’ಮಿಸ್​ ಯೂ ಅಪ್ಪು‘ ಎನ್ನುತ್ತಲೇ ಭಾವುಕರಾದ ನಟಿ ರಮ್ಯಾ; ಪುನೀತ್​ ರಾಜ್​ಕುಮಾರ್ ಬಗ್ಗೆ ಏನಂದ್ರು?​

author-image
Veena Gangani
Updated On
’ಮಿಸ್​ ಯೂ ಅಪ್ಪು‘ ಎನ್ನುತ್ತಲೇ ಭಾವುಕರಾದ ನಟಿ ರಮ್ಯಾ; ಪುನೀತ್​ ರಾಜ್​ಕುಮಾರ್ ಬಗ್ಗೆ ಏನಂದ್ರು?​
Advertisment
  • ಅಭಿಮಾನಿಗಳ ಕ್ರೇಜ್ ನೋಡಿ ನನಗೆ ನಿಜಕ್ಕೂ ಶಾಕ್ ಆಗಿದೆ!
  • ಫ್ಯಾನ್ಸ್​ ಜೊತೆಗೆ ಕುಳಿತು ಅಪ್ಪು ಸಿನಿಮಾ ನೋಡಿದ ನಟಿ ರಮ್ಯಾ
  • ಅಪ್ಪುನ ತುಂಬಾ ಮಿಸ್ ಮಾಡಿಕೊಳ್ತಿದ್ದೇನೆ ಎಂದ ಮೋಹಕ ತಾರೆ

ಸ್ಯಾಂಡಲ್​ವುಡ್​ ಸ್ಟಾರ್​ ನಟಿ ರಮ್ಯಾ ಅವರು ಇಂದು ಅಭಿಮಾನಿಗಳ ಜೊತೆಗೆ ಕುಳಿತುಕೊಂಡು ಅಪ್ಪು ಸಿನಿಮಾ ವೀಕ್ಷಿಸಿ ಖುಷಿಪಟ್ಟಿದ್ದಾರೆ. ಹೌದು, ಸುಮಾರು 23 ವರ್ಷಗಳ ಬಳಿಕ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅವರು ನಾಯಕ ನಟನಾಗಿ ಅಭಿನಯಿಸಿದ ಮೊಟ್ಟ ಮೊದಲ ಸಿನಿಮಾ ರೀ ರಿಲೀಸ್​ ಆಗಿದೆ.

ಇದನ್ನೂ ಓದಿ:ಥಿಯೇಟರ್​ನಲ್ಲಿ ‘ಅಪ್ಪು’ ಸಿನಿಮಾ ನೋಡಿ ಖುಷಿಪಟ್ಟ ಮೋಹಕ ತಾರೆ ರಮ್ಯಾ; ಹೇಳಿದ್ದೇನು?

publive-image

ಮಾರ್ಚ್​ 17ರಂದು ನಟ ಪುನೀತ್​ ರಾಜ್​ಕುಮಾರ್​ ಅವರಿಗೆ 50ನೇ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿಯೇ ಕರ್ನಾಟಕ ರತ್ನ ಪುನೀತ್ ಅವರನ್ನು ಸ್ಮರಿಸಲು ನಿನ್ನೆ ರಾಜ್ಯಾದ್ಯಂತ ಪುನೀತ್​ ರಾಜ್​ಕುಮಾರ್​ ಅವರ ಅಪ್ಪು ಸಿನಿಮಾ ಮರು ಬಿಡುಗಡೆ ಮಾಡಲಾಗಿತ್ತು. ಹೀಗಾಗಿ ಅಭಿಮಾನಿಗಳು ನೆಚ್ಚಿನ ನಟನ ಸಿನಿಮಾವನ್ನು ನೋಡಲು ಕ್ಕಿಕ್ಕಿರಿದು ಚಿತ್ರಮಂದಿರಕ್ಕೆ ಬಂದಿದ್ದರು. ವಿಶೇಷ ಎಂದರೆ ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ದಿನವೇ ಅಪ್ಪು ಸಿನಿಮಾ ರೀ-ರಿಲೀಸ್ ಆಗಿದ್ದು.

publive-image

ಹೀಗಾಗಿ ನಿನ್ನೆ ಬೆಂಗಳೂರಿನ ವೀರೇಶ್ ಚಿತ್ರಮಂದಿರಕ್ಕೆ ನಟಿ ರಕ್ಷಿತಾ ಪ್ರೇಮ್ (ಅಪ್ಪು ಚಿತ್ರದ ನಾಯಕಿ) ಆಗಮಿಸಿದ್ದರು. ಇಂದು ಮೋಹಕತಾರೆ ರಮ್ಯಾ ಅವರು ವೀರೇಶ್ ಚಿತ್ರಮಂದಿರಕ್ಕೆ ಆಗಮಿಸಿ ಸಿನಿಮಾ ವೀಕ್ಷಿಸಿ ಖುಷಿ ಪಟ್ಟಿದ್ದಾರೆ. ಇದೇ ವೇಳೆ ಅಪ್ಪು ಸಿನಿಮಾ ಹಾಗೂ ಪುನೀತ್​ ರಾಜ್​ಕುಮಾರ್ ಅವರ ಬಗ್ಗೆ ಮಾತಾಡಿದ್ದಾರೆ.

ಅಪ್ಪು ಸಿನಿಮಾ ವೀಕ್ಷಿಸಿದ ಬಳಿಕ ನ್ಯೂಸ್​ಫಸ್ಟ್​ನೊಂದಿಗೆ ಮಾತಾಡಿದ ನಟಿ ರಮ್ಯಾ 23 ವರ್ಷಗಳ ಹಿಂದೆ ನಾನು ಅಪ್ಪು ಸಿನಿಮಾ ನೋಡಿದಾಗ ಇದ್ದ ಕ್ರೇಜ್ ಈಗಲೂ ಹಾಗೇ ಇದೆ. ನನಗೆ ಈಗಲೂ ನೆನಪಿದೆ ತಾಲಿಬಾನ್ ಅಲ್ಲ ಅಲ್ಲ ಸಾಂಗ್ ಬಂದಾಗ ಫ್ಯಾನ್ಸ್ ಸ್ಕ್ರೀನ್ ಮುಂದೆ ಡ್ಯಾನ್ಸ್​ ಮಾಡುತ್ತಿದ್ದರು. ಈಗಲೂ ಕೂಡ ಸೇಮ್​ ಹಾಗೇ ಇತ್ತು. ನನಗೆ ಗೊತ್ತಾಗುತ್ತಿಲ್ಲ 23 ವರ್ಷದ ಹಿಂದೆ ಇದೀನಿ ಅಥವಾ 2025ರಲ್ಲಿ ಇದೀನಾ ಅಂತ. ನನಗೆ ಅಭಿಮಾನಿಗಳ ಜೊತೆಗೆ ಕುಳಿತುಕೊಂಡು ಸಿನಿಮಾ ನೋಡಿದ್ದು ಬಹಳ ಖುಷಿ ಕೊಟ್ಟಿದೆ. ಫ್ಯಾನ್ಸ್​ಗಳಲ್ಲಿ ಇರೋ ಒಂದು ಎನರ್ಜಿ, ಅವರು ತೋರಿಸುವಂತಹ ಪ್ರೀತಿ ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತದೆ. ಅಭಿಮಾನಿಗಳ ಕ್ರೇಜ್ ನೋಡಿ ನನಗೆ ನಿಜಕ್ಕೂ ಶಾಕ್ ಆಯ್ತು. ಆದ್ರೆ ಅಪ್ಪುನ ತುಂಬಾ ಮಿಸ್ ಮಾಡಿಕೊಳ್ತಿದ್ದೇನೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment