ದರ್ಶನ್‌ ಫ್ಯಾನ್ಸ್ ವಿರುದ್ಧ ಮತ್ತೆ ಸಿಡಿದೆದ್ದ ರಮ್ಯಾ; ಎಲ್ಲದಕ್ಕೂ ಸಾಕ್ಷಿ ಬಿಚ್ಚಿಟ್ಟ ಸ್ಟಾರ್ ನಟಿ.. ಹೇಳಿದ್ದೇನು?

author-image
Veena Gangani
Updated On
ದರ್ಶನ್‌ ಫ್ಯಾನ್ಸ್ ವಿರುದ್ಧ ಮತ್ತೆ ಸಿಡಿದೆದ್ದ ರಮ್ಯಾ; ಎಲ್ಲದಕ್ಕೂ  ಸಾಕ್ಷಿ ಬಿಚ್ಚಿಟ್ಟ ಸ್ಟಾರ್ ನಟಿ.. ಹೇಳಿದ್ದೇನು?
Advertisment
  • ದರ್ಶನ್‌ ಫ್ಯಾನ್ಸ್‌ನ ರೇಣುಕಾಸ್ವಾಮಿಗೆ ಹೋಲಿಸಿದ ರಮ್ಯಾ
  • ‘ಫ್ಯಾನ್ಸ್‌ ಮೆಸೇಜ್‌ಗೂ, ಸ್ವಾಮಿ ಮೆಸೇಜ್‌ಗೂ ವ್ಯತ್ಯಾಸವಿಲ್ಲ’
  • ಟ್ರೋಲ್‌ಗಳಿಂದಲೇ ಹೆಣ್ಮಕ್ಕಳ ಮೇಲೆ ದೌರ್ಜನ್ಯ ನಡೀತಿವೆ!

ಸ್ಯಾಂಡಲ್​ವುಡ್​ ಸ್ಟಾರ್​ ನಟಿ ರಮ್ಯಾ ಕೆಟ್ಟ ಕೆಟ್ಟ ಮೆಸೇಜ್ ಮಾಡುವವರ ವಿರುದ್ಧ ಸಿಡಿದೆದ್ದಿದ್ದಾರೆ. ನಿನ್ನೆ ನಟಿ ರಮ್ಯಾ ಅವರು ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಎಲ್ಲಾ ಡಿಬಾಸ್ ಅಭಿಮಾನಿಗಳಿಗೆ ನನ್ನ ಇನ್​ಸ್ಟಾಗ್ರಾಂಗೆ ಸ್ವಾಗತ. ರೇಣುಕಾಸ್ವಾಮಿ ಅವರ ಕುಟುಂಬಕ್ಕೆ ಯಾಕೆ ನ್ಯಾಯ ಸಿಗಬೇಕು ಅನ್ನೋದಕ್ಕೇ ನಿಮ್ಮ ಕಾಮೆಂಟ್ಸ್‌ಗಳೇ ಸಾಕ್ಷಿ ಎಂದು ಪೋಸ್ಟ್​ ಹಾಕಿದ್ದರು.

ಇದನ್ನೂ ಓದಿ:ತಪ್ಪಿದ ಭಾರೀ ಅನಾಹುತ.. 173 ಪ್ರಯಾಣಿಕರಿದ್ದ ವಿಮಾನದಲ್ಲಿ ಬೆಂಕಿ -ಮುಂದೆ ಏನಾಯ್ತು..?

publive-image

ಇದೀಗ ನಟಿ ರಮ್ಯಾ ಅವರು ಕೆಟ್ಟ ಕೆಟ್ಟದಾಗಿ ಕಾಮೆಂಟ್ಸ್​ ಮಾಡಿದ ಕೆಲವು ಪ್ರೊಫೈಲ್​ಗಳಿಂದ ಬಂದ ಮೆಸೇಜ್​ಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇದೀಗ ನಟಿ ರಮ್ಯಾ ಮತ್ತೊಂದು ಪೋಸ್ಟ್ ಶೇರ್ ಮಾಡಿದ್ದಾರೆ. ಅದರಲ್ಲಿ ಫ್ಯಾನ್ಸ್‌ ಮೆಸೇಜ್‌ಗೂ, ಸ್ವಾಮಿ ಮೆಸೇಜ್‌ಗೂ ವ್ಯತ್ಯಾಸವಿಲ್ಲ. ಇಂಥಾ ಟ್ರೋಲ್‌ಗಳಿಂದಲೇ ಹೆಣ್ಮಕ್ಕಳ ಮೇಲೆ ದೌರ್ಜನ್ಯ ನಡೀತಿರೋದು. ಈ ಮೈಂಡ್ ‌ಸೆಟ್‌ನಿಂದಲೇ ರೇ*ಪ್‌ ಮತ್ತು ಮ*ರ್ಡರ್ ಆಗ್ತಿರೋದು ಎಂದಿದ್ದಾರೆ.  ಇದರ ಜೊತೆಗೆ ನಟಿ ರಮ್ಯಾ ಅವರಿಗೆ ಬಂದ ಮೆಸೇಜ್​ಗಳ ಸ್ಕ್ರೀನ್​ ಶಾಟ್ಸ್​ಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅದಕ್ಕೆಲ್ಲಾ ಈ ಕಾಮೆಂಟ್ಸ್​ಗಳೇ ಸಾಕ್ಷಿ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment