮಾನಿಗಳಿಗೆ ಕಾನೂನಾತ್ಮಕ ಪಾಠ ಕಲಿಸಲೆಂದು ರಮ್ಯಾ ಅವರು ಕಮಿಷನರ್​ ಸೀಮಂತ್​​ ಕುಮಾರ್ ಸಿಂಗ್​ಗೆ ದೂರು ನೀಡಿದ್ದಾರೆ. ಇನ್​ಸ್ಟಾದಲ್ಲಿ ರಮ್ಯಾ ಅವರು ಮಾಡಿದ ಪೋಸ್ಟ್​ಗೆ ದರ್ಶನ್ ಅಭಿಮಾನಿಗಳು ಅಶ್ಲೀಲವಾಗಿ, ಕೆಟ್ಟದಾಗಿ ಕಾಮೆಂಟ್ಸ್​ ಮಾಡಿದ್ದರು. ಈ ಎಲ್ಲದರ​ ದಾಖಲೆ ಸಮೇತರಾಗಿ ಆಯುಕ್ತರಿಗೆ ರಮ್ಯಾ ಅವರು ದೂರು ನೀಡಿದ್ದಾರೆ.
/newsfirstlive-kannada/media/post_attachments/wp-content/uploads/2025/07/RAMYA_BNG.jpg)
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ನಟಿ ರಮ್ಯಾ, ರೇಣುಕಾಸ್ವಾಮಿಗೂ ಇವರಿಗೂ ಯಾವುದೇ ವ್ಯತ್ಯಾಸ ಇಲ್ಲ. ಕೇಸ್ ಕೊಟ್ಟಿದ್ದೇನೆ. ಕೇಸ್ ಅನ್ನು ಅವರು ತೆಗೆದುಕೊಂಡಿದ್ದಾರೆ. ಇಲ್ಲೇ ಸೈಬರ್​ ಆಫೀಸ್​ ಇದೆ. ಅಲ್ಲಿಗೆ ಫಾರ್ವರ್ಡ್ ಮಾಡುತ್ತಾರೆ ಎಂದು ಹೇಳಿದ್ದಾರೆ. ಗಂಡಸರಿಗೆ ಎಷ್ಟು ಫ್ರೀಡಂ ಇದೆಯೋ ಮಹಿಳೆಯರಿಗೂ ಅಷ್ಟೇ ಫೀಡಂ ಇರಬೇಕು ಎಂದು ಹೇಳಿದ್ದಾರೆ.
ಇಂಡಸ್ಟ್ರಿಯಲ್ಲಿ ತುಂಬಾ ಜನ ಮೆಸೇಜ್ ಮಾಡಿ ನನಗೆ ಹೇಳಿದ್ದಾರೆ. ಹೊರಗಿನಿಂದಲೂ ಮಹಿಳೆಯರು ಮೆಸೇಜ್ ಮಾಡಿ ಸಪೋರ್ಟ್ ಮಾಡಿದ್ದಾರೆ. ಆದರೆ ಮರ್ಯಾದೆಗೆ ಅಂಜಿ ಯಾರು ಮುಂದೆ ಬರುತ್ತಿಲ್ಲ. 43 ಕಮೆಂಟ್​ಗಳನ್ನು ಮೆನ್ಷನ್ ಮಾಡಲಾಗಿದೆ. ತುಂಬಾ ಬೆದರಿಕೆ ಹಾಗೂ ಅಶ್ಲೀಲವಾಗಿ ಕಮೆಂಟ್ ಮಾಡಿದ್ದಾರೆ. ಅವರ ಹೆಸರುಗಳಿವೆ. ಪವಿತ್ರಾ ಗೌಡ ಬಗ್ಗೆ ಮಾತನಾಡಿದರೆ ನಿಮಗೆ ಕೋಪ ಬರುತ್ತೆ. ಆದರೆ ನಮಗೆ ಕಮೆಂಟ್ಸ್​ ಕಳಿಸಿದರೆ ಕೋಪ ಬರಲ್ವಾ?. ನಾವು ಮಹಿಳೆಯರು ಅಲ್ವಾ ಎಂದು ದರ್ಶನ್ ಅಭಿಮಾನಿಗಳನ್ನ ರಮ್ಯಾ ಅವರು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ರಮ್ಯಾ ಪರ ನಿಂತ ದೊಡ್ಮನೆ ಕುಡಿ.. ವಿನಯ್ ರಾಜ್​ಕುಮಾರ್​ ಹೇಳಿದ್ದೇನು?
/newsfirstlive-kannada/media/post_attachments/wp-content/uploads/2025/07/RAMYA_BNG_1.jpg)
ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ನಟಿ ರಕ್ಷಿತಾ ಅವರು ಹಾಕಿದ ಪೋಸ್ಟ್ ಬಗ್ಗೆ ಮಾತನಾಡಿದ ರಮ್ಯಾ ಅವರು ನನ್ನ ಬಗ್ಗೆ ಹಾಕಿಲ್ಲ ಅನಿಸುತ್ತದೆ. ಆ ಬಗ್ಗೆ ಮಾತನಾಡುವುದು ಏನು ಇಲ್ಲ. ದರ್ಶನ್ ಅವರ ನಂಬರ್​ ಕೂಡ ನನ್ನ ಬಳಿ ಇಲ್ಲ. ರೇಣುಕಾಸ್ವಾಮಿ ಕೇಸ್​ಗೂ ಮೊದಲು ಅವರು ಒಮ್ಮೆ ಮದುವೆಯಲ್ಲಿ ಸಿಕ್ಕಿದ್ದರು ಅಷ್ಟೇ. ದರ್ಶನ್ ಅವರು ಒಮ್ಮೆ ಅಭಿಮಾನಿಗಳಿಗೆ ಮನವರಿಕೆ ಮಾಡಬೇಕು. ಫ್ಯಾನ್ಸ್​​ಗೆ ಅವರು ಹೇಳಬೇಕು ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us