/newsfirstlive-kannada/media/post_attachments/wp-content/uploads/2025/03/Actress-Ranya-Rao-Arrest-2.jpg)
ಕಿಚ್ಚ ಸುದೀಪ್ ಅಭಿನಯದ ಮಾಣಿಕ್ಯ, ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಪಟಾಕಿ ಸಿನಿಮಾದಲ್ಲಿ ಅಭಿನಯಿಸಿದ್ದ ನಟಿ ರನ್ಯಾ ರಾವ್ ಅವರನ್ನು ಬಂಧಿಸಲಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗೋಲ್ಡ್​ ಸ್ಮಗ್ಲಿಂಗ್ ಮಾಡುತ್ತಿದ್ದ ಆರೋಪದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಅಧಿಕಾರಿಗಳು ಮಿಂಚಿನ ಕಾರ್ಯಾಚರಣೆ ನಡೆಸಿ ರನ್ಯಾ ಅವರನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು ಅಂತಾರಾಷ್ಟ್ರೀಯ ಏರ್​ಪೋರ್ಟ್​ನಲ್ಲಿ ನಟಿ ರನ್ಯಾ ರಾವ್ ಒಂದಲ್ಲ.. ಎರಡಲ್ಲ.. ಬರೋಬ್ಬರಿ 14.8 ಕೆ.ಜಿ ಚಿನ್ನದೊಂದಿಗೆ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ. ನಿನ್ನೆ ರಾತ್ರಿ ದುಬೈನಿಂದ ಬೆಂಗಳೂರಿಗೆ ಬಂದಿದ್ದ ನಟಿಯನ್ನು ನಾಗವಾರದ ಡಿಆರ್​ಐ ಕಚೇರಿಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಲಾಗುತ್ತಿದೆ.
‘ರನ್ಯಾ’ ಚಿನ್ನದ ರಹಸ್ಯ ಏನು?
ರನ್ಯಾ ರಾವ್ ಅವರು ವ್ಯಾಪಾರದ ಉದ್ದೇಶಕ್ಕಾಗಿ ದುಬೈಗೆ ಹೋಗ್ತೀನಿ ಎಂದು ಹೇಳಿದ್ದರು. ದೆಹಲಿ ಡಿಆರ್​ಐ ಟೀಮ್​ಗೆ ಈ ಬಗ್ಗೆ ಖಚಿತವಾದ ಮಾಹಿತಿ ಇತ್ತು. ನಿನ್ನೆ ಆಕೆ ಬರೋದಕ್ಕೂ 2 ಗಂಟೆ ಮೊದಲೇ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಹಾಗೂ ಪೊಲೀಸರು ಅಲರ್ಟ್ ಆಗಿ ಕಾದು ಕುಳಿತಿದ್ದರು.
ದುಬೈನಿಂದ ಎಮಿರೈಟ್ಸ್ ಫ್ಲೈಟ್​ನಲ್ಲಿ ನಟಿ ರನ್ಯಾ ರಾವ್ KIAL ವಿಮಾನ ನಿಲ್ದಾಣಕ್ಕೆ ಬಂದರು. 14.8 ಕೆ.ಜಿ ಚಿನ್ನದೊಂದಿಗೆ ಏರ್​ಪೋರ್ಟ್​ಗೆ ಬಂದಿಳಿದ ನಟಿ ರನ್ಯಾ ತನ್ನ ದೇಹದ ಒಳಗೆ ಚಿನ್ನದ ಬಿಲ್ಲೆಗಳನ್ನ ಇಟ್ಟುಕೊಂಡು ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಮಾಣಿಕ್ಯ, ಪಟಾಕಿ ಸಿನಿಮಾ ನಟಿ ರನ್ಯಾ ರಾವ್ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ DRI ವಶಕ್ಕೆ; ಕಾರಣವೇನು?
ಬೆಂಗಳೂರಿನಲ್ಲಿ ನಟಿ ರನ್ಯಾ ರಾವ್ ಲ್ಯಾಂಡ್​ ಆಗ್ತಿದ್ದಂತೆ ನಿನ್ನೆ ಸಂಜೆ 7:30ರ ಸುಮಾರಿಗೆ ಏರ್​​ಪೋರ್ಟ್‌ನಲ್ಲಿ DRI ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇಂದು ವಿಚಾರಣೆಯ ಬಳಿಕ ನಟಿ ರನ್ಯಾ ರಾವ್ ಅವರನ್ನು CCH 82 ಕೋರ್ಟ್‌ಗೆ ಹಾಜರು ಪಡಿಸಲಾಗಿದೆ.
ರನ್ಯಾ ರಾವ್ ಲಾಕ್! ಮುಂದೇನು?
ವಿದೇಶದಿಂದ ಹೆಚ್ಚುವರಿ ಗೋಲ್ಡ್ ತಂದ ಆರೋಪದಲ್ಲಿ ನಟಿ ರನ್ಯಾ ರಾವ್ ಅವರ ವಿಚಾರಣೆ ಮಾಡಲಾಗುತ್ತಿದೆ. ವಿಚಾರಣೆ ನಡೆಸ್ತಿರೋ ಅಧಿಕಾರಿಗಳು ಚಿನ್ನಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು ಎನ್ನುತ್ತಿದೆ. ಒಂದು ವೇಳೆ ದಾಖಲೆ ಸಲ್ಲಿಸಲು ವಿಫಲರಾದ್ರೆ ಅಧಿಕಾರಿಗಳು ಆ ಚಿನ್ನವನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಾರೆ. ಅಷ್ಟೇ ಅಲ್ಲ ಚಿನ್ನದ ಪ್ರಮಾಣ ಹೆಚ್ಚು ಇರೋದ್ರಿಂದ ನಟಿಗೆ ಜೈಲು ಶಿಕ್ಷೆಯಾಗುವ ಅವಕಾಶ ಇದೆ.
‘ರನ್ಯಾ’ ರಾವ್ ಹಿನ್ನೆಲೆ ಏನು?
ರನ್ಯಾ ರಾವ್ ಮೂಲತಃ ಚಿಕ್ಕಮಗಳೂರು ಜಿಲ್ಲೆಯವರು
1991ರ ಮೇ 28ರಂದು ರನ್ಯಾ ರಾವ್ ಅವರ ಜನನ
IPS ಅಧಿಕಾರಿ ರಾಮಚಂದ್ರ ರಾವ್ ಪುತ್ರಿಯಾಗಿರೋ ರನ್ಯಾ
ರಾಮಚಂದ್ರ ರಾವ್ 2ನೇ ಪತ್ನಿ ಮೊದಲ ಗಂಡನ ಮಗಳು
ಬೆಂಗಳೂರಲ್ಲಿ ವಿದ್ಯಾಭ್ಯಾಸ ಮುಗಿಸಿರೋ ರನ್ಯಾ ರಾವ್
2014ರಿಂದ ಸ್ಯಾಂಡಲ್​ವುಡ್​ ಜೊತೆ ರನ್ಯಾ ರಾವ್ ನಂಟು
ಮಾಣಿಕ್ಯ ಚಿತ್ರದ ಮೂಲಕ ಚಂದನವನಕ್ಕೆ ರನ್ಯಾ ಎಂಟ್ರಿ
2016ರಲ್ಲಿ ತಮಿಳು ಚಿತ್ರ ವಾಘಾದಲ್ಲಿ ರನ್ಯಾ ರಾವ್ ನಟನೆ
2017ರಲ್ಲಿ ಗಣೇಶ್​ ನಟನೆಯ ಪಟಾಕಿ ಚಿತ್ರದಲ್ಲಿ ಅಭಿನಯ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ