newsfirstkannada.com

ದರ್ಶನ್, ಪ್ರಜ್ವಲ್​ ಕುರಿತು ಮತ್ತೊಂದು ಟ್ವಿಟ್ ಮಾಡಿದ ನಟಿ ರಮ್ಯಾ.. ಈ ಸಲ ಏನಂದ್ರು?

Share :

Published June 22, 2024 at 12:03pm

  ಒಂದರ ಮೇಲೊಂದರಂತೆ ಹೊರ ಬರುತ್ತಿರುವ ರಾಜ್ಯದ ಸುದ್ದಿಗಳು

  ಸ್ಯಾಂಡಲ್​ವುಡ್​ ನಟಿ ರಮ್ಯಾ ಅವರು ಪೊಲೀಸರಿಗೆ ಏನಂದ್ರು?

  ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ರಮ್ಯಾ ಬೇಸರ

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡುತ್ತಿವೆ. ಇದರಿಂದ ಎಲ್ಲರು ಕರ್ನಾಟಕದ ಕಡೆ ಕೈ ಮಾಡಿ ತೋರಿಸುವಂತೆ ಆಗಿದೆ. ರಾಜಕಾರಣಿ ಹೆಚ್​.ಡಿ ರೇವಣ್ಣ, ಪ್ರಜ್ವಲ್​ ರೇವಣ್ಣ, ಸೂರಜ್ ರೇವಣ್ಣ ಹಾಗೂ ನಟ ದರ್ಶನ್ ಪ್ರಕರಣಗಳ ಸುದ್ದಿಗಳು ಇತ್ತೀಚಿನ ದಿನಗಳಲ್ಲಿ ಜನರನ್ನು ಹೆಚ್ಚು ಹೆಚ್ಚು ತಲುಪಿವೆ. ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಸ್ಯಾಂಡಲ್​ವುಡ್​ ನಟಿ ರಮ್ಯಾ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹಾಡಹಗಲೇ ಕಾರಿನಲ್ಲಿ ಮಹಿಳೆಯನ್ನು ಎಳೆದೊಯ್ದ ಪಾಪಿಗಳು.. ಗಂಡನ ಕಡೆಯವರಿಂದ ನಡೀತಾ ಕೃತ್ಯ? 

ಈ ಸಂಬಂಧ ತಮ್ಮ ಅಧಿಕೃತ ಎಕ್ಸ್​ ಅಕೌಂಟ್​ನಲ್ಲಿ ಪೋಸ್ಟ್​ ಶೇರ್ ಮಾಡಿ ಬೇಸರ ವ್ಯಕ್ತಪಡಿಸಿರುವ ರಮ್ಯಾ ಅವರು, ಹಣವಂತರು ಹಾಗೂ ಬಲವಂತರು ಇಂದು ಸುದ್ದಿಯಲ್ಲಿದ್ದು ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ. ಇವರ ಕ್ರೌರ್ಯವನ್ನ ಕರ್ನಾಟಕದ ಸಾಮಾನ್ಯ ಜನರು, ಬಡವರು, ಮಹಿಳೆಯರು ಮತ್ತು ಮಕ್ಕಳು ಎದುರಿಸುತ್ತಿದ್ದಾರೆ. ಇಂತಹ ಹೀನ ಕೃತ್ಯಗಳನ್ನ ಬಯಲಿಗೆಳೆದ ಪೊಲೀಸರು ಹಾಗೂ ಮಾಧ್ಯಮಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ಹೆಂಡತಿಯನ್ನ ಕಟ್ಟಿ ಹಾಕಿ, ಗಂಡನಿಗೆ ಚೂರಿ ಇರಿತ​.. ಮನೆಯಲ್ಲಿದ್ದ ಹಣ, ಚಿನ್ನಾಭರಣ ದೋಚಿದ ಗ್ಯಾಂಗ್

ಕೃತ್ಯಗಳನ್ನ ಶೀಘ್ರ ವಿಚಾರಣೆ ನಡೆಸಿ, ಪ್ರಕರಣವನ್ನ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಾಗ ಮಾತ್ರ ನಿಜವಾಗಿಯೂ ಜನರಿಗೆ ನ್ಯಾಯ ಸಿಕ್ಕಂತೆ ಆಗುತ್ತದೆ. ಒಂದು ವೇಳೆ ನ್ಯಾಯ ಸಿಗದೆ ಇದ್ದರೆ ಜನರಿಗೆ ನಾವು ಯಾವ ಸಂದೇಶ ನೀಡಿದಂತಾಗುತ್ತೆ ಎಂದು ನಟಿ ರಮ್ಯಾ ಅವರು ಪ್ರಶ್ನೆ ಮಾಡಿದ್ದಾರೆ. ಸದ್ಯ ಇವರು ಮಾಡಿದ ಎಕ್ಸ್ ಪೋಸ್ಟ್​​ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ನೆಟ್ಟಿಗರು ಕಮೆಂಟ್ಸ್​ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್, ಪ್ರಜ್ವಲ್​ ಕುರಿತು ಮತ್ತೊಂದು ಟ್ವಿಟ್ ಮಾಡಿದ ನಟಿ ರಮ್ಯಾ.. ಈ ಸಲ ಏನಂದ್ರು?

https://newsfirstlive.com/wp-content/uploads/2024/06/RAMYA_DARSHAN.jpg

Load More