/newsfirstlive-kannada/media/post_attachments/wp-content/uploads/2025/07/RAMYA-FIRE-ON-DARSHAN-FANS.jpg)
2024, ಜೂನ್ 8. ರೇಣುಕಾಸ್ವಾಮಿ ಕೊ*ಲೆ. ಅಕ್ಟೋಬರ್ 30 ರಂದು ನಟ ದರ್ಶನ್ ಜೈಲೆಂಬ ಪಂಜರದಿಂದ ಹೊರ ಬಂದ ದಿನ. ಸದ್ಯ ಡೆವಿಲ್ ಶೂಟಿಂಗ್ ಹಿನ್ನೆಲೆಯಲ್ಲಿ ಥೈಲ್ಯಾಂಡ್ ಟ್ರಿಪ್ನಲ್ಲಿದ್ದಾರೆ ದರ್ಶನ್. ಇತ್ತ ಮಣ್ಣಲ್ಲಿ ಮಣ್ಣಾಗಿರೋ ರೇಣುಕಾಸ್ವಾಮಿ ಪರ ಮಾತಾಡೋಕ್ಕೆ ಮುಂದೆ ಬಂದ ಮೋಹಕತಾರೆ ರಮ್ಯಾಗೆ ದರ್ಶನ್ ಅಭಿಮಾನಿಗಳು ಇನ್ನಿಲ್ಲದ ಕಿರುಕುಳ ಕೊಡ್ತಿದ್ದಾರಂತೆ. ಈ ಬಗ್ಗೆ ನಟಿ ರಮ್ಯಾ ತಮ್ಮ ಇನ್ಸ್ಟಾಗೆ ಬಂದಿದ್ದ ಕೆಲ ಮೆಜೇಜ್ಗಳನ್ನ ಹಂಚಿಕೊಂಡಿದ್ರು. ಈ ಘಟನೆ ತೀವ್ರಗೊಳ್ತಿದ್ದಂತೆ ನಟಿ ರಮ್ಯಾ, ನ್ಯೂಸ್ಫಸ್ಟ್ ಜೊತೆ ಎಕ್ಸ್ಕ್ಲೂಸಿವ್ ಆಗಿ ಮಾತ್ನಾಡಿದ್ದಾರೆ.
ರಮ್ಯಾ ಆಕ್ರೋಶ ಏನು..?
ನನಗೆ ಮಾತ್ರವಲ್ಲ, ಈ ಥರದ ಮೆಸೇಜ್ ಕಳಿಸಿರೋದು ಮುಂಚೆಯಿಂದನೇ ಸುದೀಪ್ ಆಗಲಿ, ಯಶ್ ಆಗಲಿ ಅವರ ಪತ್ನಿಯರಾಗಲಿ ಚಿಕ್ಕ ಮಕ್ಕಳನ್ನೂ ಬಿಟ್ಟಿಲ್ಲ ಇವ್ರು ಅಂತ ಕೆಂಡ ಕಾರೋದಕ್ಕೆ ಶುರು ಮಾಡಿದ್ದಾರೆ.
ಮೊನ್ನೆ ಸುಪ್ರೀಂ ಕೋರ್ಟ್ ಹೇಳಿಕೆ ಬೆನ್ನಲ್ಲೇ ನಾನೊಂದು ಪೋಸ್ಟ್ ಮಾಡಿದ್ದೆ. ಅದಾದ ಬೆನ್ನಲ್ಲೇ ನನಗೆ ಅಶ್ಲೀಲ ಮೆಸೇಜ್ ಕಳುಹಿಸಲು ಶುರು ಮಾಡಿದ್ದಾರೆ. ಅದನ್ನೆಲ್ಲ ನಾನು ಪೋಸ್ಟ್ ಮಾಡಿದ್ದೀನಿ. ಕಾರಣ ಇಷ್ಟೇ ಇವರುಗಳನ್ನು ನಾನು ಎಕ್ಸ್ಪೋಸ್ ಮಾಡೋದಕ್ಕೆ. ಇವರಿಗೂ.. ರೇಣುಕಾಸ್ವಾಮಿ ಕಳಿಸಿರೋ ಮೆಸೇಜ್ಗೂ ಏನ್ ವ್ಯತ್ಯಾಸ ಇದೆ ಹೇಳಿ ಅಂತ ಪ್ರಶ್ನೆ ಮಾಡ್ತಾ.. ಇಂಥವರಿಂದಲೇ ನಮ್ಮ ಸಮಾಜ ಹಾಳಾಗ್ತಿರೋದು. ಇವ್ರರಿಗೆ ಸೌಜನ್ಯ ಕೇಸ್ನಲ್ಲಿ ನ್ಯಾಯಬೇಕಂತೆ.. ಎಂಥ ಜೋಕ್ ನೋಡಿ..
ದರ್ಶನ್ ಫ್ಯಾನ್ಸ್ ಅನ್ನ ಸಮಾಜ ಘಾತುಕರು ಅಂತ ಮುಂದುವರೆಸಿ.. ಮಾತಾಡಲೇಬೇಕು. ಯಾಕೆಂದರೆ ನಾವು ಅಂಥ ಸಮಾಜದಲ್ಲಿ ಇದ್ದೇವೆ. ಇಂಡಸ್ಟ್ರಿಯಲ್ಲಿ ಯಾರ್ ಮಾತಾಡುತ್ತಿದ್ದಾರೆ. ಈಗ ನಾವು ಮಾತನಾಡದೇ ಹೋದರೆ ಹೆಣ್ಮಕ್ಕಳ ಜೀವನದ ಬಗ್ಗೆ ನೀವು ಯೋಚನೆ ಮಾಡಿ. ನಾವು ಹೆದರಿಕೊಂಡು ಕೂತರೆ ಏನಾಗುತ್ತದೆ. ನಾನಂತು ಯಾವ್ ನನ್ಮಗನಿಗೂ ನಾನು ಹೆದರಲ್ಲ. ಆದರೆ ಮಾತನಾಡಲೇಬೇಕು. ನಾನೊಬ್ಬ ಸಮಾಜಮುಖಿ, ನಟಿ. ನಮ್ಮನ್ನು ಟೀಕೆ ಮಾಡ್ತಾರೆ, ಟ್ರೋಲ್ ಮಾಡ್ತಾರೆ ಓಕೆ ಒಪ್ಪಿಕೊಳ್ಳೋಣ. ಆದರೆ ಬೇರೆ ಹೆಣ್ಮಕ್ಕಳ ಬಗ್ಗೆಯೂ ಹಾಗೆ ಮಾಡ್ತಾರೆ ಅಲ್ವಾ? ಅದಕ್ಕೆ ಏನು ಹೇಳೋಣ.
ಎಂಥ ಸಮಾಜದಲ್ಲಿ ಇದ್ದೀವಿ ಅಂದ್ರೆ, ತಪ್ಪು ಮಾಡೋರು ಇವತ್ತು ಯಾರೂ ಹೆದರಿಕೊಳ್ತಿಲ್ಲ. ತಪ್ಪು ಮಾಡದೇ ಇರೋರು ಹೆದರಿಕೊಂಡು ಕೂತ್ಕೊಂಡಿದ್ದಾರೆ. ಅವರು ಯಾವ ವಿಷಯದ ಬಗ್ಗೆಯೂ ಮಾತನ್ನಾಡುತ್ತಿಲ್ಲ. ಅಂದರೆ ನಾವು ಕಂಪ್ಲಿಸಿಟ್ ಅಲ್ವಾ? ನಮ್ಗೂ, ತಪ್ಪು ಮಾಡೋರಿಗೂ ಏನು ವ್ಯತ್ಯಾಸ ಇದೆ ಹೇಳಿ.. ಅವರ ಮನೆಯಲ್ಲೂ ಹೆಣ್ಮಕ್ಕಳು ಇದ್ದಾರಲ್ವಾ..? ಅವರಿಗೂನು ತಾಯಿ.. ತಂಗಿ.. ಅಕ್ಕ.. ಹೆಂಡ್ತಿ ಯಾರೋ ಒಬ್ರು ಇದ್ದೇ ಇರ್ತಾರಲ್ವಾ? ನನಗೆ ಬೇಸರ ಆಗಿರುತ್ತದೆ. ಅವ್ರನ್ನ ಹಿಂಗೇನಾ ಬೆಳೆಸಿರೋದು ಅವರ ಅಪ್ಪ, ಅಮ್ಮ ಅಂತ ಕಿಡಿಕಾರಿದ್ದಾರೆ.
ಏನ್ಮಾಡ್ತಾರೆ.. ರೇ*ಪ್ ಮಾಡ್ತಾರಾ.. ಮ*ರ್ಡರ್ ಮಾಡ್ತಾರಾ.. ಕಾಲು ಕೈ ಮುರಿತಾರಾ.. ವ್ಯಕ್ತಿತ್ವಕ್ಕೆ ಮಸಿ ಬಳೀತಾರಾ..? ಅದಕ್ಕೆಲ್ಲ ನಾವ್ ಹೆದರಿಕೊಂಡು ಇದ್ರೆ, ಆಮೇಲೆ, who's going to fight.. ದಟ್ ಈಸ್ ಮೈ ಕ್ವಶ್ಚನ್.. ಇಂಥವರನ್ನೆಲ್ಲ ನಾವ್ ಸುಮ್ನೆ ಫ್ರೀಯಾಗಿ ಓಡಾಡೋಕೆ ನಾವ್ ಬಿಡಬೇಕಾ? ಮಾಡ್ತಾರೆ ಮಾಡ್ಲಿ.
ರಮ್ಯಾ, ನಟಿ
ದರ್ಶನ್ ಅಭಿಮಾನಿಗಳ ವಿರುದ್ಧ ಸಿಡಿದೆದ್ದ ನಟಿ ರಮ್ಯಾ, ತಮಗೆ ಅವಮಾನಿಸಿದವರ ಕುರಿತು ಕಾನೂನಾತ್ಮಕವಾಗಿ ಪಾಠ ಕಲಿಸಲು ಮುಂದಾಗ್ತಿದ್ದಾರೆ. ಸೈಬರ್ ಕ್ರೈಂ ಪೊಲೀಸ್ ಸ್ಟೇಷನ್ಗೆ ದೂರು ನೀಡಲು ನಿರ್ಧಾರ ಮಾಡಿದ್ದಾರೆ. ಇಂದು ದೂರು ಸಲ್ಲಿಸಲು ತೀರ್ಮಾನಿಸಿರೋದಾಗಿ ನಟಿ ರಮ್ಯಾ ನ್ಯೂಸ್ಫಸ್ಟ್ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ರಮ್ಯಾ ಆಕ್ರೋಶಕ್ಕೆ ನಟಿ ರಕ್ಷಿತಾ ಕೌಂಟರ್? ದರ್ಶನ್ ಫ್ಯಾನ್ಸ್ ವಾರ್ಗೆ ಹೊಸ ಟ್ವಿಸ್ಟ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ