/newsfirstlive-kannada/media/post_attachments/wp-content/uploads/2025/03/ramya6.jpg)
ಸ್ಯಾಂಡಲ್‌ವುಡ್‌ನ ಮೋಹಕತಾರೆ ರಮ್ಯಾ ಅವರು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಪರ ಬ್ಯಾಟಿಂಗ್ ಮಾಡಿದ್ದಾರೆ. ರಶ್ಮಿಕಾ ಮಂದಣ್ಣಗೆ ಬುದ್ಧಿ ಕಲಿಸಬೇಕು ಎಂದ ಶಾಸಕ ರವಿ ಗಣಿಗ ಹೇಳಿಕೆಗೆ ತಿರುಗೇಟು ರಮ್ಯಾ ನೀಡಿದ್ದಾರೆ.
ಇದನ್ನೂ ಓದಿ:SSLC ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಲೀಕ್.. ಯಾವ್ಯಾವ ವಿಷಯ ಸೋರಿಕೆ ಆಗಿವೆ?
ಹೌದು, ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಬಗ್ಗೆ ಶಾಸಕ ಗಣಿಗ ರವಿ ಅವರು ಸಿನಿಮಾದವರು ಬಾಯಿಮುಚ್ಚಿಕೊಂಡು ಇರಬೇಕು. ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಸಿನಿಮಾದಿಂದ ಬೆಳೆದವರು. ಅವರನ್ನು ಕಳೆದ ವರ್ಷ ಚಲನಚಿತ್ರೋತ್ಸವಕ್ಕೆ ಆಹ್ವಾನ ಮಾಡಿದ್ವಿ. ಆದರೆ ನಾನು ಹೈದರಾಬಾದ್‌ನಲ್ಲಿ ಇರೋದು, ನನಗೆ ಟೈಂ ಇಲ್ಲ, ಬರಲ್ಲ ಎಂದು ಹೇಳಿದ್ದರು. ಇವರಿಗೆ ಬುದ್ದಿ ಕಲಿಸಬೇಕಲ್ವಾ? ಎಂದು ಕೆಂಡಕಾರಿದರು.
ಹಾಗಾಗಿ ಈ ವಿಚಾರಕ್ಕೆ ರಶ್ಮಿಕಾ ಮಂದಣ್ಣ ಪರ ನಟಿ ರಮ್ಯಾ ಮಾತನಾಡಿದ್ದಾರೆ. ಇಂದು ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಿದ್ದ ನಟಿ ರಮ್ಯಾ ಅವರು ರಶ್ಮಿಕಾನ ಟ್ರೋಲ್ ಮಾಡೋದನ್ನು ನಿಲ್ಲಿಸಿ. ಈ ಬೆಳವಣಿಗೆ ನಟಿಯರಲ್ಲಿ ಮಾನಸಿಕ ಖಿನ್ನತೆ ಉಂಟು ಮಾಡಿಸುತ್ತೆ. ಅಷ್ಟು ಟ್ರೋಲಿಂಗ್ ಸರಿಯಲ್ಲ ಎಂದಿದ್ದಾರೆ.
ರಶ್ಮಿಕಾ ಮಂದಣ್ಣ ಮೂಲತಃ ಕನ್ನಡದವರು. ಆದರೆ ಅವರಿಗೆ ಕನ್ನಡದ ಮೇಲೆ ಅಭಿಮಾನ ಇಲ್ಲ. ಕನ್ನಡವನ್ನು, ಕನ್ನಡ ಕಲಾವಿದರನ್ನು ತಾತ್ಸಾರ ಮನೋಭಾವದಿಂದ ನೋಡ್ತಾರೆ ಅನ್ನೋದು ಹಲವು ಸಿನಿ ಪ್ರೇಮಿಗಳ ಆರೋಪ. ಕನ್ನಡದ ವಿಚಾರಕ್ಕಾಗಿಯೇ ರಶ್ಮಿಕಾರನ್ನು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗ್ತಿರ್ತಾರೆ. ರಶ್ಮಿಕಾರನ್ನು ಮನಸೋ ಇಚ್ಛೆ ಟ್ರೋಲ್ ಮಾಡ್ತಿರೋದನ್ನು ಅವರ ಅಭಿಮಾನಿಗಳು ಖಂಡಿಸುತ್ತಿರುತ್ತಾರೆ. ರಶ್ಮಿಕಾ ಕೂಡ ಓರ್ವ ಹೆಣ್ಣು ಮಗಳು. ಯಾರನ್ನೂ ಕೂಡ ಅಮಾನವೀಯವಾಗಿ ಟ್ರೋಲ್ ಮಾಡಬಾರದೆಂದು ಅನ್ನೋದು ಅನೇಕರ ವಾದ. ಇದೀಗ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಪರ ಫಿಲ್ಮ್ ಫೆಸ್ಟಿವಲ್ ನಲ್ಲಿ ಬ್ಯಾಟ್ ಬೀಸಿದ್ದಾರೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ