/newsfirstlive-kannada/media/post_attachments/wp-content/uploads/2025/03/ramya2.jpg)
ವಿಶ್ವ ವಿಖ್ಯಾತ ಮೈಸೂರು ದಸರಾದಂತೆ ಈ ವರ್ಷವು ಕೂಡ ಅದ್ಧೂರಿಯಾಗಿ ಹಂಪಿ ಉತ್ಸವ ನಡೆದಿದೆ. ಹಂಪಿ ಉತ್ಸವದ ಕೊನೆಯ ದಿನವಾದ ನಿನ್ನೆ ಅಂದರೆ ಭಾನುವಾರ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಅವರು ಆಗಮಿಸಿದ್ದರು.
ಗೋಲ್ಡನ್ ಕಲರ್ ಸೀರೆಯಲ್ಲಿ ವೇದಿಕೆಗೆ ಎಂಟ್ರಿ ಕೊಟ್ಟ ನಟಿ ರಮ್ಯಾ ಅವರನ್ನು ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ವಿಶೇಷ ಎಂದರೆ ನಟಿ ರಮ್ಯಾ ಅವರನ್ನು ನೇರವಾಗಿ ನೋಡಿ ಖುಷಿ ಪಟ್ಟಿದ್ದಾರೆ. ಇದೇ ವೇಳೆ ನಟಿ ರಮ್ಯಾ ವೇದಿಕೆ ಮೇಲೆ ನೀನೇ ನೀನೇ ನನಗೆಲ್ಲಾ ನೀನೇ ಹಾಡನ್ನು ಹಾಡಿದ್ದಾರೆ.
ಇದನ್ನೂ ಓದಿ:ಕನ್ನಡ ಸಿನಿಮಾ ಸ್ಟಾರ್ಸ್ಗೆ ಡಿಸಿಎಂ ವಾರ್ನಿಂಗ್; ನಟಿ ರಮ್ಯಾ ಏನಂದ್ರು?
ಇದಾದ ಬಳಿಕ ನಟಿ ರಮ್ಯಾ ಅವರು ಅಭಿಮಾನಿಗಳಿಗೆ ಫೋಟೋ ನೀಡುತ್ತಿದ್ದರು. ಆಗ ವಿಶೇಷ ಚೇತನ ಅಭಿಮಾನಿ ನಟಿ ರಮ್ಯಾ ಅವರ ಬಳಿ ಓಡೋಡಿ ಬಂದಿದ್ದಾರೆ. ರಮ್ಯಾ ಅವರನ್ನು ನೋಡುತ್ತಿದ್ದಂತೆ ವಿಶೇಷ ಚೇತನ ಅಭಿಮಾನಿ ಫುಲ್ ಖುಷಿಯಲ್ಲಿ ಭಾವುಕರಾಗಿದ್ದಾರೆ.
View this post on Instagram
ಆಗ ಡ್ರಾಯಿಂಗ್ ಟೀಚರ್ ಆಗಿದ್ದ ವಿಶೇಷ ಚೇತನ ಅಭಿಮಾನಿ ರಾಜು ಅವರು, ನಿಮ್ಮನ್ನು ನೋಡಬೇಕು ಅಂತ ಎಷ್ಟೋ ವರ್ಷಗಳಿಂದ ಕಾಯುತ್ತಿದ್ದೆ. ನನ್ನ ಲೈಫ್ನಲ್ಲೇ ನಿಮ್ಮನ್ನು ನೋಡುತ್ತೇನೆ ಅಂತ ಅಂದುಕೊಂಡಿರಲಿಲ್ಲ. ನನಗೆ ತುಂಬಾ ಖುಷಿ ಆಗುತ್ತಿದೆ ಎಂದು ಹೇಳಿದ್ದಾರೆ. ಆಗ ಮತ್ತೆ ರಮ್ಯಾ ಅವರಿಗಾಗಿ ಸಂಜು ಮತ್ತು ಗೀತಾ ಸಾಂಗ್ ಹಾಡಿದ್ದಾರೆ. ಇನ್ನೂ ನಟಿ ರಮ್ಯಾ ಅವರ ಇದೇ ಗುಣವನ್ನು ನೋಡಿ ಅದೆಷ್ಟೋ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಇದೇ ವಿಚಾರದ ಬಗ್ಗೆ ಗುಣಗಾನ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ