/newsfirstlive-kannada/media/post_attachments/wp-content/uploads/2025/07/RAMYA_DARSHAN.jpg)
ಬೆಂಗಳೂರು: ನಟ ದರ್ಶನ್ ಫ್ಯಾನ್ಸ್ ವಿರುದ್ಧ ಮತ್ತೆ ಸಿಡಿದೆದ್ದಿರುವ ನಟಿ ರಮ್ಯಾ ಅವರು ದರ್ಶನ್ ಫ್ಯಾನ್ಸ್‌ನ ರೇಣುಕಾಸ್ವಾಮಿಗೆ ಹೋಲಿಸಿದ್ದಾರೆ. ಫ್ಯಾನ್ಸ್ ಮೆಸೇಜ್‌ಗೂ, ರೇಣುಕಾಸ್ವಾಮಿ ಮೆಸೇಜ್‌ಗೂ ವ್ಯತ್ಯಾಸವಿಲ್ಲ ಎಂದು ಹೇಳಿದ್ದಾರೆ.
ನ್ಯೂಸ್​ಫಸ್ಟ್​ ಜೊತೆ ಮಾತನಾಡಿದ ರಮ್ಯಾ ಅವರು, ಸುಪ್ರೀಂಕೋರ್ಟ್​ ಕೊಟ್ಟ ಆದೇಶದ ಮೇಲೆ ಪೋಸ್ಟ್ ಮಾಡಿದ ಮೇಲೆ ಇವರೆಲ್ಲಾ ಕಮೆಂಟ್ಸ್​ ಮಾಡಲು ಶುರು ಮಾಡಿದರು. ಅದನ್ನೆಲ್ಲ ನಾನು ಪೋಸ್ಟ್ ಮಾಡಿದ್ದೇನೆ. ಇವರಿಗೂ ಹಾಗೂ ರೇಣುಕಾಸ್ವಾಮಿ ಕಳಿಸಿದ ಮೆಸೇಜ್​​ಗೂ ಏನು ವ್ಯತ್ಯಾಸ ಇದೆ?. ಇಂಥವರಿಂದಲೇ ನಮ್ಮ ಸಮಾಜ ಹಾಳಾಗುತ್ತಿದೆ. ಹೆಣ್ಮಕ್ಕಳಿಗೆ ಈ ರೀತಿ ಮೆಸೇಜ್ ಮಾಡೋರಿಗೆ ಸೌಜನ್ಯ ಕೇಸ್​ನಲ್ಲಿ ನ್ಯಾಯ ಬೇಕು ಅಂತಾರೆ ಎಂಥಾ ಜೋಕ್ ನೋಡ್ರಿ. ಇಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲವೇ ಇಲ್ಲ ಎಂದು ಹೇಳಿದ್ದಾರೆ.
ಇಂಥವರಿಂದಲೇ ಮಹಿಳೆಯರ ಮೇಲೆ ಕಿರುಕುಳ, ಅತ್ಯಾಚಾರ, ಮರ್ಡರ್ ಆಗುತ್ತಿವೆ. ಇಂಡಸ್ಟ್ರಿಯಲ್ಲಿ ಯಾರು ಮಾತನಾಡುತ್ತಿದ್ದಾರೆ. ಯಾರು ಮಾತನಾಡಲ್ಲ. ನಾವು ಅಂತಹ ಸಮಾಜದಲ್ಲಿ ಇದ್ದೇವೆ. ನಾವು ಮಾತನಾಡದೇ ಹೋದರೆ ಏನ್ ಆಗುತ್ತೆ. ನಾವು ಹೆದರಿಕೊಂಡು ಕುಳಿತುಕೊಂಡರೇ ಇನ್ನೇನು ಆಗುತ್ತೆ?. ನಾನಂತೂ ಯಾವ ನನ್ಮಗನಿಗೂ ಹೆದರಲ್ಲ. ಇಂಥವರನ್ನ ಬಿಟ್ಟರೇ ಮುಂದಿನ ಸಮಾಜ, ದೇಶ ಹೇಗಿರುತ್ತೆ ಎಂದು ರಮ್ಯಾ ಅವರು ಪ್ರಶ್ನೆ ಮಾಡಿದ್ದಾರೆ.
ನಮಗೆ ಹಿಂಗೇ ಮಾಡ್ತಾರೆ ಅಂದರೆ ಸಾಮಾನ್ಯ ಮಹಿಳೆಯರ ಬಗ್ಗೆ ಯೋಚನೆ ಮಾಡಿ. ಕನ್ನಡ ಇಂಡಸ್ಟ್ರಿಯ ನಟರ ಮಕ್ಕಳಿಗೂ ಕೆಟ್ಟ ಕೆಟ್ಟದಾಗಿ ಕಮೆಂಟ್ಸ್​ ಮಾಡಿದ್ದಾರೆ. ಈ ಬಗ್ಗೆ 2 ವರ್ಷದ ಹಿಂದೆ ಪೋಸ್ಟ್ ಮಾಡಿದ್ದೆ. ಫ್ಯಾನ್ ವಾರ್​ ಇರೋದು ಓಕೆ. ಆದರೆ ಈ ರೀತಿ ಮಾಡೋದಾ?. ಇವತ್ತು ತಪ್ಪು ಮಾಡೋರು ಯಾರು ಹೆದರುತ್ತಿಲ್ಲ. ತಪ್ಪು ಮಾಡಿರುವರು ಹೆದರಿಕೊಂಡು ಕುಳಿತುಕೊಂಡಿದ್ದಾರೆ. ಯಾವ ವಿಷ್ಯದ ಬಗ್ಗೆನೂ ಮಾತನಾಡುತ್ತಿಲ್ಲ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ